Neer Dose Karnataka
Take a fresh look at your lifestyle.

ಪ್ಲೇ ಆಫ್ ಪಂದ್ಯದ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಮತ್ತೊಂದು ಶಾಕ್. ಕೊನೆ ಕ್ಷಣದಲ್ಲಿ ಹೀಗೇ ಕೈ ಕೊಡೋದು?? ಅದೃಷ್ಟವೇ ಸರಿ ಇಲ್ಲ ಎಂದ ಫ್ಯಾನ್ಸ್. ಯಾಕೆ ಗೊತ್ತೇ?

ಈ ವರ್ಷ ಐಪಿಎಲ್ 15ನೇ ಆವೃತ್ತಿಯಲ್ಲಿ ಆರ್.ಸಿ.ಬಿ ತಂಡ ಪ್ಲೇಆಫ್ಸ್ ಹಂತ ತಲುಪಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು, ಹಾಗಾಗಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ಸ್ ತಲುಪಿದೆ. ಆರ್.ಸಿ.ಬಿ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೌ ಸೂಪರ್ ಜೈನ್ಟ್ಸ್ ತಂಡದ ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯ ಮೇ 25ರಂದು ಅಂದರೆ ನಾಳೆ ನಡೆಯಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಆರ್.ಸಿ.ಬಿ ಗೆದ್ದು ಫೈನಲ್ಸ್ ತಲುಪಲಿ ಎನ್ನುವುದೇ ಎಲ್ಲಾ ಅಭಿಮಾನಿಗಳ ಆಸೆ, ಆದರೆ ಈಗ ಆರ್.ಸಿ.ಬಿ ಫೈನಲ್ಸ್ ತಲುಪುವಲ್ಲಿ ಒಂದು ತೊಂದರೆ ಬಂದು ನಿಂತಿದೆ.

ಆರ್.ಸಿ.ಬಿ ತಂಡ ಪ್ಲೇಆಫ್ಸ್ ತಲುಪಿದೆ, ಇಲ್ಲಿಂದ ಮೂರು ಪಂದ್ಯಗಳನ್ನು ಗೆದ್ದರೆ, ಆರ್.ಸಿ.ಬಿ ಕಪ್ ಗೆಲ್ಲುತ್ತದೆ ಎಂದು ಎಲ್ಲಾ ಅಭಿಮಾನಿಗಳು ಆಸೆ ಇಟ್ಟುಕೊಂಡಿದ್ದರು. ಆರ್.ಸಿ.ಬಿ ತಂಡ ಗೆಲ್ಲಬೇಕು ಎಂದು ಬಹುತೇಕ ಕ್ರಿಕೆಟಿಗರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಯಾಕೋ ಆರ್.ಸಿ.ಬಿ ಗೆಲುವಿನ ಹಾದಿ ಸುಗಮವಾಗಿಲ್ಲ, ಒಂದಲ್ಲ ಒಂದು ಅಡೆತಡೆಗಳು ಬರುತ್ತಲೇ ಇದೆ. ಇದೀಗ ಮಳೆಯ ವಿಚಾರದಿಂದ ಆರ್.ಸಿ.ಬಿ ತಂಡ ಫೈನಲ್ಸ್ ತಲುಪುತ್ತದೋ ಇಲ್ಲವೋ ಎನ್ನುವ ಆತಂಕ ಶುರುವಾಗಿದೆ. ನಾಳಿನ ಎಲಿಮಿನೇಟರ್ ಪಂದ್ಯ ನಡೆಯಲಿರಿವುದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ, ಆದರೆ ಕೋಲ್ಕತ್ತಾದಲ್ಲಿ ಒಂದು ವಾರ ಮಳೆ ಬರುವ ಸಾಧ್ಯತೆ ಇದೆ. ಇಂದು ನಡೆಯುತ್ತರುವ ಅಥವಾ ನಾಳೆ ನಡೆಯಲಿರುವ ಪಂದ್ಯವನ್ನು ರೀಶೆಡ್ಯೂಲ್ ಮಾಡಲು ಈಗ ಸಮಯ ಇಲ್ಲ.

ಹಾಗಾಗಿ ಒಂದು ವೇಳೆ ಮಳೆ ಇಂದ ತೊಂದರೆಯಾದರೆ ಆರ್.ಸಿ.ಬಿ ಟೂರ್ನಿಯಿಂದ ಮನೆಗೆ ಹೋಗುವ ಪರಿಸ್ಥಿತಿ ಬರುತ್ತದೆ. ಈಗಾಗಲೇ ಗುಜರಾತ್ ಟೈಟನ್ಸ್ ತಂಡ ಮೊದಲ ಸ್ಥಾನದಲ್ಲಿರುವ ಕಾರಣ, ಒಂದು ವೇಳೆ ಗುಜರಾತ್ ಮತ್ತು ರಾಜಸ್ತಾನ್ ತಂಡದ ನಡುವಿನ ಕ್ವಾಲಿಫೈಯರ್ ಪಂದ್ಯದ ದಿನ ಮಳೆ ಬಂದರೆ, ಗುಜರಾತ್ ಡೈರೆಕ್ಟ್ ಆಗಿ ಫೈನಲ್ಸ್ ಗೆ ಕ್ವಾಲಿಫೈ ಆಗುತ್ತದೆ. ರಾಜಸ್ತಾನ್ ತಂಡ ಎಲಿಮಿನೇಟರ್ 2 ಪಂದ್ಯಕ್ಕೆ ಎಂಟ್ರಿ ಕೊಡುತ್ತದೆ. ನಾಳೆ ಆರ್.ಸಿ.ಬಿ ಮತ್ತು ಲಕ್ನೌ ಸೂಪರ್ ಜೈನ್ಟ್ಸ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದ ಸಮಯದಲ್ಲಿ ಮಳೆ ಬಂದರೆ, ಲಕ್ನೌ ಸೂಪರ್ ಜೈನ್ಟ್ಸ್ ತಂಡದ ಅಂಕ ಮತ್ತು ರನ್ ರೇಟ್ ಎರಡು ಹೆಚ್ಚಾಗಿರುವ ಕಾರಣ, ಲಕ್ನೌ ತಂಡ ಕ್ವಾಲಿಫೈಯರ್ 2 ಪಂದ್ಯಕ್ಕೆ ಹೋಗಲಿದ್ದು, ಆರ್.ಸಿ.ಬಿ ಮನೆಗೆ ಹೋಗುವ ಹಾಗೆ ಆಗುತ್ತದೆ. ಹಾಗಾಗಿ ಇದೆಲ್ಲವೂ ಮಳೆಯ ಮೇಲೆ ನಿರ್ಧಾರವಾಗಿದೆ.

Comments are closed.