Neer Dose Karnataka
Take a fresh look at your lifestyle.

ಇನ್ನು ಮುಂದೆ ತುಂಡು ಉಡುಗೆ ತೊಡುವುದಿಲ್ಲ ಎಂದು ಸಿನಿಮಾ ಇಂದ ದೂರವಾದ ಒಂದು ಕಾಲದ ಟಾಪ್ ನಟಿ ಅರ್ಚನಾ, ಯಾಕಂತೆ ಗೊತ್ತೇ??

ಚಂದನವನದ ಮುದ್ದುಮುಖದ ನಟಿಯರಲ್ಲಿ ಒಬ್ಬರು ಅರ್ಚನಾ. ಈ ನಟಿ 90ರ ದಶಕದಲ್ಲಿ ಎಲ್ಲರ ಫೇವರೆಟ್ ಆಗಿದ್ದರು. ಬಹಳ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಚನಾ ಅವರು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದರು. ಕನ್ನಡ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದರು ನಟಿ ಅರ್ಚನಾ. ಈಗ ನಟಿ ಅರ್ಚನಾ ಎಲ್ಲಿದ್ದಾರೆ? ಚಿತ್ರರಂಗದಿಂದ ಇವರು ಸಂಪೂರ್ಣವಾಗಿ ದೂರವಾಗಿದ್ದು ಯಾಕೆ?  ತಿಳಿಸುತ್ತೇವೆ ನೋಡಿ..

ನಟಿ ಅರ್ಚನಾ ಅವರು ಒಂದು ಹಳೆಯ ಸಂದರ್ಶನದಲ್ಲಿ ಹೇಳಿದ್ದ ಪ್ರಕಾರ, 8ನೇ ತರಗತಿಯಲ್ಲಿ ಓದುತ್ತಿರುವಾಗಲೇ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 1996 ರಲ್ಲಿ ಶಿವ ರಾಜ್ ಕುಮಾರ್ ಅವರ ಜೊತೆ ಆದಿತ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನೋಡಲು ಸುಂದರವಾಗಿದ್ದು, ನಟನೆ ಸಹ ಚೆನ್ನಾಗಿ ಮಾಡುತ್ತಿದ್ದ ಕಾರಣ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ  ಹುಡುಕಿಕೊಂಡು ಬಂದಿತು. ಅಷ್ಟು ಚಿಕ್ಕ ವಯಸ್ಸಿಗೆ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಪಡೆದ ಕೆಲವೇ ಕೆಲವು ನಟಿಯರಲ್ಲಿ ಇವರು ಒಬ್ಬರು. ಬೇರೆ ಭಾಷೆಗಳಲ್ಲಿ ನಟಿಸಿದ ನಂತರ ಮಾರಿ ಕಣ್ಣು ಹೋರಿ ಮ್ಯಾಗೆ ಸಿನಿಮಾ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡಿದರು.

ಎ ಸಿನಿಮಾದಲ್ಲಿ ಇವರ ಅಭಿನಯವನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ಅರ್ಚನಾ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು ಯಜಮಾನ ಸಿನಿಮಾ. ಅದಾದ ಬಳಿಕ ಆಗೊಂದು ಈಗೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಅರ್ಚನಾ ಅವರು ನಟಿಸಿದ ಕೊನೆಯ ಸಿನಿಮಾ 2016ರಲ್ಲಿ ಅಭಿಜಿತ್ ಅವರ ಜೊತೆ ನಟಿಸಿದ ಸಿಬಿಐ ಸತ್ಯ. ಅದಾದ ಬಳಿಕ ಅರ್ಚನಾ ಅವರು ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಚಿತ್ರರಂಗದಿಂದ ಅರ್ಚನಾ ಅವರು ದೂರಕ್ಕೆ ಉಳಿಯಲು ಮುಖ್ಯ ಕಾರಣ, ಕಾಸ್ಟ್ಯೂಮ್ ವಿಚಾರಗಳು. ಅರ್ಚನಾ ಅವರು ಅಭಿನಯಿಸಿರುವ ಸಿನಿಮಾಗಳನ್ನು ನೋಡಿದರೆ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಸೀರೆ, ಅಥವಾ ಮಾಡರ್ನ್ ಡ್ರೆಸ್ ಆದರು ತೀರಾ ಗ್ಲಾಮರಸ್ ಎನ್ನುವಂತಹ ಡ್ರೆಸ್ ಗಳನ್ನು ಧರಿಸುತ್ತಿರಲಿಲ್ಲ..

