ಯುವ ಆಟಗಾರಿಗೆ ಅವಕಾಶ ಸಿಗಲಿ ಎಂದು ಆರಂಭವಾಗಿರುವ ಐಪಿಎಲ್ ನಲ್ಲಿ ಸಾಮರ್ಥ್ಯವಿದ್ದರೂ ಅವಕಾಶ ಪಡೆಯದ ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?
ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ತಿಳಿದಿರುವಂತೆ ಈ ಬಾರಿಯ ಐಪಿಎಲ್ ನ ಎಲ್ಲಾ ಲೀಗ್ ಪಂದ್ಯಗಳು ಮುಗಿದಿದ್ದು ಐಪಿಎಲ್ ಟೂರ್ನಮೆಂಟ್ ಕೂಡ ಮೇ 29ಕ್ಕೆ ಮುಗಿಯಲಿದೆ. ನೋಡನೋಡುತ್ತಿದ್ದಂತೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ನ ಈ ವರ್ಷದ ಸೀಸನ್ ಮುಗಿಯುತ್ತಾ ಬಂದಿದೆ. ಈ ಬಾರಿಯ ಐಪಿಎಲ್ ನಲ್ಲಿ ಹಲವಾರು ಯುವ ಪ್ರತಿಭೆಗಳು ಕೂಡ ಮಿಂಚಿರುವುದನ್ನು ನಾವು ನೋಡಿದ್ದೇವೆ. ಪ್ರತಿ ಬಾರಿ ಐಪಿಎಲ್ ಪ್ರಾರಂಭವಾದಾಗ ನಮಗೆ ಹೊಸ ಹೊಸ ಪ್ರತಿಭೆಗಳು ತಮ್ಮ ಪ್ರತಿಭೆ ಹಾಗೂ ಕ್ರಿಕೆಟಿಂಗ್ ಸ್ಕಿಲ್ಸ್ ಅನ್ನು ಸಾಬೀತುಪಡಿಸುವುದು ನೋಡಿರುತ್ತೇವೆ ಈ ಬಾರಿ ಕೂಡ ಹಲವಾರು ಯುವ ಕ್ರಿಕೆಟಿಗರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಸಾದರಪಡಿಸಿದ್ದಾರೆ.
ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ನಾಲ್ಕು ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದು ಉಳಿದ 6 ತಂಡಗಳು ಈಗಾಗಲೇ ಟೂರ್ನಮೆಂಟಿನಿಂದ ಹೊರಬಿದ್ದಿವೆ. ಈ ಹೊರಬಂದ ತಂಡಗಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಯುವ ಆಟಗಾರರು ಇದ್ದರೂ ಕೂಡ ಅವರಿಗೆ ಕೊನೆಯವರೆಗೂ ಅವಕಾಶ ದೊರೆಯಲಿಲ್ಲ. ಹಾಗಿದ್ದರೆ ಆ ಅವಕಾಶ ವಂಚಿತ ಯುವ ಪ್ರತಿಭಾನ್ವಿತ ಆಟಗಾರರು ಯಾರನ್ನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಅರ್ಜುನ್ ತೆಂಡುಲ್ಕರ್. ಹೌದು ಗೆಳೆಯರೇ ಕ್ರಿಕೆಟ್ ಜಗತ್ತಿನ ದೇವರು ಎಂದು ಖ್ಯಾತರಾಗಿರುವ ತೆಂಡೂಲ್ಕರ್ ಅವರ ಪುತ್ರರಾಗಿರುವ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 30 ಲಕ್ಷ ರೂಪಾಯಿಗೆ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಅರ್ಜುನ್ ತೆಂಡೂಲ್ಕರ್ ಅವರು ಫಾಸ್ಟ್ ಬೌಲರ್ ಹಾಗೂ ಎಡಗೈ ಬ್ಯಾಟ್ಸ್ ಮನ್ ಆಗಿ ಆಲ್ರೌಂಡರ್ ಜವಾಬ್ದಾರಿಯನ್ನು ನಿರ್ವಹಿಸುವಂತಹ ಆಟಗಾರರಾಗಿದ್ದರು. ಇಷ್ಟೊಂದು ಕಳಪೆ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಕೂಡ ಮುಂಬೈ ಇಂಡಿಯನ್ಸ್ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ ರವರು ಅರ್ಜುನ್ ರವರಿಗೆ ಒಂದು ಅವಕಾಶವನ್ನು ನೀಡಲು ಮುಂದಾಗಲಿಲ್ಲ. ಅವರು ನೆಟ್ಸ್ ನಲ್ಲಿಯೂ ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ವನ್ನು ನೀಡುತ್ತಿದ್ದುದು ವಿಡಿಯೋಗಳಲ್ಲಿ ಕಂಡುಬಂದಿದೆ ಎಂಬುದನ್ನು ನಾವು ಮರೆಯಬಾರದು.
