Neer Dose Karnataka
Take a fresh look at your lifestyle.

ಆಯ್ಕೆ ಸಮಿತಿಯ ವಿರುದ್ಧ ಮೊದಲ ಬಾರಿಗೆ ಅಸಮಾಧಾನ ಹೊರಹಾಕಿದ ವೀರೇಂದ್ರ ಸೆಹ್ವಾಗ್, ಯಾಕೆ ಗೊತ್ತೇ?? ಯಾರನ್ನು ಆಯ್ಕೆ ಮಾಡಬೇಕಿತ್ತು ಅಂತೇ ಗೊತ್ತೇ?

ಐಪಿಎಲ್ ಪಂದ್ಯಗಳು ಇನ್ನೇನು ಮುಗಿಯಲಿದ್ದು, ಇದೀಗ ಐಪಿಎಲ್ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟಿ20 ವರ್ಲ್ಡ್ ಕಪ್ ಪಂದ್ಯ, ಭಾರತದಲ್ಲೆ ನಡೆಯಲಿದ್ದು, ಈಗಾಗಲೇ ಈ ಸರಣಿ ಪಂದ್ಯಗಳಿಗೆ ಸೆಲೆಕ್ಟ್ ಆಗಿರುವ ಆಟಗಾರರು ಯಾರು ಎಂದು ಬಿಸಿಸಿಐ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ಸೇರಿದಂತೆ ಇನ್ನು ಕೆಲವು ಆಟಗಾರರ ಅನುಪಸ್ಥಿತಿಯಲ್ಲಿ ತವರಿನಲ್ಲಿ ಸರಣಿ ಪಂದ್ಯಗಳು ನಡೆಯಲಿದೆ. ಇದೀಗ ಭಾರತ ಕ್ರಿಕೆಟ್ ತಂಡದ ಹೈದರಾಬಾದ್ ನ ವೇಗಿ ಆಗಿರುವ, ರಾಹುಲ್ ತ್ರಿಪಾಠಿ ಅವರಿಗೆ ಅವಕಾಶ ಸಿಕ್ಕಿಲ್ಲ ಎಂದು ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ನಲ್ಲಿ ಮೊದಲಿಗೆ ಕೆಕೆಆರ್ ತಂಡದ ಪರವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿ ಅವರು, ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಂದರು. ಈ ವರ್ಷ ಐಪಿಎಲ್ ನಲ್ಲಿ ಇವರು ಆಡಿರುವ 13 ಪಂದ್ಯಗಳಲ್ಲಿ ಶೇ.39 ರ ಸರಾಸರಿಯಂತೆ 393 ರನ್ ಗಳನ್ನು ಗಳಿಸಿದ್ದಾರೆ. ಇವರು ಉತ್ತಮವಾದ ಫಾರ್ಮ್ ನಲ್ಲಿದ್ದು, ಟಿ20 ವಿಶ್ವಕಪ್ ಪಂದ್ಯಗಳಿಗೆ ಇವರು ಸೂಕ್ತವಾದ ಆಟಗಾರನಾಗಿದ್ದು, ಇವರನ್ನು ಸೆಲೆಕ್ಟ್ ಮಾಡದೆ ಇರುವ ಬಗ್ಗೆ ಹರ್ಭಜನ್ ಸಿಂಗ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ..”ದಕ್ಷಿಣ ಆಫ್ರಿಕಾ ಟಿ20 ಸರಣಿಯ ಭಾರತ ತಂಡದಲ್ಲಿ ರಾಹುಲ್ ತ್ರಿಪಾಠಿ ಅವರ ಹೆಸರು ಕಾಣಿಸದೆ ಇರುವುದು ನನಗೆ ತುಂಬಾ ನಿರಾಶೆ ತಂದಿದೆ. ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಅವರು ಅರ್ಹರಾಗಿದ್ದಾರೆ..” ಎಂದು ಟ್ವೀಟ್ ಮಾಡಿದ್ದಾರೆ ಹರ್ಭಜನ್ ಸಿಂಗ್.

ಇನ್ನು ವೀರೇಂದ್ರ ಸೆಹ್ವಾಗ್ ಅವರು ಸಹ, ಸಂದರ್ಶನ ಒಂದರಲ್ಲಿ ಮಾತನಾಡುವಾಗ, ಈ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೊದಲು ಸೂರ್ಯಕುಮಾರ್ ಯಾದವ್ ಅವರಿಗೆ ಬಂದಂತಹ ಪರಿಸ್ಥಿತಿ ಈಗ ರಾಹುಲ್ ತ್ರಿಪಾಠಿ ಅವರಿಗೆ ಬಂದಿದೆ ಎಂದು ಹೇಳಿದ್ದಾರೆ ವೀರೇಂದ್ರ ಸೆಹ್ವಾಗ್. ಇನ್ನು ಟಿ20 ವಿಶ್ವಕಪ್ ಸರಣಿ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕೆ.ಎಲ್.ರಾಹುಲ್ ಅವರಿಗೆ ನೀಡಲಾಗಿದೆ. ಈ ಬಾರಿ ತಂಡ ಹೀಗಿದೆ. ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್‌ ಮತ್ತು ಉಪನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್‌, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

Comments are closed.