ಪೂರ್ವಜರು ನಿರ್ಮಾಣ ಮಾಡಿದ್ದ 48 ವರ್ಷದ ಬಂಗಲೆಯನ್ನು ತೊರೆದ ಗಂಗೂಲಿ, ಹೊಸ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ??
ಕ್ರಿಕೆಟ್ ಲೆಜೆಂಡ್ ಸೌರವ್ ಗಂಗೂಲಿ ಅವರು, ಒಂದು ಕಾಲದಲ್ಲಿ ಗಂಗೂಲಿ ಅವರ ಆಟದ ವೈಖರಿ ನೋಡಿ ನೋಡಿ ಫಿದಾ ಆಗದೆ ಇರುವವರಿಲ್ಲ. ಪ್ರಸ್ತುತ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಂಗೂಲಿ ಅವರು ವಾಸ ಮಾಡುತ್ತಿರುವುದು ಕೋಲ್ಕತ್ತಾದಲ್ಲಿ. ಹುಟ್ಟಿದಾಗಿನಿಂದಲೇ ಬಹಳ ಶ್ರೀಮಂತ ಕುಟುಂಬದ ವಾತಾವರಣದಲ್ಲಿ ಬೆಳೆದವರು ಸೌರವ್ ಗಂಗೂಲಿ. ಇವರು ಇಷ್ಟು ವರ್ಷಗಳ ಕಾಲ ಪೂರ್ವಿಕರು ಕಟ್ಟಿಸಿದ ಮನೆಯಲ್ಲೇ ವಾಸ ಮಾಡುತ್ತಿದ್ದರು.ಆದರೆ ಈಗ ತಮ್ಮದೇ ಆದ ಐಷಾರಾಮಿ ದುಬಾರಿ ಸ್ವಂತ ಮನೆ ಖರೀದಿಸಿ ಅಲ್ಲಿಯೇ ವಾಸ್ತವ್ಯ ಶುರು ಮಾಡಿದ್ದಾರೆ.
ಸೌರವ್ ಗಂಗೂಲಿ ಅವರು ಹುಟ್ಟಿದಾಗಿನಿಂದಲೂ ನಾವಬಾನಂತೆ ಬೆಳೆದವರು. ಇವರ ತಂದೆ ಚಂಡಿದಾಸ್ ಅವರು ಮುದ್ರಣ ವ್ಯವಹಾರ ಮಾಡುತ್ತಿದ್ದರು. ಕೋಲ್ಕತ್ತಾ ನಗರದ ಶ್ರೀಮಂತ ವ್ಯಕ್ತಿಗಳಲ್ಲಿ ಸೌರವ್ ಗಂಗೂಲಿ ಅವರ ತಂದೆ ಸಹ ಒಬ್ಬರಾಗಿದ್ದರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಗಂಗೂಲಿ ಅವರು ಚಿಕ್ಕ ವಯಸ್ಸಿನಿಂದಲೂ ಯಾವುದಕ್ಕೂ ಕೊರತೆ ಅನುಭವಿಸಿದವರಲ್ಲ. ಗಂಗೂಲಿ ಅವರ ತಂದೆ ಕೋಲ್ಕತ್ತಾದ ಬೆಹಲಾ ಎನ್ನುವ ಪ್ರದೇಶದಲ್ಲಿ ತಮ್ಮ ಕುಟುಂಬಕ್ಕಾಗಿ ಅಲಿಶನ್ ಎನ್ನುವ ಮನೆಯನ್ನು ನಿರ್ಮಿಸಿದರು, ಅಂದು ಕಟ್ಟಿಸಿದ ಈ ಮನೆ ಇಂದು ಕೋಟ್ಯಾನುಕೋಟಿ ಬೆಲೆ ಬಾಳುತ್ತದೆ. 48 ವರ್ಷಗಳ ಕಾಲ ದಾದ ಅವರು ಅದೇ ಮನೆಯಲ್ಲಿದ್ದರು. ಆದರೆ ಈಗ ಹೊಸ ಮನೆ ಖರೀದಿಸಿರುವ ಕಾರಣ ಪೂರ್ವಜರ ಮನೆಯಿಂದ ಹೊರಬಂದಿದ್ದಾರೆ.ಗಂಗೂಲಿ ಅವರು ಹೊಸದಾಗಿ ಖರೀದಿ ಮಾಡಿರುವ ಮನೆ ಬರೋಬ್ಬರಿ 40 ಕೋಟಿ ರೂಪಾಯಿಯದ್ದು ಎನ್ನಲಾಗಿದೆ. ಗಂಗೂಲಿ ಅವರು ಖಾಸಗಿ ಸಂದರ್ಶನ ಒಂದರಲ್ಲಿ ಈ ವಿಚಾರ ತಿಳಿಸಿದ್ದಾರೆ.
