ಕನ್ನಡದ ಮೀಡಿಯಾ ಚಾನೆಲ್ ಗಳು ದರ್ಶನ್ ರವರಿಗೆ ಬುದ್ದಿ ಕಲಿಸಲು ಹೋಗಿ ಬ್ಯಾನ್ ಮಾಡಿರುವ ಬಗ್ಗೆ ವಿಜಯಲಕ್ಷ್ಮಿ ಭಾವುಕರಾಗಿ ಹೇಳಿದ್ದೇನು ಗೊತ್ತೆ?
ಡಿಬಾಸ್ ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಅದರಲ್ಲು ದರ್ಶನ್ ಅವರ ಅಭಿಮಾನಿಗಳಿಗೆ ಎಂಥಹ ಮಟ್ಟದಲ್ಲಿ ಕ್ರೇಜ್ ಇದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ದರ್ಶನ್ ಅವರ ಬಗ್ಗೆ ಯಾವುದೇ ಒಂದು ವಿಚಾರ ಬಂದರು ಸಹ, ಅಭಿಮಾನಿಗಳು ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಸಿನಿಮಾ ಬಗ್ಗೆ ಆಗಲಿ ಅಥವಾ ದರ್ಶನ್ ಅವರ ನಿಜ ಜೀವನದ ಬಗ್ಗೆ ಆಗಲಿ ಯಾವುದೇ ಒಂದು ವಿಷಯ ಸಿಕ್ಕರೂ ಸಹ, ವೈರಲ್ ಮಾಡುತ್ತಾರೆ. ಏನೇ ನಡೆದರೂ, ದರ್ಶನ್ ಅವರನ್ನು ಅಭಿಮಾನಿಗಳು ಮಾತ್ರ ಕೈಬಿಡುವುದಿಲ್ಲ. ಡಿಬಾಸ್ ಅವರ ಕಷ್ಟದ ಸಮಯದಲ್ಲೂ ಸಹ ಕೈಬಿಡದೆ, ಇದ್ದವರು ಅಭಿಮಾನಿಗಳು, ಅದರಿಂದಲೇ ಡಿಬಾಸ್ ಅವರಿಗೆ ಅಭಿಮಾನಿಗಳು ಅಂದ್ರೆ ಅಷ್ಟು ಪ್ರೀತಿ. ಇನ್ನು ದರ್ಶನ್ ಅವರಃ ಸಹ ತಮ್ಮ ಅಭಿಮಾನಿಗಳಿಗೆ ಅಷ್ಟೇ ಪ್ರೀತಿ ತೋರಿಸುತ್ತಾರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ.
ನಮಗೆಲ್ಲ ಗೊತ್ತಿರುವ ಹಾಗೆ ರಾಬರ್ಟ್ ನಂತರ ದರ್ಶನ್ ಅವರ ಮುಂದಿನ ಸಿನಿಮಾ ಕ್ರಾಂತಿ. ಈ ಸಿನಿಮಾ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಇದೆ. ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ದೊಡ್ದ ಮಟ್ಟದಲ್ಲಿ ಪ್ರೊಮೋಟ್ ಮಾಡುವ ಪ್ಲಾನ್ ಹೊಂದಿದ್ದಾರೆ. ಯಾಕೆಂದರೆ, ಕನ್ನಡ ಮಾಧ್ಯಮಗಳು ದರ್ಶನ್ ಅವರನ್ನು ಅಘೋಷಿತವಾಗಿ ಬ್ಯಾನ್ ಮಾಡಿದ್ದು, ಅವರ ಬಗ್ಗೆ ಒಂದು ಸುದ್ದಿ ಕೂಡ ಟಿವಿಯಲ್ಲಿ ಬರುವುದಿಲ್ಲ. ದರ್ಶನ್ ಅವರು ಕ್ಷಮೆ ಕೇಳಿದರೆ ಮಾತ್ರ, ಅವರ ಬಗೆಗಿನ ಸುದ್ದಿಯನ್ನು ಪ್ರಸಾರ ಮಾಡುವುದಾಗಿ ಮಾಧ್ಯಮಗಳು ಹೇಳಿವೆ, ಆದರೆ ದರ್ಶನ್ ಅವರು ಕ್ಷಮೆ ಕೇಳುವ ಹಾಗೆ ತೋರುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಯಾವುದೇ ಚಾನೆಲ್ ಅಥವಾ ಮಾಧ್ಯಮದ ಸಹಾಯ ಇಲ್ಲದೆ, ಕ್ರಾಂತಿ ಸಿನಿಮಾ ದೊಡ್ಡ ಹಿಟ್ ಆಗುವ ಹಾಗೆ ಮಾಡಬೇಕು ಎಂದುಕೊಂಡಿದ್ದಾರೆ.
ಹಾಗಾಗಿ ದರ್ಶನ್ ಅವರ ಸಿನಿಮಾವನ್ನು ಸೋಷಿಯಲ್ ಮೀಡಿಯಾ ಮೂಲಕ ಪ್ರೊಮೋಟ್ ಮಾಡುತ್ತಿದ್ದಾರೆ. ಇದರ ಬಗ್ಗೆ ಕೊನೆಗೂ ಈಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ, “ಮೀಡಿಯಾಗಳು ಹೆಚ್ಚಾಗಿ ಇಲ್ಲದ ಸಮಯದಲ್ಲೇ ದರ್ಶನ್ ಅವರು ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದರು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಹಾಗಾಗಿ ಅಭಿಮಾನಿಗಳೇ ನಮಗೆ ಶಕ್ತಿ. ನಮ್ಮ ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸುತ್ತಾರೆ, ನಾನು ಯಾವುದೇ ಮೀಡಿಯಾದವರ ಬಗ್ಗೆ ಸಹ ಮಾತನಾಡಲು ಇಷ್ಟಪಡುವುದಿಲ್ಲ, ಅವರೆಲ್ಲರೂ ನಮಗೆ ತುಂಬಾ ಸಪೋರ್ಟ್ ಮಾಡಿ ಸಹಾಯ ಕೂಡ ಮಾಡಿದ್ದಾರೆ..”ಎಂದಿದ್ದಾರೆ ಡಿಬಾಸ್ ಅವರ ಪತ್ನಿ ವಿಜಯಲಕ್ಷ್ಮಿ ಅವರು.
Comments are closed.