ಎರಡನೇದಾಗಿ ಯಶ್ ಧುಲ್. ಹೌದು ಗೆಳೆಯರೇ ಈ ಬಾರಿಯ ಅಂಡರ್ 19 ವರ್ಲ್ಡ್ ಕಪ್ ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಹೈಯೆಸ್ಟ್ ಸ್ಕೋರ್ ಮಾಡಿರುವ ಬ್ಯಾಟ್ಸ್ಮನ್ ಆಗಿರುವ ಯಶ್ ಧುಲ್ ರವರಿಗೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವಕಾಶವನ್ನು ನೀಡುವಲ್ಲಿ ವಿಫಲವಾಯಿತು. ತಂಡದಲ್ಲಿ ಹಲವಾರು ಆಟಗಾರರು ರನ್ ಗಳಿಸುವುದಕ್ಕೆ ಪರದಾಡುತ್ತಿದ್ದರು ಕೂಡ ಅವರಿಗೆ ಅವಕಾಶ ನೀಡದೆ ಇದ್ದದ್ದು ಎಲ್ಲರ ಬೇಸರಕ್ಕೆ ಕಾರಣವಾಯಿತು ಎಂದರೆ ತಪ್ಪಾಗಲಾರದು.
ಮೂರನೇದಾಗಿ ರಾಜವರ್ಧನ್ ಹಂಗರ್ಗೆಕರ್. ಹೌದು ಗೆಳೆಯರೇ ಈ ಬಾರಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಯ್ಕೆಯಾಗಿದ್ದರು. ರವೀಂದ್ರ ಸಿಂಗ್ ಜಡೇಜಾ ನಾಯಕರಾಗಿದ್ದಾಗ ದೀಪಕ್ ಚಹಾರ್ ಅವರು ಇಂಜುರಿ ಯಿಂದಾಗಿ ತಂಡದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ರಾಜವರ್ಧನ್ ರವರಿಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎಂಬುದಾಗಿ ಅಂದುಕೊಂಡಿದ್ದರು. ಆದ್ರೆ ರವೀಂದ್ರ ಸಿಂಗ್ ಜಡೇಜಾ ರವರ ನಂತರ ಮಹೇಂದ್ರ ಸಿಂಗ್ ದೋನಿ ರವರು ನಾಯಕರಾದರು ಕೂಡ ರಾಜವರ್ಧನ್ ಅವರಿಗೆ ಅವಕಾಶ ಸಿಗಲಿಲ್ಲ. ಈ ಸಂದರ್ಭದಲ್ಲಿ ಚೆನ್ನೈ ತಂಡದ ಬೌಲರ್ಗಳು ಕೂಡ ಕೊಂಚಮಟ್ಟಿಗೆ ವಿಫಲರಾಗಿದ್ದರು.
ಇವಿಷ್ಟು ಆಟಗಾರರಿಗೆ ಈ ಬಾರಿಯ ಐಪಿಎಲ್ ನಲ್ಲಿ ಪ್ರತಿಭೆ ಇದ್ದರೂ ಕೂಡ ಅವಕಾಶ ಸಿಗಲಿಲ್ಲ ಎನ್ನುವುದೇ ಕ್ರಿಕೆಟ್ ಅಭಿಮಾನಿಗಳ ಮನಸ್ಸಿಗೆ ದುಃಖ ಉಂಟು ಮಾಡುವಂತಹ ವಿಚಾರ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.
Comments are closed.