ಕೊನೆಗೂ ಕಾಣಿಸಿತು ಅಶ್ವಿನಿ ರವರ ಮುಖದಲ್ಲಿ ನಗು-ಐದು ತಿಂಗಳ ನಂತರ ಅಶ್ವಿನಿ ಮೇಡಂ ಮುಖದಲ್ಲಿ ನಗು ಮೂಡಿದ್ದು ಯಾಕೆ ಗೊತ್ತೇ?? ಅಸಲಿ ಕಾರಣವೇನು ಗೊತ್ತೇ??
ಅಶ್ವಿನಿ ಪುನೀತ್ ರಾಜ್ ಕುಮಾರ್, ಈ ಹೆಸರು ಕೇಳಿದರೆ ಎಲ್ಲರಿಗೂ ಒಂದು ಕ್ಷಣ ಅಯ್ಯೋ ಎನ್ನಿಸುತ್ತದೆ. ಯಾಕಂದ್ರೆ ಅಶ್ವಿನಿ ಅವರು ಅಂತಹ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಜೀವನವಿಡೀ ಜೊತೆಯಾಗಿರುತ್ತೇವೆಂದು ಆಸೆ, ಕನಸುಗಳನ್ನು ಕಟ್ಟಿಕೊಂಡು ಮದುವೆಯಾದ ಗಂಡ, ಇದ್ದಕ್ಕಿದ್ದ ಹಾಗೆ ಇನ್ನಿಲ್ಲವಾದರು, ಗಂಡನನ್ನು ಕಳೆದುಕೊಂಡ ಕೆಲವೇ ತಿಂಗಳಲ್ಲಿ, ಜೀವನಕ್ಕೆ ಧೈರ್ಯ ನೀಡುತ್ತಾ ಆಧಾರ ಸ್ತಂಭದ ಹಾಗಿದ್ದ ತಂದೆಯನ್ನು ಕಳೆದುಕೊಂಡರು. ಅಶ್ವಿನಿ ಅವರಿಗೆ ಬಂದಿರುವ ಇಂಥಹ ಪರಿಸ್ಥಿತಿ ಬಹುಶಃ ಯಾವ ಹೆಣ್ಣಿಗೂ ಬರುವುದು ಬೇಡ. ಇಷ್ಟೆಲ್ಲಾ ಆಗಿದ್ದರು ಅಶ್ವಿನಿ ಅವರು ಧೃತಿಗೆಡದೆ, ಜೀವನವನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ.
ಪುನೀತ್ ಅವರ ಕನಸುಗಳನ್ನು ನನಸು ಮಾಡುವ ನಿರ್ಧಾರ ಮಾಡಿರುವ ಅಶ್ವಿನಿ ಅವರು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಅಶ್ವಿನಿ ಅವರು ಮತ್ತೊಮ್ಮೆ ಶುರು ಮಾಡಿದ್ದಾರೆ. ಅಪ್ಪು ಅವರು ಇದ್ದಿದ್ದರೆ ಪಿ.ಆರ್.ಕೆ ಸಂಸ್ಥೆ ಹೇಗೆ ನಡೆಯುತ್ತಿತ್ತೋ ಅದೇ ರೀತಿ ಅಶ್ವಿನಿ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಅವರು ಇದ್ದಾಗ, ಈ ಜೋಡಿಯನ್ನು ಜೊತೆಯಾಗಿ ನೋಡಲು ಸಂತೋಷವಾಗುತ್ತಿತ್ತು, ಎಲ್ಲಿಗೆ ಹೋದರು, ಶಿವ ಪಾರ್ವತಿಯ ಹಾಗೆ ದಂಪತಿಗಳ ಸಮೇತ ಬರುತ್ತಿದ್ದರು ಅಪ್ಪು ಅಶ್ವಿನಿ. ಇಬ್ಬರ ಮುಖದಲ್ಲೂ ಆ ನಗು ಸದಾ ಇರುತ್ತಿತ್ತು. ಆದರೆ ಅಪ್ಪು ಅವರು ಇನ್ನಿಲ್ಲವಾದ ಮೇಲೆ ಆ ನಗು ಅಶ್ವಿನಿ ಅವರ ಮುಖದಿಂದ ಮಾಯವಾಗಿತ್ತು.
ಅಶ್ವಿನಿ ಅವರ ಮುಖದಲ್ಲಿ ಮತ್ತೊಮ್ಮೆ ಆ ನಗು ನೋಡಲು ಅಪ್ಪು ಅವರ ಅಭಿಮಾನಿಗಳು ಹಾಗೂ ಎಲ್ಲರೂ ಕಾಯುತ್ತಿದ್ದರು. ಇದೀಗ ಆ ಸಮಯ ಬಂದಿದೆ. 5 ತಿಂಗಳ ನಂತರ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮುಖದಲ್ಲಿ ನಗು ಕಾಣಿಸಿದೆ. ಕುಟುಂಬದ ಜೊತೆ ಇರುವ ಅಶ್ವಿನಿ ಅವರು ನಗುತ್ತಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ವಂದಿತಾ ಪುನೀತ್ ರಾಜ್ ಕುಮಾರ್, ರಾಘಣ್ಣ, ಮಂಗಳಮ್ಮ, ಯುವ ರಾಜ್ ಕುಮಾರ್ ಹಾಗೂ ದೊಡ್ಮನೆಯ ಕುಟುಂಬದವರು ಜೊತೆಯಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅಶ್ವಿನಿ ಅವರು ನಗುತ್ತಿರುವುದನ್ನು ನೋಡಬಹುದು, ಒಳ್ಳೆಯ ಕುಟುಂಬ ಇದ್ದರೆ, ನೋವಿನಿಂದ ನಗುವಿನೆಡೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
Comments are closed.