ವಿಚ್ಚೇದನ ಪಡೆದುಕೊಂಡರೂ ಕೂಡ ಅಕ್ಕಿನೇನಿ ಕುಟುಂಬಕ್ಕಾಗಿ ಮಹಾತ್ಯಾಗ ಮಾಡಿದ್ದ ಸಮಂತಾ, ತಿಳಿದರೆ ನೀವು ಕೂಡ ನಿಂತು ಸಲ್ಯೂಟ್ ಮಾಡುತ್ತೀರಿ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ನಟಿ ಸಮಂತಾ ರವರು ನಾಗಚೈತನ್ಯ ರವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ವಿಶೇಷ ಎನ್ನುವಂತೆ ಅವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಅವರ ಬೇಡಿಕೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ.
ಹೌದು ಗೆಳೆಯರೇ ನಾಗಚೈತನ್ಯ ರವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತಾ ರವರು ತಮ್ಮ ಮನಸ್ಸಿಗೆ ಇಷ್ಟ ಆಗುವಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಹಾಗೂ ಒಂದಾದಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿಯೊಬ್ಬ ನಿರ್ಮಾಪಕ ಹಾಗೂ ನಿರ್ದೇಶಕರ ಮೊದಲ ಆಯ್ಕೆಯಾಗಿ ನಟಿ ಸಮಂತಾ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಿಂದಲೂ ಕೂಡ ನಟಿ ಸಮಂತಾ ರವರಿಗೆ ಸತತವಾಗಿ ಆಫರ್ಗಳು ಹುಡುಕಿಕೊಂಡು ಬರುತ್ತಿವೆ.
ಆದರೆ ನಿಮಗೆ ಗೊತ್ತಾ ಗೆಳೆಯರೇ ನಟಿ ಸಮಂತಾ ರವರು ಅಕ್ಕಿನೇನಿ ಅಂದರೆ ನಾಗಚೈತನ್ಯ ರವರ ಕುಟುಂಬಕ್ಕಾಗಿ ಹಿಂದಿಯಲ್ಲಿ ಬಂದಿದ್ದಂತಹ ಒಂದು ದೊಡ್ಡ ಸಿನಿಮಾದ ಆಫರ್ ಅನ್ನು ಕೈಚೆಲ್ಲಿದ್ದರು. ಹೌದು ಗೆಳೆಯರೆ ನಾಗಚೈತನ್ಯ ಹಾಗೂ ಸಂಬಂಧ ಇಬ್ಬರು ಕೂಡ ಮದುವೆಯಾಗಿ ಎರಡು ವರ್ಷ ಕಳೆದಿತ್ತು ಅಷ್ಟೇ ಆ ಸಂದರ್ಭದಲ್ಲಿ ಶಾರುಖ್ ಖಾನ್ ನಟನೆಯ ಹಾಗೂ ಆಟ್ಲೀ ಕಾಂಬಿನೇಷನ್ನಲ್ಲಿ ಮೂಡಿಬರಲಿರುವಂತಹ ಸಿನಿಮಾಗೆ ನಾಯಕ ನಟಿಯಾಗಿ ನಟಿಸುವಂತೆ ಸಮಂತ ಅವರಿಗೆ ಆಫರ್ ಬಂದಿತ್ತು. ಆದರೆ ಅಕ್ಕಿನೇನಿ ಕುಟುಂಬದ ಸಲುವಾಗಿಯೇ ಈ ಸಂದರ್ಭದಲ್ಲಿ ಸಿನಿಮಾಗಿಂತ ಹೆಚ್ಚಾಗಿ ಕುಟುಂಬ ಎನ್ನುವ ಕಾರಣಕ್ಕಾಗಿ ಸಮಂತ ಈ ಸಿನಿಮಾದ ಆಫರ್ ಅನ್ನು ತಿರಸ್ಕರಿಸಿದ್ದರು. ಅದೇ ಸಿನಿಮಾಗೆ ಈಗ ನಯನತಾರ ರವರು ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದ ಶೀರ್ಷಿಕೆ ಜವಾನ್ ಎಂದು ಇಡಲಾಗಿದ್ದು ಮುಂದಿನ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
Comments are closed.