ಇಂದು ಕಾಲದಲ್ಲಿ ಪಾಕ್ ವ್ಯಕ್ತಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷಲ್ ಪಟೇಲ್ ರವರ ಜೀವನ ಕಥೆಯೇನು ಗೊತ್ತೇ??
ನಮ್ಮ ಆರ್.ಸಿ.ಬಿ ತಂಡದ ಪ್ರಮುಖ ಬೌಲರ್ , ಪರ್ಪಲ್ ಪಟೇಲ್ ಎಂದೇ ಖ್ಯಾತಿಯಾಗಿರುವವರು ಹರ್ಷಲ್ ಪಟೇಲ್. ಕಳೆದ ಎರಡು ವರ್ಷಗಳಿಂದ ಹರ್ಷಲ್ ಪಟೇಲ್ ಅವರು ಆರ್.ಸಿ.ಬಿ ತಂಡದ ಸ್ಟಾರ್ ಬೌಲರ್ ಆಗಿ ಮಿಂಚುತ್ತಿದ್ದಾರೆ. ಅನೇಕ ವಿಕೆಟ್ ಗಳನ್ನು ಪಡೆದು, ಎದುರಾಳಿ ಬ್ಯಾಟ್ಸ್ಮನ್ ಗೆ ಭಯ ಹುಟ್ಟುವ ಹಾಗೆ ಮಾಡುತ್ತಾರೆ ಹರ್ಷಲ್. ಆರ್.ಸಿ.ಬಿ ಫ್ಯಾನ್ಸ್ ಗಳು ಇವರ ಬೌಲಿಂಗ್ ಟೆಕ್ನಿಕ್ಸ್ ಕಂಡು ಫಿದಾ ಆಗುವುದು ಖಂಡಿತ. 2021ರಲ್ಲಿ ಇವರು ಬರೋಬ್ಬರಿ 32 ವಿಕೆಟ್ಸ್ ಗಳನ್ನು ಪಡೆದು ಪರ್ಪಲ್ ಪಟೇಲ್ ಎಂದು ಹೆಸರು ಪಡೆದುಕೊಂಡಿದ್ದರು.
ಹಾಗಾಗಿ ಈ ವರ್ಷ ಆರ್.ಸಿ.ಬಿ ತಂಡ 10.75 ಕೋಟಿ ರೂಪಾಯಿ ನೀಡಿ ಇವರನ್ನು ಉಳಿಸಿಕೊಂಡಿದೆ. ಈ ವರ್ಷವೂ ಹರ್ಷಲ್ ಪಟೇಲ್ ಅವರ ಬೌಲಿಂಗ್ ಪ್ರದರ್ಶನ ಅಷ್ಟೇ ಚೆನ್ನಾಗಿದೆ. ಇಂದು ಇಷ್ಟು ಎತ್ತರಕ್ಕೆ ಏರಿರುವ ಹರ್ಷಲ್ ಪಟೇಲ್ ಅವರು ಹಿಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದು ಭಾರತದಲ್ಲಿ ಅಲ್ಲ, ದೂರದ ಅಮೆರಿಕಾದಲ್ಲಿ. ಹರ್ಷಲ್ ಅವರ ಜೀವನದಲ್ಲಿ ನಿಜಕ್ಕೂ ನಡೆದಿದ್ದೇನು? ತಿಳಿಸುತ್ತೇವೆ ನೋಡಿ..
ಬಾಲ್ಯದ ದಿನಗಳಲ್ಲಿ ಹಾಗೂ ನಂತರದ ದಿನಗಳಲ್ಲಿ ಹರ್ಷಲ್ ಪಟೇಲ್ ಅವರು ಎಷ್ಟು ಕಷ್ಟಪಟ್ಟಿದ್ದಾರೆ. ಈ ಬಗ್ಗೆ ಸ್ವತಃ ಹರ್ಷಲ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹರ್ಷಲ್ ಪಟೇಲ್ ಅವರ ಕುಟುಂಬ ಅಮೆರಿಕಾದ ನ್ಯೂ ಜೆರ್ಸಿಯಲ್ಲಿತ್ತು. ಅಲ್ಲಿದ್ದಾಗ ಹರ್ಷಲ್ ಪಟೇಲ್ ಅವರು ಪಾಕಿಸ್ತಾನಿ ವ್ಯಕ್ತಿಯೊಬ್ಬರ ದ್ರವ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಬಹಳ ಕಷ್ಟ ಪಟ್ಟಿದ್ದರಂತೆ ಹರ್ಷಲ್. ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇಬ್ಬರು ಸಹ ಬೇಗ ಕೆಲಸಕ್ಕೆ ಹೊರಡುತ್ತಿದ್ದರಂತೆ. ಹರ್ಷಲ್ ಪಟೇಲ್ ಸಹ ಬೆಳಗ್ಗೆ 7 ಗಂಟೆ ಸಮಯಕ್ಕೆ ದ್ರವ್ಯದ ಅಂಗಡಿಗೆ ಹೋಗುತ್ತಿದ್ದರಂತೆ. ಆದರೆ ಅಂಗಡಿ ತೆರೆಯುತ್ತಿದ್ದದ್ದು 9ಗಂಟೆಗೆ..
