ದರ್ಶನ್ ರವರ ಮುಂದಿನ 56 ಚಿತ್ರಕ್ಕೆ ನಾಯಕಿ ಯಾರಾಗಬಹುದು?? ಇಬ್ಬರ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತೆ.. ಅವರಿಬ್ಬರೂ ಯಾರು ಗೊತ್ತೇ??
ಡಿಬಾಸ್ ದರ್ಶನ್ ಅವರ ಸಿನಿಮಾ ಸೆಟ್ಟೇರುತ್ತಿದೆ ಅಥವಾ ಅವರ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಇದೆ ಎಂದರೆ ಅಭಿಮಾನಿಗಳು ಕಾರುರತೆಯಿಂದ ಕಾಯುತ್ತಿರುತ್ತಾರೆ. ದರ್ಶನ್ ಅವರು ಪ್ರಸ್ತುತ ಕ್ರಾಂತಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕ್ರಾಂತಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೇ ದರ್ಶನ್ ಅವರ 56ನೇ ಸಿನಿಮಾ ಬಗ್ಗೆ ಚರ್ಚೆಗಳು ಶುರುವಾಗಿದೆ. ಡಿಬಾಸ್ ಸಿನಿಮಾ ಅಂದ್ರೆ ಪಕ್ಕಾ ಕರ್ಮಶಿಯಲ್ ಆಗಿರುತ್ತದೆ, ಇದೀಗ ದರ್ಶನ್ ಅವರ ಮುಂದಿನ ಸಿನಿಮಾಗೆ ನಾಯಕಿ ಯಾರಾಗಬೇಕು ಎನ್ನುವ ಚರ್ಚೆ ಅಭಿಮಾನಿಗಳ ನಡುವೆ ಜೋರಾಗಿಯೇ ನಡೆಯುತ್ತಿದೆ.
ನಟ ದರ್ಶನ್ ಅವರ ಸಿನಿಮಾ ಅಂದ್ರೆ, ನಟಿಯರು ಅವಕಾಶಕ್ಕಾಗಿ ಕಾದು ಕುಳಿತಿರುತ್ತಾರೆ. ಡಿಬಾಸ್ ಸಿನಿಮಾ ಅಂದ್ರೆ ಪಾತ್ರ ಮತ್ತು ಜನಪ್ರಿಯತೆ, ಒಳ್ಳೆಯ ಹೆಸರು ಎಲ್ಲವೂ ಬರುತ್ತದೆ ಎನ್ನುವ ನಂಬಿಕೆ ನಾಯಕಿಯರಿಗೆ ಇರುತ್ತದೆ. ಪ್ರಸ್ತುತ ನಮಗೆ ಗೊತ್ತಿರುವ ಹಾಗೆ ಕ್ರಾಂತಿ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ದರ್ಶನ್ ಅವರ ಮುಂದಿನ ಸಿನಿಮಾಗೆ ನಾಯಕಿ ಯಾರಾಗಿರಬೇಕು ಎನ್ನುವ ಚರ್ಚೆಯಲ್ಲೂ ರಚಿತಾ ಅವರ ಹೆಸರೆ ಮೊದಲನೆಯ ಹೆಸರಾಗಿ ಕೇಳಿ ಬರುತ್ತಿದೆ. ರಚಿತಾ ಅವರನ್ನು ಹೊರತುಪಡಿಸಿ, ಕನ್ನಡದ ಮತ್ತೊಬ್ಬ ನಟಿ ಆಶಿಕಾ ರಂಗನಾಥ್ ಅವರ ಹೆಸರು ಕೇಳಿಬರುತ್ತಿದೆ. ಡಿಬಾಸ್ ಸಿನಿಮಾದಲ್ಲಿ ಕನ್ನಡತಿಯರೆ ನಾಯಕಿಯರಾಗಿರಬೇಕು ಎನ್ನುವುದು ಅಭಿಮಾನಿಗಳ ಆಸೆ..
ಡಿ56 ಸಿನಿಮಾ ಯಾವುದಾಗಲಿದೆ ಎನ್ನುವ ಚರ್ಚೆ ಸಹ ಶುರುವಾಗಿದೆ. ಈಗಾಗಲೇ ದರ್ಶನ್ ಅವರು ಗೋಲ್ಡ್ ರಿಂಗ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಜೊತೆಗೆ ದರ್ಶನ್ ಅವರ ವೀರ ಮದಕರಿ ನಾಯಕ ಸಿನಿಮಾ ಸಹ ಚಿತ್ರೀಕರಣ ನಿಲ್ಲಿಸಿದೆ. ಹಾಗಾಗಿ ದರ್ಶನ್ ಅವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎನ್ನುವ ಚರ್ಚೆ ಶುರುವಾಗಿದ್ದು, ನಾಯಕಿಯಾಗಿ ರಚಿತಾ ರಾಮ್ ಅಥವಾ ಆಶಿಕಾ ರಂಗನಾಥ್ ಇಬ್ಬರಲ್ಲಿ ಯಾರಾದರು ಇರಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ರಚಿತಾ ಅವರು ಈಗಾಗಲೇ ಡಿಬಾಸ್ ಜೊತೆ 3 ಸಿನಿಮಾಗಳಲ್ಲಿ ನಟಿಸಿದ್ದಾರೆ, ಆಶಿಕಾ ರಂಗನಾಥ್ ಅವರೇ ಆಯ್ಕೆಯಾದರು, ದರ್ಶನ್ ಅವರೊಡನೆ ಮೊದಲ ಸಿನಿಮಾ ಆಗಲಿದೆ. ಹಾಗಾಗಿ ಡಿಬಾಸ್ ಮುಂದಿನ ಸಿನಿಮಾಗೆ ನಾಯಕಿ ಯಾರಾಗುತ್ತಾರೆ ಎಂದು ಕಾದು ನೋಡಬೇಕಿದೆ.
Comments are closed.