Neer Dose Karnataka
Take a fresh look at your lifestyle.

ಬೇರೆ ಯಾವುದೇ ಬೇಡ ಇದೊಂದು ಬದಲಾವಣೆ ಮಾಡಿದರೆ ಗೆಲುವು ನಮ್ಮದೇ ಎಂದ ಕ್ರಿಕೆಟ್ ಪಂಡಿತರು, ಆರ್ಸಿಬಿಯಲ್ಲಿ ಏನು ಬದಲಾವಣೆ ಮಾಡಬೇಕಂತೆ ಗೊತ್ತೇ??

ನಮ್ಮ ಹೆಮ್ಮೆಯ ಆರ್.ಸಿ.ಬಿ ತಂಡವು ಈ ಬಾರಿ ಕಪ್ ಗೆಲ್ಲುವ ಮಹದಾಸೆ ಹೊಂದಿದೆ. ಆರಂಭದ ಪಂದ್ಯಗಳನ್ನು ಉತ್ತಮವಾಗಿ ಆಡಿ, 5 ಪಂದ್ಯಗಳನ್ನು ಗೆದ್ದು, ಒಳ್ಳೆಯ ಫಾರ್ಮ್ ನಲ್ಲಿದ್ದ ಆರ್.ಸಿ.ಬಿ ಈಗ ಫಾರ್ಮ್ ಕಳೆದುಕೊಂಡು ಕಳೆದ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದೆ. ಅಂಕಪ್ಪಟಿಯಲ್ಲಿ ಕೆಳಗೆ ಇಳಿಯುವುದು ಮಾತ್ರವಲ್ಲದೆ, ನೆಟ್ ರನ್ ರೇಟ್ ಸಹ ಕಡಿಮೆ ಆಗಿದೆ. 9 ಪಂದ್ಯಗಳಲ್ಲಿ 5 ಗೆದ್ದು, 4 ಪಂದ್ಯಗಳನ್ನು ಆರ್.ಸಿ.ಬಿ ಸೋತಿದೆ. ಇನ್ನು 5 ಪಂದ್ಯಗಳಿದ್ದು, ಪ್ಲೇ ಆಫ್ಸ್ ಪ್ರವೇಶಿಸಲು ಅವುಗಳಲ್ಲಿ 3 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಫೈನಲ್ಸ್ ತಲುಪುವುದಕ್ಕೆ ಸಹಾಯವಾಗಬೇಕು ಎಂದರೆ, ಆರ್.ಸಿ.ಬಿ ತಂಡ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು, ಆಗ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಬರುತ್ತದೆ ಆರ್.ಸಿ.ಬಿ. ಆರ್.ಸಿ.ಬಿ ಮುಂದಿನ ಪಂದ್ಯ ಇರುವುದು ನಾಳೆ, ಗುಜರಾತ್ ಟೈಟನ್ಸ್ ಟೀಮ್ ವಿರುದ್ಧ, ಈ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ಅವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸನ್ ರೈಸರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 68ಕ್ಕೆ ಆಲ್ ಔಟ್ ಆಗಿ ಹೀನಾಯವಾಗಿ ಸೋಲು ಕಂಡಿತು ಆರ್.ಸಿ.ಬಿ. ಅದಕ್ಕಿಂತ ಮೊದಲಿನ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ, ಬೌಲಿಂಗ್ ಪ್ರದರ್ಶನ ಚೆನ್ನಾಗಿದ್ದರೂ ಸಹ, ಬ್ಯಾಟಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿ ಸೋತಿತ್ತು..

ಮುಂದಿನ 5 ಪಂದ್ಯಗಳನ್ನು ಸಹ ಗೆಲ್ಲಲೇಬೇಕು ಎಂದು ಫಾಫ್ ನೇತೃತ್ವದ ಆರ್.ಸಿ.ಬಿ ತಂಡ ನಿರ್ಧಾರ ಮಾಡಿದೆ., ಹಾಗಾಗಿ ನಾಳಿನ ಪಂದ್ಯದಲ್ಲಿ ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ರಜತ್ ಪಾಟೀದಾರ್ ಅವರನ್ನು ಪಂದ್ಯದಿಂದ ಹೊರಗಿಟ್ಟು, ಅವರ ಬದಲಾಗಿ, ಮಹಿಪಾಲ್ ಅವರನ್ನು ಕಣಕ್ಕೆ ಇಳಿಸಲಾಗಬಹುದು ಎನ್ನಲಾಗುತ್ತಿದೆ.  ಎಸ್.ಆರ್.ಹೆಚ್ ವಿರುದ್ಧ ಸೋತ ಕಳೆದ ಪಂದ್ಯವನ್ನು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಡಿತ್ತು ಆರ್.ಸಿ.ಬಿ. ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಈ ಗ್ರೌಂಡ್ ಸಪೋರ್ಟ್ ಮಾಡುತ್ತದೆ. ಹಾಗಾಗಿ ನಾಳಿನ ಪಂದ್ಯವನ್ನು ಆರ್.ಸಿ.ಹಿ ತಂಡವು ಜಾಗರೂಕವಾಗಿ ಆಡಬೇಕಿದೆ. ಆದರೆ ನಾಳಿನ ಪಂದ್ಯದಲ್ಲಿ ಇಬ್ಬನಿ ಹೇಗಿರುತ್ತದೆ ಎಂದು ನೋಡಬೇಕಿದೆ.

Comments are closed.