ವಿಭಿನ್ನವಾದ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ರಶ್ಮಿಕಾ, ತಮ್ಮ ಯಶಸ್ಸಿನ ಗುಟ್ಟಿನ ಬಗ್ಗೆ ಹೇಳಿದ್ದೇನು ಗೊತ್ತೇ??
ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿರುವ ಕಾರಣ, ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿದ್ದು, ಟಾಲಿವುಡ್, ಬಾಲಿವುಡ್ ಎಲ್ಲಾ ಕಡೆ ಇವರಿಗೆ ಅವಕಾಶಗಳ ಸುರಿಮಳೆಯೇ ಬರುತ್ತಿದೆ ಎಂದರೆ ತಪ್ಪಾಗುವುದಿಲ್ಲ. ರಶ್ಮಿಕಾ ಅವರು ಈಗ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಸಹ ಅಭಿನಯಿಸುತ್ತಿದ್ದಾರೆ. ದಿನೇ ದಿನೇ ಇವರಿಗೆ ಇರುವ ಅಭಿಮಾನಿ ಬಳಗ ಸಹ ಹೆಚ್ಚಾಗುತ್ತಿದೆ. ತಾವು ಒಪ್ಪಿಕೊಂಡಿರುವ ವಿಭಿನ್ನವಾದ ಪಾತ್ರಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರು ಹೇಳುವುದೇನು ಗೊತ್ತಾ?
“ಸಿನಿಮಾ ಮತ್ತು ನಟನೆ ನಿಜಕ್ಕೂ ಬಹಳ ಎಕ್ಸೈಟ್ ಆಗುವ ಹಾಗೆ ಮಾಡುತ್ತದೆ. ನಾನೀಗ ಒಪ್ಪಿಕೊಳ್ಳುತ್ತಿರುವ ಪಾತ್ರಗಳು, ನನ್ನನ್ನು ಹುಡುಕಿಕೊಂಡು ಬರುತ್ತಿರುವ ಪಾತ್ರಗಳು ಬಹಳ ಕ್ರೇಜಿಯಾಗಿದೆ. ನಾನು ನಟಿಸುತ್ತಿರುವ ಎಲ್ಲಾ ಪಾತ್ರಗಳು ಸಹ ಒಂದಕ್ಕಿಂತ ಒಂದು ಬಹಳ ವಿಭಿನ್ನವಾದ ಪಾತ್ರಗಳಾಗಿವೆ, ಈ ರೀತಿಯ ಪಾತ್ರಗಳಿಂದ ವಿಭಿನ್ನವಾದ ಜೀವನ ನಡೆಸುತ್ತಿದ್ದೇನೆ ಎನ್ನುವ ಫೀಲ್ ಇದೆ. ಬೇರೆ ಬೇರೆ ನಿರ್ದೇಶಕರು, ಕಲಾವಿದರ ಜೊತೆ ಕೆಲಸ ಮಾಡಿ, ಹಲವು ವಿಚಾರಗಳನ್ನು ಕಳಿತುಕೊಳ್ಳುತ್ತಿದ್ದೇನೆ..” ಎಂದು ಹೇಳಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ರಶ್ಮಿಕಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 6 ವರ್ಷಗಳಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ ರಶ್ಮಿಕಾ ಅವರು ಬಾಲಿವುಡ್ ಗು ಎಂಟ್ರಿ ಕೊಟ್ಟು, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಒಂದು ಸಿನಿಮಾ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳು ಈಗ ತೆರೆಕಾಣಲು ಸಜ್ಜಾಗಿದೆ. ಇನ್ನು ತಮಿಳಿನಲ್ಲಿ ಖ್ಯಾತ ನಟ ದಳಪತಿ ವಿಜಯ್ ಅವರೊಡನೆ ಅಭಿನಯಿಸುವ ಅವಕಾಶ ಸಹ ಪಡೆದುಕೊಂಡಿದ್ದಾರೆ ರಶ್ಮಿಕಾ. ಚಿತ್ರರಂಗ ಇವರನ್ನು ಲಕ್ಕಿ ಹೀರೋಯಿನ್ ಎಂದೇ ಕರೆಯುತ್ತಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾ ಇನ್ನು ಎತ್ತರಕ್ಕೆ ಬೆಳೆಯಲಿ..
Comments are closed.