ಹೊಸ ಮನೆ ಖರೀದಿ ಮಾಡಿರುವುದಕ್ಕೆ ತುಂಬಾ ಸಂತೋಷ ಇದೆ, ನಗರದ ಮಧ್ಯಭಾಗದಲ್ಲಿ ವಾಸ ಮಾಡುವುದು ಆರಾಮವಾಗಿರುತ್ತದೆ. ಆದರೆ 48 ವರ್ಷಗಳಿಂದ ಬಾಳಿ ಬದುಕಿದ ಮನೆಯನ್ನು ಬಿಟ್ಟು ಬರುವುದು ಕಷ್ಟವಾದ ವಿಚಾರ ಎಂದು ಗಂಗೂಲಿ ಅವರು ತಿಳಿಸಿದ್ದಾರೆ. ಗಂಗೂಲಿ ಅವರು ಖರೀದಿ ಮಾಡಿರುವ ಮನೆ ಸುಮಾರು 16 ಸಾವಿರ ಅಡಿ ಚದರ ಇದೆ, ಕೋಲ್ಕತ್ತಾದ ಲೋವರ್ ರೌಡನ್ ಸ್ಟ್ರೀಟ್ ನಲ್ಲಿ ಈ ಮನೆ ಇದೆ, ಕೊಲ್ಕತ್ತಾ ನಗರದ ಶ್ರೀಮಂತ ಏರಿಯಾದಲ್ಲಿ ಇದು ಒಂದಾಗಿದೆ, ಗಂಗೂಲಿ ಅವರ ಮನೆ ನಗರದ ಹೃದಯ ಭಾಗದಲ್ಲಿದ್ದು, ಎಲ್ಲಾ ಸ್ಥಳಗಳಿಗೆ ಹೋಗಲು ಗಂಗೂಲಿ ಅವರ ಕುಟುಂಬಕ್ಕೆ ಅನುಕೂಲ ಆಗುತ್ತದೆ. ಜೊತೆಗೆ ಇವರ ಮನೆ ಇರುವ ಪ್ರದೇಶ ಬಹಳ ಶಾಂತ ಆಗಿದೆ. ಈ ಹೊಸ ಮನೆಯನ್ನು ಉದ್ಯಮಿ ಅನುಪನಾ ಬಗ್ಡಿ, ಕೇಶವ್ ದಾಸ್ ಬಿನಾನಿ ಮತ್ತು ನಿಕುಂಜ್ ದಾಸ್ ಬಿನಾನಿ ಎನ್ನುವವರಿಂದ ಖರೀದಿ ಮಾಡಿದ್ದಾರೆ. ಗಂಗೂಲಿ ಅವರು, ಅವರ ಪತ್ನಿ ಡೋನಾ ಗಂಗೂಲಿ, ಮಗಳು ಸನಾ ಗಂಗೂಲಿ ಹಾಗೂ ತಾಯಿ ನಿರೂಪಾ ಗಂಗೂಲಿ ಸಹ ಮನೆಯ ಪಾಲುದಾರರಾಗಿದ್ದಾರಂತೆ.
Comments are closed.