ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡದ ಬರಲು ಪ್ರಮುಖ ಕಾರಣವೇನು ಗೊತ್ತೇ??
ದೃಷ್ಟಿ ಸಮಸ್ಯೆ ಎನ್ನುವುದು ಈಗಿನ ಕಾಲದಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರನ್ನು ಕಾಡುವ ಸಮಸ್ಯೆ. ಕಣ್ಣು ಮಂಜಾಗುವುದು, ದೃಷ್ಟಿ ಮಸುಕಾಗುವುದು ಇಂತಹ ಸಮಸ್ಯೆಗಳು ಮೊದಲೆಲ್ಲಾ, ವಯಸ್ಸಾದವರಲ್ಲಿ ಮಾತ್ರ ಕಾಣಸಿಗುತ್ತಿತ್ತು, ಆದರೆ ಈಗ ದೃಷ್ಟಿ ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಸಹ ಶುರುವಾಗುತ್ತಿದೆ. ಮಕ್ಕಳು ಸಹ ದೃಷ್ಟಿ ಮಂಜಾಗಿ ಕನ್ನಡಕ ಹಾಕುವ ಪರಿಸ್ಥಿತಿ ಈಗ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಆರೋಗ್ಯಕ್ಕೆ ಒಳ್ಳೆಯದಲ್ಲದ ಜೀವನಶೈಲಿ, ಹೆಚ್ಚಾಗಿ ಟಿವಿ ನೋಡುವುದು, ಮೊಬೈಲ್ ಬಳಸುವುದು ಆಗಿದೆ.. ನಿಮ್ಮ ದೃಷ್ಟಿಯ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎನ್ನುತ್ತಾರೆ ವೈದ್ಯರು..
ದೃಷ್ಟಿ ಕಡಿಮೆ ಆಗುವುದರ ಮುಖ್ಯ ಲಕ್ಷಣಗಳು ಇವು..
ಪದೇ ಪದೇ ತಲೆ ನೋವು ಬರುವುದು, ನಿಮ್ಮ ದೃಷ್ಟಿ ಮಂಕಾಗಿ ನೋಡುವ ವಸ್ತುಗಳು ಮತ್ತು ಅಕ್ಷರಗಳು ಮಂಕಾಗಿ ಕಾಣುವುದು. ಕಣ್ಣುಗಳು ಕೆಂಪಾಗುವುದು, ದೃಷ್ಟಿ ಕಡಿಮೆ ಆಗುವುದರ ಲಕ್ಷಣಗಳಾಗಿವೆ. ಈ ರೀತಿ ಆಗುತ್ತಿದೆ ಎಂದು ನಿಮಗೆ ಅನ್ನಿಸುತ್ತಿದ್ದರೆ, ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೆ, ಕೂಡಲೇ ವೈದ್ಯರ ಬಳಿ ಹೋಗಿ, ಪರೀಕ್ಷೆ ಮಾಡಿಸಿಕೊಳ್ಳಿ..
ದೃಷ್ಟಿ ಕಡಿಮೆಯಾಗಲು ಕಾರಣಗಳು..
ದೃಷ್ಟಿ ಕಡಿಮೆಯಾಗಲು ನರದ ಸಮಸ್ಯೆ ಮುಖ್ಯ ಕಾರಣಗಳಲ್ಲಿ ಒಂದು. ಚಿಕ್ಕ ವಯಸ್ಸಿನಲ್ಲಿ ದೃಷ್ಟಿ ಕಡಿಮೆಯಾಗುವುದಕ್ಕೆ ನರವೈಜ್ಞಾನಿಕ ಸಮಸ್ಯೆ ಸಹ ಒಂದು ಕಾರಣವಾಗಿದೆ. ಆದರೆ ಈ ನರವೈಜ್ಞಾನಿಕ ಸಮಸ್ಯೆ ಚಿಕ್ಕ ವಯಸ್ಸಿನಲ್ಲಿ ಗೋಚರವಾಗುವುದು ಕಡಿಮೆಯಾಗಿದೆ.
ಇದಲ್ಲದೆ ವಂಶ ಪಾರಂಪರ್ಯವಾಗಿ ಸಹ ಈ ಸಮಸ್ಯೆ ಉಂಟಾಗಬಹುದು.. ನಿಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಆಲ್ಬಿನಿಸಂ ಅಥವಾ ರೆಟಿನಿಸಂ ಸಮಸ್ಯೆ ಇದ್ದರೆ ನಿಮಗೂ ಸಹ ಬರುವ ಸಾಧ್ಯತೆ ಇದೆ. ಇವುಗಳು ಚಿಕ್ಕ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಉಂಟುಮಾಡುತ್ತದೆ. ಈ ಸಮಸ್ಯೆ ಇದ್ದರೆ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ಮಂಜಾಗುವ ಸಮಸ್ಯೆ ಶುರುವಾಗುತ್ತದೆ, ಕುರುಡುತನ ಆದರೂ ಆಗಬಹುದು ಎಂದು ನಂಬಲಾಗಿದೆ.
Comments are closed.