ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗೆ, ಸೌತ್ ಸ್ಟಾರ್ ನಟನ ಜೊತೆ ಡೇಟಿಂಗ್ ಮಾಡುವ ಆಸೆಯಂತೆ. ಯಾರು ಗೊತ್ತೇ??
ಮಾನುಶಿ ಚಿಲ್ಲರ್, ಇವರು ವಿಶ್ವಸುಂದರಿ ಪಟ್ಟವನ್ನು ಗೆದ್ದು, ಭಾರತದ ಹಿರಿಮೆಯನ್ನು ಹೆಚ್ಚಿಸಿದರು. ವಿಶ್ವಸುಂದರಿ ಮಾನುಶಿ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಪೃಥ್ವಿರಾಜ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ಮಾನುಶಿ ಚಿಲ್ಲರ್ ಬಾಲಿವುಡ್ ನಲ್ಲಿ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅವರು ನಮ್ಮ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟನ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಕಷ್ಟು ವೈರಲ್ ಆಗಿದೆ..
ಮಾನುಶಿ ಚಿಲ್ಲರ್ ವಿಶ್ವಸುಂದರಿ ಪಟ್ಟ ಗೆದ್ದ ಬಳಿಕ ಇವರಿಗೆ ಸಾಕಷ್ಟು ದೊಡ್ಡ್ ಫ್ಯಾನ್ ಬೇಸ್ ಇದೆ. ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ಆ ಫ್ಯಾನ್ ಬೇಸ್ ಹೆಚ್ಚಾಗುವುದು ಗ್ಯಾರಂಟಿ. ಇದೀಗ ಮಾನುಶಿ ಚಿಲ್ಲರ್ ಅವರು ಪೃಥ್ವಿರಾಜ್ ಸಿನಿಮಾ ಮೂಲಕ ನಟನೆ ಶುರು ಮಾಡಿದ್ದು, ಜೂನ್ 3ರಂದು ಅಂದ್ರೆ ನಿನ್ನೆ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಸಿನಿಮಾ ಎಂದಮೇಲೆ ಪ್ರೊಮೋಷನ್ ಗಳು, ಸಂದರ್ಶನಗಳು ಎಲ್ಲವೂ ಕಾಮನ್. ಇತ್ತೀಚೆಗೆ ಪೃಥ್ವಿರಾಜ್ ಸಿನಿಮಾಗಾಗಿ ನಡೆದ ಸಂದರ್ಶನ ಒಂದರಲ್ಲಿ ಮಾನುಶಿ ಚಿಲ್ಲರ್, ನಟ ರಾಮ್ ಚರಣ್ ಅವರ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.. ಅಷ್ಟಕ್ಕೂ ರಾಮ್ ಚರಣ್ ಅವರ ಬಗ್ಗೆ ಈಕೆ ಹೇಳಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ…
ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾನುಶಿ ಚಿಲ್ಲರ್ ಅವರ ಮೆಚ್ಚಿನ ನಟ ರಾಮ್ ಚರಣ್ ತೇಜ್ ಅಂತೆ..ಮಾನುಶಿ ಅವರಿಗೆ ಸಂದರ್ಶನದಲ್ಲಿ ನೀವು ಯಾವ ನಟನ ಜೊತೆಗೆ ಸಿನಿಮಾ ಮಾಡಲು ಇಷ್ಟಪಡುತ್ತೀರಾ ಎನ್ನುವ ಪ್ರಶ್ನೆ ಕೇಳಲಾಯಿತು, ಅದಕ್ಕೆ ಉತ್ತರ ಕೊಟ್ಟ ಮಾನುಶಿ, ರಾಮ್ ಚರಣ್ ಅವರೊಡನೆ ಸಿನಿಮಾ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಆರ್.ಆರ್.ಆರ್ ಸಿನಿಮಾ ನೋಡಿದ ಬಳಿಕ ರಾಮ್ ಚರಣ್ ಅವರ ದೊಡ್ಡ ಫ್ಯಾನ್ ಆಗಿದ್ದಾರಂತೆ ಮಾನುಶಿ ಚಿಲ್ಲರ್. ಜೊತೆಗೆ ಯಾವ ನಟನ ಜೊತೆಗೆ ಡೇಟ್ ಗೆ ಹೋಗಲು ಬಯಸುತ್ತೀರಾ ಎಂದು ಕೇಳಿದ್ದಕ್ಕೂ ರಾಮ್ ಚರಣ್ ಹೆಸರನ್ನೇ ಹೇಳಿದ್ದಾರೆ. ಮಾನುಶಿ ಚಿಲ್ಲರ್ ನೀಡಿರುವ ಈ ಹೇಳಿಕೆ ಭಾರಿ ವೈರಲ್ ಆಗುತ್ತಿದ್ದು, ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿದರೆ ಬಹಳ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
Comments are closed.