ಮೂರೇ ದಿನಕ್ಕೆ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಚಾರ್ಲಿ. ಗಳಿಸಿದ ಹಣ ಎಷ್ಟು ಗೊತ್ತೇ??
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದೆ. ಬಿಡುಗಡೆಯಾದ ಬಳಿಕ ಸಿನಿಮಾ ನೋಡಿರುವ ಬಹುತೇಕ ಎಲ್ಲರನ್ನು ಭಾವನಾತ್ಮಕವಾಗಿ ಕನೆಕ್ಟ್ ಆಗಿ, ಎಲ್ಲರನ್ನು ಅಳಿಸಿದೆ ಚಾರ್ಲಿ ಸಿನಿಮಾ. ರಕ್ಷಿತ್ ಶೆಟ್ಟಿ ಅವರ ಸಿನಿಮಾಗೆ ಹಿಂದೆಂದೂ ಸಿಕ್ಕಿರದ ದೊಡ್ಡ ಮಟ್ಟದ ಓಪನಿಂಗ್ ಚಾರ್ಲಿ ಸಿನಿಮಾ ಇಂದ ಸಿಕ್ಕಿದೆ. ಕರ್ನಾಟಕ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಸಹ ಚಾರ್ಲಿ ಸಿನಿಮಾಗೆ ಉತ್ತಮವಾದ ರೆಸ್ಪಾನ್ಸ್ ಸಿಕ್ಕಿದ್ದು, ಹಹಸಜೆಯ ಹೊರತಾಗಿಯೂ ಸಿನಿಪ್ರಿಯರು ಚಾರ್ಲಿ ಸಿನಿಮಾ ನೋಡಿ ಫಿದಾ ಆಗಿದ್ದಾರೆ.
ಇನ್ನು ಸಿನಿಮಾ ಗಳಿಕೆ ಎಷ್ಟಾಗಿರಬಹುದು ಎನ್ನುವ ಕುತೂಹಲ ಸಹ ಹೆಚ್ಚಾಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಮೂರು ದಿನಕ್ಕೆ 20 ಕೋಟಿ ಗಳಿಕೆ ಮಾಡಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸಿನಿಮಾ ಬಿಡುಗಡೆ ಆಗುವ ಹಿಂದಿನ ದಿನವೇ, ಚಾರ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಮಾಡಲಾಗಿತ್ತು, ಕರ್ನಾಟಕದಲ್ಲೇ 100 ಪೇಯ್ಡ್ ಪ್ರೀಮಿಯರ್ ಶೋ ಮಾಡಲಾಗಿದ್ದು, ಅವುಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, ಫ್ಹಾರ್ಲಿ ಸಿನಿಮಾಗೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿತು, ಆ ಪ್ರೀಮಿಯರ್ ಶೋ ಇಂದಲೇ ಸುಮಾರು 1.10 ಕೋಟಿ ರೂಪಾಯಿ ಹಣಗಳಿಕೆ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಂಡಿದೆ. ಮೊದಲ ದಿನ 4.90 ಕೋಟಿ ರೂಪಾಯಿ ಗಳಿಸಿದೆ ಚಾರ್ಲಿ.
ಎರಡನೆಯ ದಿನ ಶನಿವಾರ 6.25 ಕೋಟಿ ರೂಪಾಯಿ ಹಣಗಳಿಕೆ ಮಾಡಿದೆ, ಇನ್ನು ಮೂರನೆಯ ದಿನ ಭಾನುವಾರ 7.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕೆಂಡ್ ನಲ್ಲಿ ಶೋಗಳು ಒಳ್ಳೆಯ ಪ್ರದರ್ಶನ ಪಡೆಯುತ್ತದೆ, ವಾರದ ದಿನಗಳಲ್ಲಿ ಪಡೆಯುವುದಿಲ್ಲ ಎನ್ನುವುದನ್ನು ಸುಳ್ಳು ಮಾಡಿದೆ ಚಾರ್ಲಿ ಸಿನಿಮಾ, ಸೋಮವಾರ ಸಹ ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮೂರು ದಿನಗಳ ಒಟ್ಟು ಕಲೆಕ್ಷನ್ 19.75ಕೋಟಿ ರೂಪಾಯಿ ಆಗಿದೆ. ಇನ್ನು ಪ್ರತ್ಯೇಕವಾಗಿ ನೋಡುವುದಾದರೆ, ಕರ್ನಾಟಕದಲ್ಲೇ 15.50 ಕೋಟಿ ರೂಪಾಗಿ ಗಳಿಕೆ ಮಾಡಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ1.50 ಕೋಟಿ ರೂಪಾಯಿ, ಕೇರಳದಲ್ಲಿ 90 ಲಕ್ಷ, ತಮಿಳು ನಾಡಿನಲ್ಲಿ 60 ಲಕ್ಷ, ಭಾರತದ ಇನ್ನುಳಿದ ಭಾಗಗಳಲ್ಲಿ 1.50 ಕೋಟಿ ರೂಪಾಯಿ ಹಣಗಳಿಕೆ ಮಾಡಿದೆ. ದಿನದಿಂದ ದಿನಕ್ಕೆ ಚಾರ್ಲಿ ಸಿನಿಮಾ ಕಲೆಕ್ಷನ್ಸ್ ಏರಿಕೆ ಆಗುತ್ತಿದ್ದು, 50 ರಿಂದ 60 ಕೋಟಿ ಲಾಭ ಮಾಡುವುದಲ್ಲಿ ಯಾವುದೇ ಸಂದೇಹ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
Comments are closed.