ಒಂದು ಕಡೆ ಹೆಂಡತಿ ಕೈ ಬಿಟ್ಟಳು, ಮತ್ತೊಂದು ಕಡೆ ಧೋನಿ ಇಂದ ತಂಡದಲ್ಲಿ ಸ್ಥಾನ ಸಿಗಲಿಲ್ಲ, ಆದರೂ ಸೋಲನ್ನು ಒಪ್ಪಿಕೊಳ್ಳದ ದಿನೇಶ್ ರವರ ಜೀವನದ ಅಸಲಿ ಕಥೆಯೇನು ಗೊತ್ತೇ??
ದಿನೇಶ್ ಕಾರ್ತಿಕ್, ಸಧ್ಯಕ್ಕೆ ಐಪಿಎಲ್ ನಲ್ಲಿ ಅದ್ಭುತವಾದ ಫಿನಿಷರ್ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಇವರ ಬ್ಯಾಟಿಂಗ್ ವೈಖರಿಯನ್ನು ಇಷ್ಟಪಡದೆ ಇರುವವರು, ಹೋಗಳದೆ ಇರುವವರು ಇರಲು ಸಾಧ್ಯವೇ ಇಲ್ಲ ಎನ್ನಬಹುದು. ದಿನೇಶ್ ಕಾರ್ತಿಕ್ ಅವರು ಇಂದು ಎಲ್ಲರು ಇಷ್ಟಪಡುವ ಬ್ಯಾಟ್ಸ್ಮನ್ ಆಗಿದ್ದಾರೆ, ಆದರೆ ವೈಯಕ್ತಿಕ ಜೀವನದಲ್ಲಿ ಇವರು ಅನುಭವಿಸಿದ ನೋವು, ಅದನ್ನು ಎದುರಿಸಿ ಬಂದ ಪರಿ ಎಲ್ಲರೂ ಶ್ಲಾಘಿಸುವಂಥದ್ದು. ಕೆರಿಯರ್ ನಲ್ಲಿ ಸಹ ದಿನೇಶ್ ಕಾರ್ತಿಕ್ ಅವರು ಕಷ್ಟಗಳನ್ನು ಅನುಭವಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರ ಜೀವನದಲ್ಲಿ ನಿಜಕ್ಕೂ ನಡೆದಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ದಿನೇಶ್ ಕಾರ್ತಿಕ್ ಅವರು ನಿಖಿತಾ ಅವರನ್ನು ಪ್ರೀತಿಸುತ್ತಿದ್ದರು. ನಿಖಿತಾ ಅವರ ತಂದೆ ಮತ್ತು ದಿನೇಶ್ ಕಾರ್ತಿಕ್ ಅವರ ತಂದೆ ಸ್ನೇಹಿತರಾಗಿದ್ದ ಕಾರಣ, ಮದುವೆಗೆ ಯಾವುದೇ ಅಡ್ಡಿ ಆತಂಕ ಬರಲಿಲ್ಲ. ಹಾಗಾಗಿ ದಿನೇಶ್ ಕಾರ್ತಿಕ್ ಮತ್ತು ನಿಖಿತಾ ಅವರ ಮದುವೆ ಸುಂದರವಾಗಿ ನೆರವೇರಿತು. ಇವರಿಬ್ಬರ ಸಂಸಾರವು ಕೂಡ ಚೆನ್ನಾಗಿಯೇ ಸಾಗುತ್ತಿತ್ತು..ಆದರೆ ಮದುವೆಯಾಗಿ ಐದು ವರ್ಷಗಳ ನಂತರ ಅಂದರೆ 2012ರಲ್ಲಿ ದಿನೇಶ್ ಕಾರ್ತಿಕ್ ಅವರು ಹಜಾರೆ ಟ್ರೋಫಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ತಮ್ಮ ಪತ್ನಿ ನಿಖಿತಾ ಮತ್ತು ಸ್ನೇಹಿತ ಕ್ರಿಕೆಟರ್ ಮುರಳಿ ವಿಜಯ್ ಇಬ್ಬರು ಅಫೇರ್ ಇದೆ ಎನ್ನುವ ವಿಚಾರವನ್ನು ತಿಳಿದುಕೊಂಡರು. ಈ ವಿಷಯ ಗೊತ್ತಾದ ನಂತರ ದಿನೇಶ್ ಕಾರ್ತಿಕ್ ಅವರು ನಿಖಿತಾ ಅವರಿಗೆ ವಿಚ್ಛೇದನ ನೀಡಿದರು.
ಅದಾದ ಬಳಿಕ ನಿಖಿತಾ ಅವರು ಗರ್ಭಿಣಿ ಆಗಿರುವ ವಿಚಾರ ಸಹ ಗೊತ್ತಾಯಿತು. ಬಳಿಕ ನಿಖಿತಾ ಅವರು ಮುರಳಿ ವಿಜಯ್ ಅವರೊಡನೆ ಮದುವೆಯಾದರು. ಹೆಂಡತಿ ಮತ್ತು ಸ್ನೇಹಿತನಿಂದಲೇ ಇಂತಹ ಮೋಸಕ್ಕೆ ಒಳಗಾದರು ಸಹ ದಿನೇಶ್ ಕಾರ್ತಿಕ್ ಅವರು ಇದರ ಬಗ್ಗೆ ಒಂದು ಮಾತನ್ನು ಆಡಲಿಲ್ಲ. ಮಾಧ್ಯಮದ ಎದುರಾಗಲಿ, ಸೋಷಿಯಲ್ ಮೀಡಿಯಾದಲ್ಲಾಗಲಿ ಅಥವಾ ಇನ್ನೆಲ್ಲಿಯೂ ಹೆಂಡತಿ ಬಗ್ಗೆಯಾಗಲಿ ಅಥವಾ ಸ್ನೇಹಿತನ ಬಗ್ಗೆಯಾಗಲಿ, ನೆಗಟಿವ್ ಆಗಿ ಮಾತನಾಡುವುದು ಅಥವಾ ಇನ್ನೇನನ್ನು ಮಾಡಲಿಲ್ಲ. ತಮ್ಮ ಪಾಡಿಗೆ ತಾವು ಕೆರಿಯರ್ ರೂಪುಗೊಳಿಸಿಕೊಳ್ಳುವಲ್ಲಿ ನಿರತರಾಗಿದ್ದರು..
