Neer Dose Karnataka
Take a fresh look at your lifestyle.

ಕೊಹ್ಲಿ ರೀತಿ ನಾಯಕನಾಗಿ ರಾಜೀನಾಮೆ ನೀಡಿ, ಈತನನ್ನು ನಾಯಕನಾಗಿ ಆಯ್ಕೆ ಮಾಡಿ ಎಂದ ಮಾಜಿ ಕ್ರಿಕೆಟಿಗ. ಮುಂಬೈ ತಂಡಕ್ಕೆ ನಾಯಕ ಯಾರು ಆಗಬೇಕಂತೆ ಗೊತ್ತೇ?

ಕಳೆದ 15 ದಿನಗಳಿಂದ ವೀಕ್ಷಕರಿಗೆ ಅತಿಹೆಚ್ಚು ಮನರಂಜನೆ ನೀಡುತ್ತಿರುವುದು ಐಪಿಎಲ್ ಪಂದ್ಯಗಳು. ಐಪಿಎಲ್ 15ನೇ ಆವೃತ್ತಿ ಆರಂಭವಾಗಿ, ಪಂದ್ಯಗಳು ರೋಚಕವಾಗಿ ಸಾಗುತ್ತಿದೆ. ಎಲ್ಲಾ ತಂಡಗಳು, ಎಫರ್ಟ್ಸ್ ಹಾಕಿ ಗೆಲ್ಲಲೇಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಮಾತ್ರ, ಅತಿ ಕಳಪೆ ಪ್ರದರ್ಶನ ನೀಡಿದೆ. ಐಪಿಎಲ್ ಟ್ರೋಫಿಗಳನ್ನು ಅತಿಹೆಚ್ಚು ಬಾರಿ ಗೆದ್ದಿರುವ ತಂಡ ಮುಂಬೈ ಇಂಡಿಯನ್ಸ್, ಅದರ ಈ ಆವೃತ್ತಿಯಲ್ಲಿ, ನಾಲ್ಕು ಪಂದ್ಯಗಳನ್ನು ಸೋತು, ಕಳಪೆ ಪ್ರದರ್ಶನ ನೀಡಿ, ಟೀಕೆಗ ಗುರಿಯಾಗಿದೆ. ಮುಂಬೈ ತಂಡಕ್ಕೆ ಈ ರೀತಿ ಆಗಲು ಕಾರಣ ಏನು ಎಂದು ತೀವ್ರವಾಗಿ ಚರ್ಚೆ ನಡೆಯುತ್ತಿದ್ದು, ಭಾರತದ ಮಾಜಿ ಕ್ರಿಕೆಟರ್ ಒಬ್ಬರು ಮುಂಬೈ ತಂಡದ ಬಗ್ಗೆ ಹೇಳಿಕೆ ನೀಡಿದ್ದಾರೆ..

ಇಷ್ಟು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡ ಅದ್ಭುತವಾಗಿ ಪಂದ್ಯಗಳನ್ನು ಆಡುತ್ತಿತ್ತು, ಅಂಕಪಟ್ಟಿಯಲ್ಲಿ ಟಾಪ್ ನಲ್ಲಿರುತ್ತಿತ್ತು, ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್ ಅಂಕಪಟ್ಟಿಯಲ್ಲಿ ಸಹ ಕೊನೆಯ ಸ್ಥಾನಕ್ಕೆ ಬಂದಿದೆ. ಐಪಿಎಲ್ ಸೀಸನ್ 15ರಲ್ಲಿ, ಮುಂಬೈ ತಂಡದ ಮೊದಲ ಪಂದ್ಯ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೋತಿತು, ಎರಡನೇ ಪಂದ್ಯ ರಾಜಸ್ತಾನ್ ರಾಯಲ್ಸ್, ಮೂರನೇ ಪಂದ್ಯ ಕೆಕೆಆರ್, ಹಾಗೂ ನಾಲ್ಕನೇ ಪಂದ್ಯ ಆರ್.ಸಿ.ಬಿ ವಿರುದ್ಧ ಸೋತಿತು. ಇದಕ್ಕೆ ಕಾರಣ ಏನೆಂದು ಅಭಿಮಾನಿಗಳು ಸಹ ಹುಡುಕುತ್ತಿದ್ದು, ಇಷ್ಟು ವರ್ಷಗಳ ಕಾಲ ತಂಡದಲ್ಲಿದ್ದ ಬಲಿಷ್ಠ ಆಟಗಾರರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿಲ್ಲ ಹಾಗೆಯೇ, ರೋಹಿತ್ ಶರ್ಮಾ ಅವರ ಕಳಪೆ ಕ್ಯಾಪ್ಟನ್ಸಿ ಸಹ ಇದಕ್ಕೆ ಕಾರಣವಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು..

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟರ್ ಸಂಜಯ್ ಮಂಜರೇಕರ್ ಇದರ ಬಗ್ಗೆ ಮಾತನಾಡಿದ್ದು, ‘ಈ ಬಾರಿ ಐಪಿಎಲ್ ಪಂದ್ಯಗಳು ಮುಗಿಯುವ ಮೊದಲೇ ರೋಹಿತ್ ಶರ್ಮಾ, ನಾಯಕತ್ವ ಬಿಟ್ಟು, ವಿರಾಟ್ ಕೋಹ್ಲಿ ಅವರ ದಾರಿಯಲ್ಲಿ ಸಾಗಲಿದ್ದಾರೆ. ರೋಹಿತ್ ಶರ್ಮಾ ಅವರು ನಾಯಕತ್ವ ತ್ಯಜಿಸಿ.. ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿರಬೇಕು..” ಎಂದಿದ್ದಾರೆ. ಸತತವಾಗಿ ಸೋಲು ಕಾಣುತ್ತಿರುವ ಕಾರಣ ರೋಹಿತ್ ಶರ್ಮಾ ಟೀಕೆಗೆ ಒಳಗಾಗುತ್ತಿದ್ದಾರೆ.

Comments are closed.