ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳಿಗೆ ಡಿ ಬಾಸ್ ಅಂದರೆ ಯಾಕೆ ಅಷ್ಟು ಕ್ರೇಜ್?? ಎಲ್ಲರೂ ದರ್ಶನ್ ರವರನ್ನು ಇಷ್ಟ ಪಡುವುದು ಯಾಕೆ ಗೊತ್ತೇ??
ಡಿಬಾಸ್ ದರ್ಶನ್, ಈ ಹೆಸರು ಕೇಳಿದರೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕ್ರೇಜ್ ಮತ್ತು ಉತ್ಸಾಹ. ನಟ ದರ್ಶನ್ ಅವರಿಗೆ ಇರುವ ಹಾಗೆ ಮಾಸ್ ಫ್ಯಾನ್ ಬೇಸ್, ದರ್ಶನ್ ಎನ್ನುವ ಹೆಸರು ಕೇಳಿದರೆ ಹುಟ್ಟಿಕೊಳ್ಳುವ ಬಹುಶಃ ಕನ್ನಡಸ ಮತ್ಯಾವ ನಟನಿಗೂ ಇರಲು ಕಷ್ಟಸಾಧ್ಯ. ದರ್ಶನ್ ಅವರೆಂದರೆ ಅಭಿಮಾನಿಗಳಿಗೆ ಯಾಕಷ್ಟು ಇಷ್ಟ? ಅಷ್ಟು ಕ್ರೇಜ್? ಹುಚ್ಚು ಪ್ರೀತಿ? ಉತ್ಸಾಹ? ಎಲ್ಲವನ್ನು ಇಂದು ನಿಮಗೆ ತಿಳಿಸುತ್ತೇವೆ..
ಮೊದಲಿಗೆ ಎಲ್ಲರಿಗು ಇಷ್ಟವಾಗುವುದು ದರ್ಶನ್ ಅವರ ಸರಳತೆ. ತಮಗಿಂತ ದೊಡ್ಡವರಿಗೆ ದರ್ಶನ್ ಅವರು ಕೊಡುವ ಗೌರವ. ನಟ ದರ್ಶನ್ ಅವರು ಖ್ಯಾತ ನಟನ ಮಗನಾಗಿದ್ದರು ಸಹ ಚಿತ್ರರಂಗಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟವರಲ್ಲ. ದರ್ಶನ್ ಅವರ ತಂದೆಗೂ ಮಗ ನಟನಾಗುವುದು ಇಷ್ಟವಿರಲಿಲ್ಲ. ಆದರೆ ತಮ್ಮ ತಂದೆಗೆ, ನಾನು ಹೀರೋ ಆಗೇ ಆಗ್ತೀನಿ, ಗಾಂಧಿನಗರದಲ್ಲಿ ನನ್ನ ಕಟೌಟ್ ನಿಲ್ಲುತ್ತೆ ಎಂದು ಚಾಲೆಂಜ್ ಮಾಡಿ ಹೀರೋ ಆದವರು ಡಿಬಾಸ್. ಮೆಜೆಸ್ಟಿಕ್ ಸಿನಿಮಾ ಮೂಲಕ ಆ ಚಾಲೆಂಜ್ ಪೂರ್ತಿಯಾಯಿತು.
ಹಾಲು ಮಾರುತ್ತಾ ಇದ್ದ ಹುಡುಗ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ನಟ ದರ್ಶನ್ ಅವರು ಕೆಲಸ ಶುರು ಮಾಡಿದ್ದು, ಲೈಟ್ ಬಾಯ್ ಆಗಿ, ಅಸಿಸ್ಟಂಟ್ ಆಗಿ, ಆದರೆ ಇಂದು ಅವರ ಅಭಿನಯ ಚಾತುರ್ಯತೆಯ ಮೂಲಕ ಯಾರು ಊಹಿಸದ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ದರ್ಶನ್ ಅವರು ಒಂದು ರೀತಿಯ ಪಾತ್ರಕ್ಕೆ ಸೀಮಿತವಾಗಿರದೆ ವಿಭಿನ್ನವಾದ ಪಾತ್ರಗಳಲ್ಲಿ, ಒಳ್ಳೆಯ ಕಥೆ, ಮೆಸೇಜ್ ಇರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನರಿಗೆ ಹತ್ತಿರವಾದರು.