ಯಜಮಾನ ಸಿನಿಮಾ ನಂತರ ಅರ್ಚನಾ ಅವರು ಹೋಮ್ಲಿ ಲುಕ್ ನಲ್ಲಿ ನೋಡಲು ಜನರು ಸಹ ಇಷ್ಟಪಡುತ್ತಿದ್ದರು. ಅರ್ಚನಾ ಅವರಿಗೂ ಕೂಡ ತೀರಾ ಗ್ಲಾಮರಸ್ ಎಕ್ಸ್ಪೋಸ್ ಮಾಡುವಂಥ ಬಟ್ಟೆಗಳನ್ನು ಧರಿಸಲು ಇಷ್ಟವಿರಲಿಲ್ಲ. ಹಾಗಾಗಿ ಅವರು ತುಂಡು ಬಟ್ಟೆಗಳನ್ನು ಧರಿಸುವುದಿಲ್ಲ ಎಂದು ಷರತ್ತು ಸಹ ಹಾಕಿದ್ದರು. ಇದರಿಂದಾಗಿ ಅರ್ಚನಾ ಅವರಿಗೆ ಸಿಗುತ್ತಿದ್ದ ಅವಕಾಶಗಳು ಸಹ ಕಡಿಮೆ ಆಗುತ್ತಾ ಹೋಯಿತು. ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಅವಕಾಶಗಳು ಪೂರ್ತಿಯಾಗಿ ನಿಂತುಹೋಯಿತು. ಅರ್ಚನಾ ಅವರು ಎಕ್ಸ್ಪೋಸ್ ಗೆ ಒಪ್ಪದ ಕಾರಣ ಅವರಿಗೆ ಸಿಗುತ್ತಿದ್ದದ್ದು ಸಹ ಎರಡನೇ ನಾಯಕಿಯ ಪಾತ್ರಗಳಾಗಿದ್ದವು.

ಯಜಮಾನ, ಸಿನಿಮಾದಲ್ಲಿ ಪ್ರಮುಖ ಪಾತ್ರವಾದರು ಸಹ, ಎರಡನೇ ನಾಯಕಿಯ ಪಾತ್ರವಾಗಿತ್ತು. ಎ, ನೀಲಾಂಬರಿ ಇನ್ನು ಕೆಲವು ಸಿನಿಮಾಗಳನ್ನು ನೋಡಿದರೆ ಎರಡನೇ ನಾಯಕಿಯ ಪಾತ್ರವೇ ಆಗಿತ್ತು. ಈ ರೀತಿಯ ಹಲವು ಕಾರಣಗಳಿಂದ ಅರ್ಚನಾ ಅವರು ನಟನೆಯಿಂದ ದೂರವೇ ಉಳಿದರು. ನಟಿ ಅರ್ಚನಾ, ಯಾವುದೇ ರೀತಿಯ ಪೋಷಕ ಪಾತ್ರಗಳಲ್ಲಿ ಸಹ ಕಾಣಿಸಿಕೊಂಡಿಲ್ಲ. ಈ ನಟಿ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಕನ್ನಡ ಸಿನಿಪ್ರಿಯರಲ್ಲಿ ಈಗಲೂ ಇದೆ. ಇದೀಗ ಈ ಪ್ರಶ್ನೆಗೆ ತಕ್ಕಮಟ್ಟಗೆ ಉತ್ತರ ಸಿಕ್ಕಿದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಅರ್ಚನಾ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಬಾರ್ಡರ್ ನಲ್ಲಿ ನೆಲೆಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮದುವೆಯಾಗಿ ಗಂಡನ ಜೊತೆಗಿದ್ದು, ಗಂಡನಿಗೆ ಬ್ಯುಸಿನೆಸ್ ನಲ್ಲಿ ಸಹಾಯ ಮಾಡುತ್ತಿದ್ದಾರೆ. ಅರ್ಚನಾ ಅವರು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲೇ ಆದರೂ ಇವರು ಹುಟ್ಟಿದ್ದು ಮರಾಠಿ ಕುಟುಂಬದಲ್ಲಿ, ಆದರೆ ಕನ್ನಡ ಭಾಷೆಯನ್ನು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದರು. ಸಧ್ಯಕ್ಕೆ ಈ ನಟಿ ಕುಟುಂಬದ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

Comments are closed.