ಜೇಮ್ಸ್ ಚಿತ್ರದ ಆ ಒಂದು ದೃಶ್ಯವನ್ನು ನೋಡಿ ಕಣ್ಣೀರುಹಾಕಿದ ಅಪ್ಪು ಅಭಿಮಾನಿ, ಆ ದೃಶ್ಯದಲ್ಲಿ ಅಂತದ್ದು ಏನಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಂತು-ಇಂತು ಹಲವಾರು ಸಮಯಗಳ ಕಾಯುವಿಕೆಯ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಕೊನೆಗೂ ಒಂದು ಮಟ್ಟದ ಸಂತೋಷವನ್ನು ತರುವಂತಹ ಕ್ಷಣ ಒದಗಿ ಬಂದಿದೆ. ಮಾರ್ಚ್ 17ರಂದು ಅಂದರೆ ಇಂದು ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರವಾಗಿರುವ ಜೇಮ್ಸ್ ತೆರೆಕಂಡಿದೆ.
ಸಿನಿಮಾ ಹಲವಾರು ವಿಚಾರಗಳಿಗಾಗಿ ಅಪ್ಪು ಅವರ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಭಾವನಾತ್ಮಕ ಅನುಭವವನ್ನು ನೀಡಿತ್ತು. ಅಪ್ಪು ರವರ ಅಭಿಮಾನಿಗಳು ಊಹಿಸಲು ಕೂಡ ಸಾಧ್ಯವಾಗದಂತಹ ಸರ್ಪ್ರೈಸ್ ಗಳು ಸಿನಿಮಾದಲ್ಲಿ ಅಡಕವಾಗಿವೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ಹೌದು ಕಲಬುರ್ಗಿಯಲ್ಲಿ ಸಂಗಮ್ ಚಿತ್ರದಲ್ಲಿ ಅಭಿಮಾನಿಯೊಬ್ಬ ಜೇಮ್ಸ್ ಸಿನಿಮಾದ ಒಂದು ದೃಶ್ಯಕ್ಕೆ ಭಾವುಕರಾಗಿ ಕಣ್ಣೀರನ್ನು ಹಾಕಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಿದ್ದರೆ ಅದು ಯಾವ ದೃಶ್ಯ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೇ ಅದು ಇನ್ಯಾವುದು ಅಲ್ಲ ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎಂಟ್ರಿ ಸೀನ್ ಅನ್ನು ನೋಡಿ ಅವರ ಅಭಿಮಾನಿ ಕಣ್ಣೀರನ್ನು ಹಾಕಿರುವ ವಿಡಿಯೋವನ್ನು ಸುದ್ದಿವಾಹಿನಿಯೊಂದು ರೆಕಾರ್ಡ್ ಮಾಡಿದ್ದು ಈಗ ವಿಡಿಯೋ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದೇ ರೀತಿ ಪ್ರತಿಯೊಬ್ಬ ಅಪ್ಪು ಅಭಿಮಾನಿ ಕೂಡ ಇದು ಕಣ್ಣೀರು ತರಿಸುವಂತಹ ಕ್ಷಣ ವಾಗಿದ್ದು ಪ್ರತಿಯೊಬ್ಬರು ಸಿನಿಮಾ ನಂತರ ಕಣ್ಣೀರು ಹಾಕಿಕೊಂಡು ಬರುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸರಿಯಾಗಿದೆ. ಜೇಮ್ಸ್ ಚಿತ್ರದ ನಂತರ ನಿಮ್ಮ ರಿಯಾಕ್ಷನ್ ಹೇಗಿತ್ತು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.
Comments are closed.