Neer Dose Karnataka
Take a fresh look at your lifestyle.

ದೊಡ್ಡ ದೊಡ್ಡ ನಟಿಯರಿಗಿಂತ ರಶ್ಮಿಕಾ ಮಂದಣ್ಣ ಕೇವಲ 4 ವರ್ಷಗಳಲ್ಲಿ ಅದೇಗೆ ಅಷ್ಟೊಂದು ಶ್ರೀಮಂತರಾಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಟೀ ರಶ್ಮಿಕಾ ಮಂದಣ್ಣ, ಕನ್ನಡದ ಕಿರಿಕ್ ಪಾರ್ಟಿಯ ಸಾನ್ವಿಯಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ರು. ಅದ್ರೆ ಇವರು ನಾಯಕಿಯಾಗಿ ಹೆಚ್ಚು ಸದ್ದು ಮಾಡಿದ್ದು ಮಾತ್ರ ತೆಲಗು ಚಿತ್ರರಂಗದಲ್ಲಿ. ಟಾಲಿವುಡ್ ನಿಂದ ಈಗ ಬಾಲಿವುಡ್ ನಲ್ಲೂ ಮಿಂಚುತ್ತಿರುವ ರಶ್ಮಿಕಾ ವೃತ್ತಿ ಜೀವನ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಅತ್ಯಂತ ರಿಚ್ ನಟಿ ಅನ್ನಿಸಿಕೊಂಡಿದ್ದಾರೆ.

ಹೌದು ಬಹುಶಃ ಬೇರೆ ಯಾವ ನಟಿಯರೂ ಕೂಡ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಹೆಸರು ಹಣ ಸಂಪಾದಿಸಿಲ್ಲ. 2016ರಲ್ಲಿ ಕಿರಿಕ್ ಪಾರ್ಟಿಯಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ರಶ್ಮಿಕಾ, ಇದೀಗ ಕೇವಲ 4 ವರ್ಷಗಳಲ್ಲಿ ಯಾವುದೇ ಸ್ಟಾರ್ ನಟಿಯರಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಶ್ರೀಮಂತರಾಗಿದ್ದಾರೆ.

ಕೊಡಗಿನ ಬೆಡಗಿ ರಶ್ಮಿಕಾ, ತಮ್ಮ ಉತ್ತಮ ನಟನೆ, ಕ್ಯೂಟ್ ಸ್ಮೈಲ್ ನಿಂದ ಕೋಟಿ ಕೋಟಿ ಹೃದಯವನ್ನ ಗೆದ್ದಿದ್ದಾರೆ. ಇಂದು ದಕ್ಷಿಣ ಭಾರತದ ಅತೀ ಹೆಚ್ಚು ಸಂಭಾವನೆಪಡೆಯುವ ನಾಯಕಿಯರ ಲೀಸ್ಟ್ ನಲ್ಲಿ ರಶ್ಮಿಕಾ ಅವರ ಹೆಸರು ಮೊದಲಿನ ಸ್ಥಾನಕ್ಕೇರಿದೆ. ಹೌದು, ನಟಿ ರಶ್ಮಿಕಾ ಮಂದಣ್ಣ ಅವರನ್ನ ಈಗ ದೊಡ್ಡ ದೊಡ್ದ ಚಿತ್ರಗಳು ಅರಸಿಬರುತ್ತಿದ್ದು, ಚಿತ್ರವೊಂದಕ್ಕೆ 3-4 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ.

ಒಂದು ವರದಿಯ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಈಗ ಸುಮಾರು 30ಕೋಟಿ ಆಸ್ತಿಯ ಒಡತಿ. ಬೆಂಗಳೂರಿನಲ್ಲಿರುವ ಅವರ ಐಷಾರಾಮಿ ವಿಲ್ಲಾ/ ಬಂಗಲೆ ಸುಮಾರು 8 ಕೋಟಿ ಬೆಲೆಬಾಳುತ್ತೆ ಎಂದು ಹೇಳಲಾಗುತ್ತಿದೆ. ಜೊತೆಗೆ ಗೋವಾ ಹಾಗೂ ಹೈದ್ರಾಬಾದ್ ನಲ್ಲಿಯೂ ಕೋಟಿ ಬೆಲೆಬಾಳುವ ಬಂಗಲೆಯನ್ನು ಖರೀದಿಸಿದ್ದಾರೆ ರಶ್ಮಿಕಾ. ಅಗಾಗ ತಮ್ಮ ಗೋವಾ ಮನೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಅಲ್ಲದೇ ರಶ್ಮಿಕಾ ಐಷಾರಾಮಿಯಾದ ಕೋಟಿ ಬೆಲೆಬಾಳುವ ಕಾರ್ ಗಳನ್ನೂ ಕೂಡ ಹೊಂದಿದ್ದಾರೆ. 50 ಲಕ್ಶದ ಮರ್ಸಿಡಿಸಿ ಬೆಂಜ್ ಸಿ-ಕ್ಲಾಸ್, 40 ಲಕ್ಶಕ್ಕೂ ಹೆಚ್ಚಿನ ಆಡಿ ಕ್ಯು3, ಇನೋವಾ, ಹುಂಡೈ ಕ್ರೆಟಾ ಕಾರ್ ಗಳನ್ನು ರಶ್ಮಿಕಾ ಖರೀದಿಸಿದ್ದಾರೆ. ಇನ್ನು ರಶ್ಮಿಕಾ ಸಿನಿಮಾಗಳಿಂದ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಸದ್ಯ ರಶ್ಮಿಕಾ ಟಾಪ್ ನಟಿಯರಾದ ನಯನತಾರಾ, ಅನುಶ್ಕಾ ಶೆಟ್ಟಿ ಹಾಗೂ ಸಮಂತಾ ಅವರಿಗೆ ಪೈಪೋಟಿ ನೀಡುತ್ತಿದ್ದು, ರಶ್ಮಿಕಾ ಕೆರಿಯರ್ ಹೀಗೆ ಮುಂದುವರೆದ್ರೆ ಈ ಎಲ್ಲಾ ನತಿಯರನ್ನು ಹಿಂದಿಕ್ಕುವುದರಲ್ಲಿ ನೋ ಡೌಟ್!

Comments are closed.