ಸತತ ಸೋಲನ್ನು ಕಾಣುತ್ತಿದ್ದರೂ ಕೂಡ ಸನ್ ರೈಸರ್ಸ್ ತಂಡದ ಪ್ರತಿ ಪಂದ್ಯದಲ್ಲಿಯೂ ಕಾಣುವ ಕಾವ್ಯ ರವರ ನಿಜವಾದ ವಯಸ್ಸು ಹಾಗೂ ಆಸ್ತಿ ಎಷ್ಟು ಗೊತ್ತೇ??
ಐಪಿಎಲ್ ಪಂದ್ಯಗಳನ್ನು ನೋಡುವವರಿಗೆ ಸನ್ ರೈಸರ್ಸ್ ತಂಡದ ಓನರ್ ಕಾವ್ಯ ಮಾರನ್ ಖಂಡಿತವಾಗಿ ಗೊತ್ತಿರುತ್ತಾರೆ. ಸನ್ ರೈಸರ್ಸ್ ತಂಡದ ಪಂದ್ಯಗಳು ನಡೆಯುವಾಗ, ಮೈದಾನಕ್ಕೆ ಬಂದು ಮ್ಯಾಚ್ ಗಳನ್ನು ನೋಡಿ, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ರೋತ್ಸಾಹ ಕೊಡುತ್ತಾರೆ ಈ ಕ್ಯೂಟ್ ಓನರ್ ಕಾವ್ಯ. ಪಂದ್ಯಗಳನ್ನು ನೋಡುತ್ತಾ, ಇವರು ಕೊಡುವ ರಿಯಾಕ್ಷನ್ ಗಳನ್ನು ಕ್ಯಾಮೆರಾ ಮ್ಯಾನ್ ಸೆರೆಹಿಡಿದು ಟಿವಿ ಸ್ಕ್ರೀನ್ ನಲ್ಲಿ ಬರುವ ಹಾಗೆ ಮಾಡುವ ಕಾರಣ ಕಾವ್ಯ ಮಾರನ್ ಅವರ ಏಕ್ಸ್ಪ್ರೆಷನ್ ಗಳನ್ನು ನೋಡಿರುತ್ತೀರಿ..
ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನಾಗಿ ರನ್ ಗಳನ್ನು ಹೊಡೆದು ಸ್ಕೋರ್ ಮಾಡಿದಾಗ ಪ್ರೋತ್ಸಾಹ ನೀಡಿ, ಸಂತೋಷವಾಗಿ ನಗುತ್ತಾ ಚಿಯರ್ ಮಾಡುತ್ತಾರೆ. ಒಂದು ವೇಳೆ ತಂಡದ ಆಟದ ವೈಖರಿ ಚೆನ್ನಾಗಿರದೆ ಇದ್ದರೆ ವಿಕೆಟ್ ಗಳನ್ನು ಕಳೆದುಕೊಂಡು, ರನ್ ಗಳು ಇಲ್ಲದೆ ಇದ್ದಾಗ, ಬಹಳ ಬೇಸರದಲ್ಲಿ ಸಪ್ಪೆ ಮುಖ ಹಾಕಿಕೊಳ್ಳುವ ಎಕ್ಸ್ಪ್ರೆಷನ್ ನೀಡುತ್ತಾರೆ. ಈ ಸಾಲಿನ ಐಪಿಎಲ್ ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಫಾರ್ಮ್ ನಲ್ಲಿಲ್ಲ, ಸತತ ಸೋಲುಗಳನ್ನು ಕಾಣುತ್ತಿದ್ದಾರೆ. ಆದರೂ ಓನರ್ ಕಾವ್ಯ ಮಾರನ್ ಸಪೋರ್ಟ್ ಮಾಡುವುದನ್ನು ಬಿಟ್ಟಿಲ್ಲ, ಮ್ಯಾಚ್ ನೋಡಲು ಬರುವುದನ್ನು ನಿಲ್ಲಿಸಿಲ್ಲ. ಮೈದಾನದಲ್ಲಿ ಕಾವ್ಯ ಅವರು ನೀಡುವ ಎಲ್ಲಾ ಎಕ್ಸ್ಪ್ರೆಷನ್ಸ್ ಗಳನ್ನು ಕ್ಯಾಮೆರಾ ಮ್ಯಾನ್ ಚೆನ್ನಾಗಿ ಕ್ಯಾಪ್ಚರ್ ಮಾಡಿ ಜನರಿಗೆ ತೋರಿಸುತ್ತಾರೆ. ಈ ಕಾವ್ಯ ಮಾರನ್ ನಿಜಕ್ಕೂ ಯಾರು ? ಅವರ ವಯಸ್ಸೆಷ್ಟು ಗೊತ್ತಾ?
ಸನ್ ರೈಸರ್ಸ್ ತಂಡದ ಓನರ್ ಆಗಿರುವ ಕಾವ್ಯ ಮಾರನ್ ಮತ್ಯಾರು ಅಲ್ಲ, ದಕ್ಷಿಣ ಭಾರತದ ಟಿವಿ ನೆಟ್ವರ್ಕ್ ನಲ್ಲಿ, ಎಲ್ಲಾ ಭಾಷೆಗಳ ಚಾನೆಲ್ ಗಳನ್ನು ಹೊಂದಿರುವ, ಬೃಹತ್ ನೆಟ್ವರ್ಕ್ ಸನ್ ನೆಟ್ವರ್ಕ್ ನ ಸಂಸ್ಥಾಪಕ ಮುರಸೋಳಿ ಮಾರನ್ ಅವರ ಏಕೈಕ ಪುತ್ರಿ ಆಗಿದ್ದಾರೆ. ಇವರ ತಂದೆಗೆ 10 ಸಾವಿರ ಕೋಟಿಗಿಂತ ಹೆಚ್ಚು ಆಸ್ತಿ ಇದೆ. ಆದರೆ ಕಾವ್ಯ ಅವರು ತಂದೆಯ ಆಸ್ತಿ ಮೇಲೆ ಡಿಪೆಂಡ್ ಆಗದೆ, ತಾವೇ ಸ್ವಂತ ಉದ್ಯಮಗಳನ್ನು ಮಾಡಿ, ಅದರಲ್ಲಿ ಲಾಭ ಪಡೆದು, 1200 ಸಾವಿರ ಕೋಟಿಗಿಂತ ಹೆಚ್ಚು ಹಣ ಗಳಿಸಿದ್ದಾರೆ. ಇವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ, ತಂದೆಗೆ ಹೇಳಿ ಐಪಿಎಲ್ ನಲ್ಲಿ ಹೈದರಾಬಾದ್ ತಂಡವನ್ನು ಕೊಂಡುಕೊಂಡಿದ್ದಾರೆ. ಕಾವ್ಯ ಮಾರನ್ ಅವರಿಗೆ ಈಗ 30 ವರ್ಷ ವಯಸ್ಸು, ಇಷ್ಟು ಚಿಕ್ಕವರಾ ಎಂದು ಅಚ್ಚರಿಪಡಬಹುದು, ಆದರೆ ನಿಜಕ್ಕೂ ಚಿಕ್ಕವರು ಕಾವ್ಯ.
Comments are closed.