ಚಾರ್ಲಿ ಸಿನೆಮಾದ ಮೂಲಕ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿರುವ ಸಂಗೀತ ರವರು ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆ ಏನು ಗೊತ್ತೇ??
ರಕ್ಷಿತ್ ಶೆಟ್ಟಿ ಅವರು ನಟಿಸಿ ನಿರ್ಮಾಣ ಮಾಡಿರುವ 777ಚಾರ್ಲಿ ಸಿನಿಮಾ ಇಂದು ಕರ್ನಾಟಕದ ಜನರ ಮೆಚ್ಚಿನ ಸಿನಿಮಾ ಆಗಿದೆ, ಒಂದು ಶ್ವಾನ ಹಾಗೂ ಮನುಷ್ಯನ ನಡುವೆ ಎಂಥಹ ಬಾಂಧವ್ಯ ಇರಬಹುದು ಎನ್ನುವುದನ್ನು ಚಾರ್ಲಿ ಸಿನಿಮಾ ತೋರಿಸಿಕೊಟ್ಟಿದೆ. ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಪಡೆದುಕೊಂಡಿದ್ದು, ಚಾರ್ಲಿ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಇನ್ನು ಚಾರ್ಲಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿ ಸಂಗೀತ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಈ ಹೊಸ ನಟಿ ನಿಜಕ್ಕೂ ಯಾರು ? ಇವರ ಹಿನ್ನಲೆ ಏನು ಗೊತ್ತಾ?
ನಟಿ ಸಂಗೀತ ಶೃಂಗೇರಿ ಅವರು 777 ಚಾರ್ಲಿ ಸಿನಿಮಾ ಮೂಲಕ ಕನ್ನಡ ಸಿನಿಮಾ ವೀಕ್ಷಕರಿಗೆ ಹತ್ತಿರವಾಗಿದ್ದಾರೆ, ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಸಂಗೀತ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಚಾರ್ಲಿ ಸಿನಿಮಾದಲ್ಲಿ ಅನಿಮಲ್ ವೆಲ್ಫೇರ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಗೀತ ಅವರು, ಈ ಮೊದಲು ಕನ್ನಡ ಕಿರುತೆರೆಯ ಮೂಲಕ ಬಹಳ ಫೇಮಸ್ ಆಗಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲೋ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸತಿ ಮತ್ತು ಪಾರ್ವತಿ ಪಾತ್ರದಲ್ಲಿ ನಟಿಸಿದ್ದ ಕಲಾವಿದೆ ಚಾರ್ಲಿ ಸಿನಿಮಾದ ಸಂಗೀತ ಅವರು. ಕಿರುತೆರೆಯಲ್ಲಿ ಧಾರ್ಮಿಕ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಸಂಗೀತ ಅವರು ಫೇಮಸ್ ಆಗಿದ್ದರು. ಇದೀಗ ಚಾರ್ಲಿ ಸಿನಿಮಾ ಇವರಿಗೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದು ಕೊಟ್ಟಿದೆ.
ಇವರ ಕುಟುಂಬ ಮೂಲತಃ ಆರ್ಮಿ ಬ್ಯಾಗ್ರೌಂಡ್ ಆಗಿದೆ, ಸಂಗೀತ ಅವರ ತಂದೆ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಂಗೀತ ಅವರು ಆರಿಸಿಕೊಂಡಿದ್ದು ಸಿನಿಮಾ ಕ್ಷೇತ್ರ. ಮೊದಲಿಗೆ ಸಂಗೀತ ಅವರು ಮಾಡೆಲ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಮಿಸ್ ಇಂಡಿಯಾ ಬ್ಯೂಟಿ ಪೇಜೆಂಟ್ ನಲ್ಲಿ ಪಾಲ್ಗೊಂಡು ಟಾಪ್ 10ನಲ್ಲಿ ಸ್ಥಾನ ಪಡೆದಿದ್ದರು, ಹಾಗೂ 2014ರ ಸೂಪರ್ ಮಾಡೆಕ್ ಕಾಂಟೆಸ್ಟ್ ನಲ್ಲಿ ಪಾಲ್ಗೊಂಡು ರನ್ನರ್ ಅಪ್ ಆಗಿದ್ದರು ಸಂಗೀತ, ಬಳಿಕ ಇವರಿಗೆ ಹರ ಹರ ಮಹಾದೇವ ಧಾರವಾಹಿಯಲ್ಲಿ ನಟಿಸುವ ಅವಕಶ ಸಿಕ್ಕಿತು. ಚಾರ್ಲಿ ಒಂದೇ ಅಲ್ಲದೆ, A+ ಎನ್ನುವ ಸಿನಿಮಾದಲ್ಲಿ ಸಹ ಸಂಗೀತ ಅವರು ನಟಿಸಿದ್ದರು. ಇದು ದಶಕಗಳ ಹಿಂದೆ ಉಪೇಂದ್ರ ಅವರು ನಟಿಸಿ ನಿರ್ದೇಶನ ಮಾಡಿದ್ದ A ಸಿನಿಮಾದ ಮುಂದುವರೆದ ಭಾಗ ಆಗಿತ್ತು. ಪ್ರಸ್ತುತ ಸಂಗೀತ ಶೃಂಗೇರಿ ಅವರು ಚಾರ್ಲಿ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇವರಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗುವುದು ಪಕ್ಕಾ ಆಗಿದೆ.
Comments are closed.