ಅಲ್ಲಿಯವರೆಗೂ ಟೈಮ್ ಪಾಸ್ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಹರ್ಷಲ್ ಅವರಿಗೆ ಒಂದು ಪದ ಕೂಡ ಇಂಗ್ಲಿಷ್ ಬರುತ್ತಿರಲಿಲ್ಲವಂತೆ, ಹಾಗಾಗಿ ಭಾಷೆಯ ಸಮಸ್ಯೆ ಎದುರಿಸಿದ್ದರು ಹರ್ಷಲ್. ನಂತರದ ದಿನಗಳಲ್ಲಿ ಇಂಗ್ಲಿಷ್ ಕಳಿತುಕೊಂಡರಂತೆ. ಆ ದ್ರವ್ಯದ ಅಂಗಡಿಯಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು ಹರ್ಷಲ್. ಆ ಸಮಯದಲ್ಲಿ ದಿನಕ್ಕೆ 35 ಡಾಲರ್ ಸಂಪಾದನೆ ಮಾಡುತ್ತಿದ್ದರಂತೆ. ನಂತರ ಹರ್ಷಲ್ ಅವರು ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿದ ಕಾರಣ ತಂದೆ ತಾಯಿಯ ಬಳಿ ಕ್ರಿಕೆಟ್ ಅಭ್ಯಾಸ ಮಾಡುವುದಾಗಿ ತಿಳಿಸಿದರಂತೆ. ಆಗ ಹರ್ಷಲ್ ಅವರ ತಂದೆ ತಾಯಿ ಅವರನ್ನು ಗುಜರಾತ್ ನಲ್ಲೇ ಬಿಟ್ಟು, ಅವರೆಲ್ಲರೂ ಅಮೆರಿಕಾಗೆ ಹೋದರಂತೆ. ಹರ್ಷಲ್ ಜೊತೆಯಲ್ಲಿ ಅವರ ಸಹೋದರ ಇದ್ದರು.
ಅಮೆರಿಕಾಗೆ ಹೋಗುವಾಗ ಹರ್ಷಲ್ ಅವರ ತಂದೆ ತಾಯಿ ಹೇಳಿದ್ದು ಒಂದೇ ಮಾತು, ನಮಗೆ ಕೆಟ್ಟ ಹೆಸರು ತರಬೇಡ ಎಂದು..ಹರ್ಷಲ್ ಅವರು ಇಂದಿಗೂ ಆ ಮಾತನ್ನು ಪಾಲಿಸಿಕೊಂಡು ಬಂದಿದ್ದಾರೆ. ಬೆಳಗ್ಗೆ 7 ರಿಂದ 10 ಗಂಟೆ ವರೆಗೂ ಅಭ್ಯಾಸ ಮಾಡುತ್ತಿದ್ದ ಹರ್ಷಲ್ ಅಲ್ಲಿ ಸಿಗುತ್ತಿದ್ದ ಸ್ಯಾಂಡ್ವಿಚ್ ಸೇವಿಸಿ ಜೀವನ ನಡೆಸುತ್ತಿದ್ದರಂತೆ. ಸತತ ಪರಿಶ್ರಮ ಹಾಕಿ ಅದ್ಭುತವಾಗಿ ಬೌಲಿಂಗ್ ಕಲಿತ ನಂತರ 2009-10ರಲ್ಲಿ ಗುಜರಾತ್ ಜ್ಯೂನಿಯರ್ ಕ್ರಿಕೆಟ್ ಸೆಲೆಕ್ಟ್ ಆಗುತ್ತಾರೆ ಹರ್ಷಲ್. ಈ ಮೂಲಕ ಕ್ರಿಕೆಟ್ ನಲ್ಲಿ ವೃತ್ತಿ ಜೀವನ ಆರಂಭಿಸುತ್ತಾರೆ..
2009 ರಲ್ಲಿ ನಡೆದ ಅಂಡರ್ 19 ವಿನೂ ಮುಕುಂದ್ ಟ್ರೋಫಿಯಲ್ಲಿ 23 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದರು. 2010 ರಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪ್ರಸ್ತುತ ಹರ್ಷಲ್ ಅವರು ಹರಿಯಾಣ ತಂಡದ ಕ್ಯಾಪ್ಟನ್ ಆಗಿ ಹಾಗೂ ಆರ್.ಸಿ.ಬಿ ತಂಡದ ಪ್ರಮುಖ ಬೌಲರ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷದ ಐಪಿಎಲ್ ಪಂದ್ಯದಲ್ಲಿ 19 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
Comments are closed.