ನಾಳಿನ ಪಂದ್ಯದಲ್ಲಿ ಬಹು ನಿರೀಕ್ಷಿತ ಬದಲಾವಣೆಗೆ ಮುಂದಾದ ನಾಯಕ ಡುಪ್ಲೆಸಿಸ್. ಯಾರ್ಯಾರು ಔಟ್ ಗೊತ್ತೇ??
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 15ನೇ ಆವೃತ್ತಿಯಲ್ಲಿ ನಮ್ಮ ಆರ್.ಸಿ.ಬಿ ತಂಡ ಆರಂಭದಲ್ಲಿ ಒಳ್ಳೆಯ ಫಾರ್ಮ್ ನಲ್ಲಿತ್ತು, ಆದರೆ ಈಗ ಎಸ್.ಆರ್.ಹೆಚ್ ತಂಡದ ವಿರುದ್ಧದ ಪಂದ್ಯದಲ್ಲಿ ಹೀನಾಯವಾದ ಸೋಲು ಕಂಡ ನಂತರ, ಆರ್.ಸಿ.ಬಿ ತಂಡದಲ್ಲಿ ಬದಲಾವಣೆ ಮಾಡುವುದು ಖಚಿತ ಎನ್ನಲಾಗುತ್ತಿದೆ. ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಆರ್.ಸಿ.ಬಿ ತಂಡ ಬದಲಾವಣೆ ತರದೆ ಹೋದಲ್ಲಿ, ಮುಂದಿನ ಪಂದ್ಯಗಳು ಬಹಳ ಕಷ್ಟವಾಗಿಬಿಡುವುದು ಖಂಡಿತ. ಹಾಗಿದ್ದರೆ, ಆರ್.ಸಿ.ಬಿ ತಂಡಕ್ಕೆ ಬರುವ ಆಟಗಾರ ಯಾರು?
ಆರ್.ಸಿ.ಬಿ ತಂಡದಲ್ಲಿ ಮೊದಲ ಪಂದ್ಯದಿಂದಲೂ ಬದಲಾವಣೆ ತರಬೇಕು ಎಂದು ಹೇಳಲಾಗಿತ್ತು. ಆದರೆ ಆರ್.ಸಿ.ಬಿ ತಂಡ ಬದಲಾವಣೆ ಮಾಡಿರಲಿಲ್ಲ, ಆದರೆ ಇದು ಬದಲಾವಣೆಯ ಸಮಯ ಆಗಿದೆ. ಇದೀಗ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ನಾಳಿನ ಪಂದ್ಯದಲ್ಲಿ ಆರ್.ಸಿ.ಬಿ ತಂಡದಲ್ಲಿ ಒಂದು ಪ್ರಮುಖವಾದ ಬದಲಾವಣೆ ತರಲಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಆರ್.ಸಿ.ಬಿ ತಂಡದ ಆ ಒಬ್ಬ ಆಟಗಾರ ಹೊರಗುಳಿದರೆ ಒಳ್ಳೆಯದು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಆರ್.ಸಿ.ಬಿ ಆರಂಭಿಕ ಬ್ಯಾಟ್ಸ್ಮನ್ ಅನುಜ್ ರಾವತ್ ಅವರನ್ನು 3+ ಕೋಟಿ ನೀಡಿ ಖರೀದಿ ಮಾಡಿದ್ದಾರೆ..ಆದರೆ ಅನುಜ್ ರಾವತ್ ಈಗ ತಂಡಕ್ಕೆ ತಲೆನೋವಾಗಿದ್ದಾರೆ ಎಂದರೆ ತಪ್ಪಾಗುವದಿಲ್ಲ.
ಎಂಐ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ಅನುಜ್ ರಾವತ್ ಅವರು ಉತ್ತಮವಾದ ಪ್ರದರ್ಶನ ನೀಡಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು. ಅದಾದ ಬಳಿಕ ಅಂತಹ ಉತ್ತಮವಾದ ಪ್ರದರ್ಶನ ಅವರಿಂದ ಬಂದಿಲ್ಲ. ಆರಂಭಿಕ ಬ್ಯಾಟ್ಸ್ಮನ್ ಆಗಿರುವವರು ಜೀರೋ ಗೆ ಡಗ್ ಔಟ್ ಆಗುವುದನ್ನು ನೋಡಲು ಬೇಸರವಾಗುತ್ತದೆ, ಇದು ಆರ್.ಸಿ.ಬಿ ತಂಡಕ್ಕೆ ತಲೆ ನೋವು ತಂದಿದೆ, ಹಾಗಾಗಿ ಬಹುತೇಕ ಎಲ್ಲರೂ ಸಹ ಅನುಜ್ ರಾವತ್ ಅವರನ್ನು ಬದಲಾವಣೆ ಮಾಡಬೇಕು ಎನ್ನುತ್ತಿದ್ದಾರೆ. ಡಿ.ಆರ್.ಎಸ್ ಶೋನಲ್ಲಿ ಸಹ ಇದನ್ನೇ ಹೇಳುತ್ತಿದ್ದರು. ಅನುಜ್ ರಾವತ್ ಅವರ ಬದಲಾಗಿ ಮಹಿ ಲೊಮ್ರ ಅವರನ್ನು ತರಬೇಕು ಎನ್ನುತ್ತಿದ್ದಾರೆ.
Comments are closed.