ಕೆಜಿಎಫ್ 2 ಸಿನೆಮಾವನ್ನು ಉಚಿತವಾಗಿ ನೋಡುವ ದಿನಾಂಕ ಪ್ರಕಟಣೆ ಮಾಡಿದ ಪ್ರೈಮ್: ಯಾವಾಗ ಅಂತೇ ಗೊತ್ತೇ??
ಕೆಜಿಎಫ್ ಚಾಪ್ಟರ್2 ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಬಿಡುಗಡೆಯಾಗಿ ಇನ್ನೇನು 50 ದಿನ ಕಳೆಯಲಿದ್ದು, ಅಭಿಮಾನಿಗಳು ಸೆಲೆಬ್ರೇಟ್ ಮಾಡಲು ಕಾಯುತ್ತಿದ್ದಾರೆ. ಕೆಜಿಎಫ್2 ಸಿನಿಮಾ ಈಗಾಗಲೇ 1227 ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದರೂ ಸಹ ಈಗಲೂ ವೀಕೆಂಡ್ಸ್ ನಲ್ಲಿ ಕೆಜಿಎಫ್2 ಹವಾ ಕಡಿಮೆಯಾಗಿಲ್ಲ. ಥಿಯೇಟರ್ ನಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು ಪದೇ ಪದೇ ಕೆಜಿಎಫ್2 ನೋಡಬೇಕು ಎಂದು ಬಯಸುತ್ತಿದ್ದರು. ಕೆಲವರು ಸಿನಿಮಾ ಓಟಿಟಿಗೆ ಬರಲಿ ಎಂದು ಕಾಯುತ್ತಿದ್ದರು, ಇದೀಗ ಅಭಿಮಾನಿಗಳ ಆಸೆ ನೆರವೇರಲಿದ್ದು, ಕೆಜಿಎಫ್2 ಓಟಿಟಿ ರಿಲೀಸ್ ದಿನಾಂಕ ಈಗ ನಿಗದಿಯಾಗಿದೆ..
ಕೆಜಿಎಫ್2 ಈಗಾಗಲೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿತ್ತು, ಆದರೆ ಸುಲಭವಾಗಿ ಸಿನಿಮಾ ವೀಕ್ಷಣೆ ಮಾಡಲು ಆಗುತ್ತಿರಲಿಲ್ಲ. ಪ್ರೈಮ್ ಮೆಂಬರ್ ಶಿಪ್ ಇದ್ದರು ಸಹ, ಕೆಜಿಎಫ್2 ಸಿನಿಮಾಗೆ ಪೇ ಪರ್ ವ್ಯೂ ಮಾಡಲಾಗಿದ್ದು, ಇದರ ಪ್ರಕಾರ, ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಹೊಂದಿರುವವರು ಸಹ, 199 ರೂಪಾಯಿ ಕಟ್ಟಿ ಸಿನಿಮಾ ನೋಡಬೇಕಿತ್ತು. ಇದನ್ನು ನೋಡಿ ಸಿನಿಪ್ರಿಯರಿಗೆ ನಿರಾಸೆ ಆಗಿದ್ದಂತೂ ನಿಜ. ಆದರೆ ಈಗ ಚಿತ್ರತಂಡದಿಂದ ಸಿಹಿ ಸುದ್ದಿ ಸಿಕ್ಕಿದ್ದು, ಅಮೆಜಾನ್ ಪ್ರೈಮ್ ನಲ್ಲೇ ಇನ್ನುಮುಂದೆ ವೀಕ್ಷಕರು ಕೆಜಿಎಫ್2 ಸಿನಿಮಾ ವೀಕ್ಷಿಸಬಹುದು. ಓಟಿಟಿ ರಿಲೀಸ್ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಕೆಜಿಎಫ್2 ಸಿನಿಮಾವನ್ನು ಕೆಲವರು ಇನ್ನು ನೋಡಿಲ್ಲ. ಅಂಥವರು ಸಿನಿಮಾ ಓಟಿಟಿಗೆ ಬರಲಿ ಎಂದು ಕಾಯುತ್ತಿದ್ದರು.
ಕೆಜಿಎಫ್2 ಸಿನಿಮಾ ಜೂನ್ 3ರಂದು 50 ದಿನ ಪೂರೈಸಲಿದೆ. ಅದೇ ದಿನ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್2. ಜೂನ್ 3 ರಿಂದ ಅಭಿಮಾನಿಗಳು ಫ್ರೀಯಾಗಿ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡಬಹುದು. ದುಡ್ಡು ಕೊಡುವ ಬದಲು, ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಇದ್ದರೆ ಮಾತ್ರ ಸಾಕು, ಹೆಚ್ಚಿನ ಹಣ ನೀಡದೆ ಕೆಜಿಎಫ್2 ಸಿನಿಮಾವನ್ನು ನೋಡಬಹುದು. ಸಿನಿಮಾ ಮೇಲಿನ ಕ್ರೇಜ್ ಇರುವವರಿಗೆ ಮತ್ತು ಯಶ್ ಅವರ ಅಭಿಮಾನಿಗಳಿಗೆ ಇದು ಬಹಳ ಸಂತೋಷ ತರುವಂತಹ ಸುದ್ದಿಯಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ಮಾಡಿರುವ ಕೆಜಿಎಫ್2 ಸಿನಿಮಾ, ಓಟಿಟಿಯಲ್ಲಿ ಬಿಡುಗಡೆ ಆದಮೇಲು ಸಹ ಇನ್ನು ಹೆಚ್ಚಿನ ದಾಖಲೆ ಬರೆಯುವುದು ಪಕ್ಕಾ ಎನ್ನುತ್ತಿವೆ ಮೂಲಗಳು.
Comments are closed.