ದರ್ಶನ್ ಅವರ ಸರಳತೆ ಹೇಗಿತ್ತು ಅಂದ್ರೆ, ಆಟೋ ಮೇಲೆ, ಅಂಗಡಿಗಳಲ್ಲಿ ಅವರ ಫೋಟೋ ಹಾಕಿದ್ದರೆ, ಕಾರ್ ನಿಲ್ಲಿಸಿ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿದ್ದರಂತೆ. ಯಾವುದೇ ಅಭಿಮಾನಿ ಅವರ ಮನೆ ಬಳಿ ಹೋಗಿ ಕಷ್ಟ ಎಂದು ಕೇಳಿಕೊಂಡರೆ, ಅವರನ್ನು ಬರಿಗೈಯಲ್ಲಿ ಕಳಿಸಿಯೇ ಇಲ್ಲ ಡಿಬಾಸ್. ಕಷ್ಟದಲ್ಲಿರುವ ಜನರ ಸಮಸ್ಯೆಯನ್ನು ಪರಿಹಾರ ಮಾಡಿ, ತಮ್ಮಿಂದ ಆದ ಸಹಾಯ ಹೊರಗೆ ಬರಬಾರದು ಎನ್ನುವ ದೊಡ್ಡ ಗುಣ ಹೊಂದಿರುವವರು. ಹಲವಾರು ಸೆಲೆಬ್ರಿಟಿಗಳೇ ಇವರ ಅಭಿಮಾನಿ, ಆದರೆ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನೇ ಸೆಲೆಬ್ರೆಟಿ ಎಂದು ಕರೆದರು. ಅಭಿಮಾನಿಗಳೆಂದರೆ ದರ್ಶನ್ ಅವರಿಗೆ ಎಲ್ಲಿಲ್ಲದ ಪ್ರೀತಿ, ಆ ಪ್ರೀತಿಯೇ ಜನರಿಗೆ ಅವರ ಮೇಲಿರುವ ಗೌರವ, ಪ್ರೀತಿ, ಉತ್ಸಾಹ, ಕ್ರೇಜ್ ಎಲ್ಲವನ್ನು ಹೆಚ್ಚಿಸಿತು.
ದರ್ಶನ್ ಅವರ ಫ್ರೆಂಡ್ ಸರ್ಕಲ್ ಗಳಲ್ಲಿ ಸಹ ಅದೇ ರೀತಿ. ಯಾರಿಗೆ ಏನೇ ಕಷ್ಟಬಂದರು, ತಕ್ಷಣವೇ ಅದನ್ನು ಬಗೆಹರಿಸುವ ಗುಣ ಡಿಬಾಸ್ ಅವರದ್ದು. ಇದರ ಬಗ್ಗೆ ಹಲವು ವೇದಿಕೆಗಳಲ್ಲಿ ಅವರ ಸ್ನೇಹಿತರು ಮಾತನಾಡಿರುವುದನ್ನು ನಾವು ಕೇಳಿರುತ್ತೇವೆ. ಹಲವು ಶಾಲೆಗಳಿಗೆ, ಸಿದ್ದಗಂಗಾ ಮಠಕ್ಕೆ ದರ್ಶನ್ ಅವರು ಸಹಾಯ ಮಾಡಿಕೊಂಡು ಬಂದಿದ್ದಾರೆ. ಚಿತ್ರರಂದಲ್ಲಿರುವ ಹಲವರಿಗೆ ಸಹಾಯ ಮಾಡಿ, ಅವಕಾಶ ನೀಡಿದ್ದಾರೆ ನಟ ದರ್ಶನ್.
ಇದಲ್ಲದೆ, ಹಿರಿಯನಟ ಅಂಬರೀಶ್ ಅವರ ಮೇಲಿನ ಗೌರವ, ಅಂಬರೀಶ್ ಅವರನ್ನು ತಂದೆಯ ರೂಪದಲ್ಲಿ ಕಾಣುತ್ತಿದ್ದ ದರ್ಶನ್ ಅವರು ಮಂಡ್ಯ ಗೆ ಬಂದು ಸುಮಲತಾ ಅವರ ಪರವಾಗಿ ಕ್ಯಾಂಪೇನ್ ಮಾಡಿದ್ದು, ಎಲ್ಲರ ಮನಗೆದ್ದಿತು. ಮಗನ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಿದ ಪರಿಯನ್ನು ಎಲ್ಲರೂ ಹಾಡಿ ಹೊಗಳಿದರು. ಈ ಎಲ್ಲಾ ಕಾರಣಗಳಿಂದ ಅಭಿಮಾನಿಗಳು ದರ್ಶನ್ ಅವರನ್ನು ಅಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ. ಇನ್ನುಮುಂದೆ ಕೂಡ ಆ ಪ್ರೀತಿ ಹೀಗೆಯೇ ಇರಲಿದೆ.
Comments are closed.