Neer Dose Karnataka
Take a fresh look at your lifestyle.

ಹತ್ತಾರು ವರ್ಷಗಳಿಂದ ನಟನೆ ಮಾಡುತ್ತಿದ್ದರೂ 20 ರ ಹುಡುಗಿಯಂತೆ ಕಾಣುವ ಜಾಕಿ ಭಾವನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾವನಾ ಮೆನನ್ ರವರು ಮಲಯಾಳಂ ಚಿತ್ರರಂಗದಿಂದ ಬಂದವರು. ಆದರೆ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರೆ ಉಳಿದು ಕೊಂಡಿದ್ದಾರೆ. ಹೌದು ಗೆಳೆಯರೇ ಪ್ರತಿಯೊಬ್ಬರು ಕೂಡ ಈಗ ಅವರನ್ನು ತಮ್ಮ ಮನೆಮಗಳೆ ಎಂಬಂತೆ ಕನ್ನಡ ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಭಾವನಾ ಮೆನನ್ ರವರು ಅತ್ಯಂತ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜಾಕಿ ಚಿತ್ರದ ಮೂಲಕ ಎಂದರೆ ತಪ್ಪಾಗಲಾರದು. ಅದಾದನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಷ್ಣುವರ್ಧನ ಸಿನಿಮಾದಲ್ಲಿ ಕೂಡ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ನಂತರ ಬಚ್ಚನ್ ಹೀಗೆ ಹಲವಾರು ಸಿನಿಮಾಗಳಲ್ಲಿ ಸತತವಾಗಿ ಗೆಲುವನ್ನು ಸಾಧಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ಮೂಲದ ನಿರ್ಮಾಪಕರೊಬ್ಬರನ್ನು ಮದುವೆಯಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಇತ್ತೀಚಿಗಷ್ಟೇ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹತ್ತಾರು ವರ್ಷಗಳಿಂದ ನಟಿಸಿಕೊಂಡು ಬಂದಿದ್ದರು ಕೂಡ ಇಂದಿಗೂ ನಾಯಕಿಯ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿರುವುದು ಅವರ ಬೇಡಿಕೆಗೆ ನಿಜವಾದ ಸಾಕ್ಷಿಯಾಗಿದೆ.

ಇಷ್ಟೊಂದು ವರ್ಷಗಳಿಂದ ನಟಿಸಿಕೊಂಡು ಬಂದಿದ್ದರೂ ಕೂಡ 20ರ ಹರೆಯದ ಯುವತಿಯಂತೆ ಕಾಣುವ ಭಾವನಾ ಮೆನನ್ ಅವರ ನಿಜವಾದ ವಯಸ್ಸು ಎಷ್ಟು ಎನ್ನುವುದು ಎಲ್ಲರ ಗೊಂದಲದ ಪ್ರಶ್ನೆಯಾಗಿದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ಭಾವನಾ ರವರ ನಿಜವಾದ ವಯಸ್ಸೆಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಭಾವನಾ ಮೆನನ್ ರವರು ನೋಡಲು 20ರ ಹರೆಯದ ಯುವತಿಯಂತೆ ಸೌಂದರ್ಯವತಿ ಯಾಗಿ ಕಾಣುತ್ತಾರೆ ನಿಜ ಆದರೆ ಅವರ ನಿಜವಾದ ವಯಸ್ಸು 36. ಇಂದಿಗೂ ಕೂಡ ನಟನೆಯಲ್ಲಾಗಲಿ ಸೌಂದರ್ಯ ದಲ್ಲಾಗಲಿ ಇಂದಿನ ಜಮಾನದ ನಟಿಯರಿಗೆ ಭಾವನಾ ಮೆನನ್ ರವರು ತಕ್ಕರ್ ಕಾಂಪಿಟೇಷನ್ ನೀಡುತ್ತಾರೆ ಎನ್ನುವುದರಲ್ಲಿ ಯಾವುದೇ 2 ಮಾತಿಲ್ಲ.

Comments are closed.