ಈ ಬಾರಿಯ ಜೂನ್ ತಿಂಗಳಲ್ಲಿ ಈ ಮೂರು ರಾಶಿಯ ಜನರು ಮುಟ್ಟಿದೆಲ್ಲವು ಚಿನ್ನ. ಯಾರ್ಯಾರಿಗೆ ಗೊತ್ತೇ??
ಈ ಜೂನ್ ತಿಂಗಳು ಹಲವು ರಾಶಿಗಳಿಗೆ ಮಂಗಳಫಲ ನೀಡಲಿದೆ. ಈ ತಿಂಗಳಿನಲ್ಲಿ ಹಲವು ಗ್ರಹಗಳು ಸ್ಥಾನ ಬದಲಾಯಿಸಲಿದೆ ಹಾಗಾಗಿ, ಜೂನ್ ತಿಂಗಳು ಕೆಲವು ರಾಶಿಗಳಿಗೆ ಒಳ್ಳೆಯದನ್ನು ಮಾಡಲಿದೆ. ಈ ತಿಂಗಳಿನಲ್ಲಿ ಶನಿ ಗ್ರಹವು ಹಿಮ್ಮುಖವಾಗಿ ಚಲಿಸುತ್ತದೆ, ಈ ವಕ್ರನಡೆಯಿಂದ, ಹಾಗು ಸೂರ್ಯ, ಚಂದ್ರ, ಶುಕ್ರ ಗ್ರಹ ಮತ್ತು ಇನ್ನು ಕೆಲವು ಗ್ರಹಗಳು ಸ್ಥಾನ ಬದಲಾವಣೆ ಮಾಡಿಕೊಳ್ಳುವುದರಿಂದ, ಕೆಲವು ರಾಶಿಯಗಳಿಗೆ ಒಳ್ಳೆಯದಾಗಲಿದ್ದು, ಅದರಲ್ಲೂ ಮೂರು ರಾಶಿಗಳಿಗೆ ಮಂಗಳಕರ ಫಲ ಸಿಗಲಿದೆ.. ಯಶಸ್ಸು ಪಡೆಯುವ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಯವರಿಗೆ ಜೂನ್ ತಿಂಗಳು ಅತ್ಯುತ್ತಮವಾಗಿರಲಿದೆ. ಕೆಲಸ ಮಾಡುತ್ತಿರುವವರಿಗೆ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತೀರ್ಣ ಹೊಂದಲು ಇದು ಒಳ್ಳೆಯ ಸಮಯ ಆಗಿದೆ. ವಿದೇಶದಲ್ಲಿ ಕೆಲಸ ಮಾಡುವ ಆಸೆ ಹೊಂದಿರುವವರಿಗೆ ಉದ್ಯೋಗಾವಕಾಶ ಸಿಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರಲಿದೆ, ವ್ಯಾಪಾರ ಮಾಡುವವರಿಗೆ ಉತ್ತಮವಾದ ದಿನಗಳಾಗಿ, ಹೆಚ್ಚಿನ ಲಾಭ ಬರುತ್ತದೆ. ವೈಯಕ್ತಿಕ ಬದುಕಿನಲ್ಲಿ ಸಂತೋಷವಾಗಿರುತ್ತೀರಿ..
ವೃಷಭ ರಾಶಿ :- ಜೂನ್ ತಿಂಗಳು ಈ ರಾಶಿಯವರ ಹಣಹಾಸಿನ ಸ್ಥಿತಿಯನ್ನು ತುಂಬಾ ಚೆನ್ನಾಗಿರುವ ಹಾಗೆ ಮಾಡುತ್ತದೆ. ಹಣದ ಹರಿವು ಹೆಚ್ಚಾಗಿ, ಬರಬೇಕಿರುವ ಹಣ ನಿಮ್ಮ ಕೈ ಸೇರುತ್ತದೆ. ಹಣ ಉಳಿತಾಯ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಹೊಸ ಕೆಲಸ ನಿಮ್ಮನ್ನು ಹುಡುಕಿ ಬರಬಹುದು. ಪ್ರೊಮೋಷನ್ ಸಿಗುವ ಯೋಗ ಇದ್ದು, ಕೌಟುಂಬಿಕ ಜೀವನದಲ್ಲಿ ಚೆನ್ನಾಗಿರುತ್ತೀರಿ..
ಮಿಥುನ ರಾಶಿ :- ಜೂನ್ ತಿಂಗಳು ಈ ರಾಶಿಯವರಿಗೆ ವೃತ್ತಿಯ ಜೀವನದಲ್ಲಿ ಒಳ್ಳೆಯದನ್ನು ಮಾಡುತ್ತದೆ. ವೃತ್ತಿಯನ್ನು ಬದಲಾಯಿಸುವ ಮನಸ್ಸಿರುವವರಿಗೆ ಇನ್ನು ಒಳ್ಳೆಯ ಕೆಲಸ ಸಿಗುತ್ತದೆ. ಹಾಗೂ ವರ್ಗಾವಣೆ ಬಯಸಿರುವವರಿಗೆ ವರ್ಗಾವಣೆ ಸಿಗುತ್ತದೆ. ನಿಮ್ಮ ಹಣದ ಆದಾಯ ಹೆಚ್ಚಾಗುತ್ತದೆ. ಜೊತೆಗೆ ಲವ್ ಲೈಫ್ ಮತ್ತು ದಾಂಪತ್ಯ ಜೀವನ ಸಹ ಚೆನ್ನಾಗಿರುತ್ತದೆ. ಮಾನಸಿಕ ಗೊಂದಲ ನಿಮಗೆ ಸ್ವಲ್ಪ ತೊಂದರೆ ತರಬಹುದು ಆದರೆ ಆರೋಗ್ಯವಾಗಿರುತ್ತೀರಿ..
ಈ ತಿಂಗಳಿನಲ್ಲಿ, ಸಿಂಹ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ನಿಮಗೆ ಬೇಸರ ಆಗುವ ವಿಚಾರಗಳು ಜಾಸ್ತಿಯಾಗಬಹುದು. ಕುಟುಂಬದ ಸಮಸ್ಯೆ ಉಂಟಾಗಬಹುದು. ನಿಮ್ಮ ಆರೋಗ್ಯದಲ್ಲಿ ಕೂಡ ವ್ಯತ್ಯಾಸ ಕಂಡುಬರಬಹುದು. ಜೂನ್ ತಿಂಗಳಿನಲ್ಲಿ ನೀವು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದಾಗುತ್ತದೆ.
Comments are closed.