ಕೆಜಿಎಫ್ ಮೂಲಕ ಬಾಲಿವುಡ್ ನಲ್ಲಿಯೂ ತಲ್ಲಣ ಸೃಷ್ಟಿಸಿರುವ ಯಶ್ ಕುರಿತು ಕಂಗನಾ ಹೇಳಿದ್ದೇನು ಗೊತ್ತೇ??
ಕೆಜಿಎಫ್ ಚಾಪ್ಟರ್2, ಎಲ್ಲೆಡೆ ಈ ಸಿನಿಮಾ ಹವಾ ಜೋರಾಗಿಯೇ ಇದೆ. ಭಾರತ ಚಿತ್ರರಂಗದ ಗಣ್ಯ ಕಲಾವಿದರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ನೋಡಿ ಮೆಚ್ಚಿಕೊಂಡಿರುವ ವಿಚಾರ ಕೇಳಿ ಬಂದಿತ್ತು. ಚೆನ್ನೈನಲ್ಲಿ ಕೆಜಿಎಫ್2 ವೀಕ್ಷಿಸಿರುವ ರಜನೀಕಾಂತ್ ಅವರು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಕರೆಮಾಡಿ ವಿಶ್ ಮಾಡಿದ್ದರು. ಇದೀಗ ಬಾಲಿವುಡ್ ನಟಿ ಕಂಗನಾ ರನಾವತ್ ಅವರು ಕೆಜಿಎಫ್2 ಸಿನಿಮಾ ನೋಡಿ ಮಚ್ಚುಗೆ ಸೂಚಿಸಿದ್ದಾರೆ.
ನಟಿ ಕಂಗನಾ ರನಾವತ್ ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಟಿ. ಆದರೆ ಒಳ್ಳೆಯ ಸಿನಿಮಾಗಳು ಬಿಡುಗಡೆ ಆದಾಗ, ಅವುಗಳಿಗೆ ಮೆಚ್ಚುಗೆ ಸೂಚಿಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುತ್ತಾರೆ. ಇದೀಗ ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ನೋಡಿ ಪೋಸ್ಟ್ ಮೆಚ್ಚುಗೆ ಸೂಚಿಸಿದ್ದಾರೆ ಕಂಗನಾ. “ಯಶ್ ಅವರು ಭಾರತ ದೇಶದ ಆಂಗ್ರಿ ಯಂಗ್ ಮ್ಯಾನ್.. ಬಹಳ ವರ್ಷಗಳಿಂದ ಭಾರತ ದೇಶ ಇವರನ್ನು ಮಿಸ್ ಮಾಡಿಕೊಂಡಿದೆ. ರಾಕಿ ಭಾಯ್ ಈಗ ಬಾಲಿವುಡ್ ನಲ್ಲಿ ಅಮಿತಾಭ್ ಬಚ್ಚನ್ ಅವರ ಜಾಗವನ್ನು ತುಂಬಿಲಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ನಟರು ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ಹಾಗಾಗಿ ಬಾಲಿವುಡ್ ಅಭಿಮಾನಿಗಳ ಜೊತೆ ಹೆಚ್ಚು ಕನೆಕ್ಟ್ ಆಗುತ್ತಾರೆ..” ಎಂದು ಬರೆದು ಯಶ್ ಅವರ ಗುಣಗಾನ ಮಾಡಿದ್ದಾರೆ ನಟಿ ಕಂಗನಾ ರನಾವತ್.
ಹೀಗೆ ಕೆಜಿಎಫ್2 ಸಿನಿಮಾ ಪಡೆದುಕೊಂಡಿರುವ ಮೆಚ್ಚುಗೆ ಮತ್ತು ಸೃಷ್ಟಿಸುತ್ತಿರುವ ದಾಖಲೆಗಳು ಒಂದೆರಡಲ್ಲ, ಈಗಾಗಲೇ ಸಿನಿಮಾ ನಾಲ್ಕೇ ದಿನದಲ್ಲಿ ದೊಡ್ಡ ದಾಖಲೆ ಸೃಷ್ಟಿಸಿದೆ. ಕೇವಲ ನಾಲ್ಕೇ 536 ಕೋಟಿ ರೂಪಾಗಿ ಹಣಗಳಿಕೆ ಮಾಡಿ, ಹೊಸ ದಾಖಲೆ ನಿರ್ಮಾಣ ಮಾಡಿದೆ ಕೆಜಿಎಫ್2. ಭಾರತದ ಎಲ್ಲೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ರಜೆ ಬಂದಿದ್ದು, ಸಿನಿಮಾಗೆ ಸಹಾಯ ಮಾಡಿದ್ದು, ಸಿನಿಪ್ರಿಯರು ರಾಕಿ ಭಾಯ್ ಹವಾ ನೋಡಿ ಫಿದಾ ಆಗಿದ್ದಾರೆ. ವೀಕ್ ಡೇಸ್ ನಲ್ಲಿ ಸಹ ಸಿನಿಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಮೆಚ್ಚಿಕೊಳ್ಳುವ ವಿಚಾರ. ಈ ಹಿಂದೆ ಯಶ್ ಅವರು ಹೇಳಿದ ಹಾಗೆ, ಕನ್ನಡ ಚಿತ್ರರಂಗ ಮುಂದಿನ ಲೆವೆಲ್ ಗೆ ಸಾಗುತ್ತಿದೆ.
Comments are closed.