ಆ ಪರಿಸ್ಥಿತಿಯಲ್ಲಿ ಬೇರೆ ಯಾರೇ ಇದ್ದರೂ, ಸ್ನೇಹಿತ ಮತ್ತು ಹೆಂಡತಿಯಿಂದ ಆದ ಆ ಮೋಸ ಸಹಿಸದೆ, ಮಾಧ್ಯಮದ ಎದುರು ಕುಳಿತು ಒಂದಷ್ಟು ಮಾತನಾಡಿರುತ್ತಿದ್ದರು, ಆದರೆ ದಿನೇಶ್ ಕಾರ್ತಿಕ್ ಅವರು ಆ ರೀತಿ ಮಾಡಲಿಲ್ಲ. ಬದಲಾಗಿ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸಿದರು. ಆದರೆ ಒಂದ್ ಕಾಲ ಘಟ್ಟದಲ್ಲಿ ದಿನೇಶ್ ಕಾರ್ತಿಕ್ ಅವರು ಕೆರಿಯರ್ ನಲ್ಲಿ ಏರಿಳಿತ ಅನುಭವಿಸಿದ್ದರು. 2004ರಲ್ಲಿ ದಿನೇಶ್ ಕಾರ್ತಿಕ್ ಅವರು ಟೀಮ್ ಇಂಡಿಯಾಗೆ ಸೆಲೆಕ್ಟ್ ಆದರು. ಕೆಲವು ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನವನ್ನು ಸಹ ನೀಡಿದರು. ಆದರೆ ಆ ಸಮಯದಲ್ಲಿ ಎಂ.ಎಸ್.ಧೋನಿ ಅವರು ಟೀಮ್ ಇಂಡಿಯಾದಲ್ಲಿ ಒಳ್ಳೆ ಫಾರ್ಮ್ ನಲ್ಲಿದ್ದ ಕಾರಣ ದಿನೇಶ್ ಕಾರ್ತಿಕ್ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ.
ಧೋನಿ ಅವರ ಆಟ ವೈಖರಿಯನ್ನು ಜನರು ತುಂಬಾ ಇಷ್ಟಪಡಲು ಶುರು ಮಾಡಿದ ಕಾರಣ ದಿನೇಶ್ ಅವರ ಆಟಕಿದ್ದ ಪ್ರಾಮುಖ್ಯತೆ ಮಂಕಾಗುತ್ತಾ ಹೊಯಿತು. ಇದರಿಂದ, ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಭದ್ರವಾದ ಸ್ಥಾನ ಸಿಗಲೇ ಇಲ್ಲ. 2004 ರಿಂದ ಇಲ್ಲೆಯವರೆಗೂ ಅಂದರೆ 18 ವರ್ಷಗಳ ಕಾಲ ದಿನೇಶ್ ಕಾರ್ತಿಕ್ ಅವರು ಟೀಮ್ ಇಂಡಿಯಾದಲ್ಲಿದ್ದು, 26 ಟೆಸ್ಟ್, 95 ಒನ್ ಡೇ ಕ್ರಿಕೆಟ್ ಪಂದ್ಯಗಳು, 32 ಟಿ 20 ಇಂಟರ್ನ್ಯಾಷನಲ್ ಪಂದ್ಯಗಳನ್ನಾಡಿದ್ದಾರೆ. ಧೋನಿ ಅವರಂತಹ ಅದ್ಭುತವಾದ ಪ್ಲೇಯರ್ ಟೀಮ್ ಇಂಡಿಯಾದಲ್ಲಿ ಇದ್ದ ಕಾರಣ ದಿನೇಶ್ ಅವರಿಗೆ ಕಷ್ಟ ಹೆಚ್ಚಾಗಿತ್ತು.
ದಿನೇಶ್ ಕಾರ್ತಿಕ್ ಅವರು ಈ ವರ್ಷ ಆರ್.ಸಿ.ಬಿ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಆರ್.ಸಿ.ಬಿ ಪಂದ್ಯಗಳನ್ನು ನೋಡಿ, ದಿನೇಶ್ ಕಾರ್ತಿಕ್ ಅವರು ಎಂಥಹ ಅದ್ಭುತವಾದ ಫಿನಿಷರ್ ಎಂದು ಎಲ್ಲರೂ ಹೊಗಳಲು ಶುರು ಮಾಡಿದ್ದು, ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ತಂಡಕ್ಕೆ ನೀಡಿರುವ ಭರವಸೆಯಿಂದ ಅಭಿಮಾನಿಗಳು ಈ ಸಲ ಕಪ್ ನಮ್ಮದೇ ಎಂದು ಹೇಳಲು ಶುರು ಮಾಡಿದ್ದಾರೆ.
Comments are closed.