ಕಾಂಗ್ರೆಸ್ ಪಕ್ಷ ಸೇರಿದ ಆರಂಭದಲ್ಲಿಯೇ ಎಸ್ ನಾರಾಯಣ್ ರವರಿಗೆ ಬಾರಿ ಮುಜುಗರ, ಮತ್ತೊಮ್ಮೆ ಇರುಸು ಮುರುಸು ತಂಡ ಡಿಕೆಶಿ. ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ನಹಿರಿಯ ನಟ ಹಾಗೂ ನಿರ್ದೇಶಕ ರಾಗಿರುವ ಎಸ್ ನಾರಾಯಣ್ ಅವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಎಸ್. ನಾರಾಯಣ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಎಸ್ ನಾರಾಯಣ್ ಅವರಿಗೆ ಮುಜುಗರ ತಂದಿರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ.
ಹೌದು, ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸದಸ್ಯರ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎಸ್ ನಾರಾಯಣ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಸದಸ್ಯತ್ವ ಪಡೆದುಕೊಂಡರು. ಸ್ವತಹ ಡಿಕೆಶಿ ಅವರ ಕೈಯಿಂದಲೇ ಸದಸ್ಯತ್ವವನ್ನು ಸ್ವೀಕರಿಸಿದ ನಾರಾಯಣ್ ಅವರು, ಸದಸ್ಯರ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರ ಪಕ್ಕದ ಸೀಟಿನಲ್ಲಿ ಕುಳಿತು ಕೊಳ್ಳಲು ಮುಂದಾದರು.
ಅವರು ಆ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಡಿಕೆಶಿಯವರು, ಅವರನ್ನು ಮುಂದಿನ ಸೀಟಿಗೆ ಕುಳಿತುಕೊಳ್ಳುವಂತೆ ಹೇಳಿದರು. ಅಲ್ಲಿಯೂ ಎಸ್ ನಾರಾಯಣ್ ಅವರಿಗೆ ಮುಖಭಂಗವಾದಂತೆ ಅನ್ನಿಸಿತು. ಏಕೆಂದರೆ ಎರಡನೇ ಸೀಟಿನಲ್ಲಿ ಕುಳಿತುಕೊಳ್ಳುವಾಗಲೂ ಇನ್ನೊಬ್ಬರು ಅವರನ್ನು ಮುಂದಿನ ಸೀಟಿಗೆ ಹೋಗುವಂತೆ ಹೇಳಿದರು. ಕೊನೆಗೆ ಮೂರನೇ ಸೀಟಿನಲ್ಲಿ ಕುಳಿತುಕೊಳ್ಳುವಾಗಲೂ ಇನ್ಯಾರಾದರೂ ಬರುವವರು ಇದ್ದಾರೆಯೇ ಎಂದು ಎಸ್ ನಾರಾಯಣ್ ಅವರು ಚೆಕ್ ಮಾಡಿಕೊಂಡು ಮುಂದಿನ ಸೀಟಿನಲ್ಲಿ ಕುಳಿತುಕೊಂಡರು. ನಂತರ ತನ್ನ ಸಹಾಯಕನಿಂದ ಕರವಸ್ತ್ರ ಪಡೆದುಕೊಂಡು ಮುಖ ಒರಿಸಿಕೊಂಡಿದ್ದು ಅವರ ಬೇಸರವನ್ನು ಮರೆಮಾಚಲು ಇದ್ದಿರಬಹುದು ಎಂದು ಹಲವರ ಊಹೆ. ಈ ನಡುವೆ ಈ ವಿಡಿಯೊವನ್ನು ನೋಡಿ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಇದೆಲ್ಲ ಬೇಕಿತ್ತಾ ಎಂದು ಕೂಡ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Comments are closed.