ಸದ್ದಿಲ್ಲದೇ ಸಲ್ಮಾನ್ ಖಾನ್ ಸಿನೆಮಾದಲ್ಲಿ ಅವಕಾಶ ಪಡೆಯುತ್ತಿರುವ ಕನ್ನಡತಿ ಯಾರು ಗೊತ್ತೇ??
ಬಾಲಿವುಡ್ ನಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಒಬ್ಬರು ಸಲ್ಮಾನ್ ಖಾನ್ ಅವರು. ಇವರು ತಮ್ಮ ಸಂಸ್ಥೆಯ ಮೂಲಕ ಅನೇಕ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಕೆಲವರಿಗೆ ಇವರು ಅಹಂಕಾರದ ಮನುಷ್ಯನ ಹಾಗೆ ಕಾಣಿಸಿದರೆ, ಇನ್ನು ಕೆಲವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿರುವ ಬಗ್ಗೆ ನಾವು ಹಲವು ಸುದ್ದಿಗಳನ್ನು ಓದಿರುತ್ತೇವೆ. ಒಳ್ಳೆಯ ಕೆಲಸಗಳ ಜೊತೆಗೆ ಸಿನಿಮಾಗಳಲ್ಲೂ ಸಹ ಸಲ್ಮಾನ್ ಖಾನ್ ಅವರು ಬ್ಯುಸಿ ಆಗಿರುತ್ತಾರೆ. ಸಲ್ಮಾನ್ ಖಾನ್ ಅವರ ಕೈಯಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ.
ಕಭಿ ಈದ್ ಕಭಿ ದಿವಾಲಿ, ಟೈಗರ್3 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಸಲ್ಮಾನ್ ಖಾನ್, ಅವುಗಳ ಜೊತೆಗೆ ಸಲ್ಮಾನ್ ಖಾನ್ ಅವರು ಈಗ ನೋ ಎಂಟ್ರಿ ಸಿನಿಮಾದ ಸೀಕ್ವೆಲ್ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಸಧ್ಯಕ್ಕೆ ಕೆಲಸ ನಡೆಯುತ್ತಿರುವ ಸಿನಿಮಾಗಳು ಮುಗಿದ ಬಳಿಕ ನೋ ಎಂಟ್ರಿ ಸೀಕ್ವೆಲ್ ಶುರುವಾಗಲಿದೆ ಎನ್ನುವ ಮಾಹುತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 10 ಜನ ಹೀರೋಯಿನ್ ಗಳು ಇರುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ. 10 ನಾಯಕಿಯರು ಯಾರ್ಯಾರು ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ದಕ್ಷಿಣ ಭಾರತದ ಇಬ್ಬರು ನಾಯಕಿಯರು ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಆ ಇಬ್ಬರು ನಟಿಯರು ನಟಿ ಸಮಂತಾ ಮತ್ತು ನಟಿ ರಶ್ಮಿಕಾ ಮಂದಣ್ಣ. ಇವರಿಬ್ಬರು ಸಹ ಈಗ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರು, ಮಿಷನ್ ಮಜ್ನು, ಗುಡ್ ಬೈ, ಹಾಗೂ ಅನಿಮಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಫ್ಯಾಮಿಲಿ ಮ್ಯಾನ್2 ಮತ್ತು ಪುಷ್ಪ ಸಿನಿಮಾ ಸ್ಪೆಶಲ್ ಹಾಡಿನ ಮೂಲಕ ರಶ್ಮಿಕಾ ಅವರಿಗೂ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಇವರನ್ನು ಹುಡುಕಿಕೊಂಡು ಹಲವು ಅವಕಾಶಗಳು ಬರುತ್ತಿವೆ. ಇವರಿಬ್ಬರಿಗೆ ಬಾಲಿವುಡ್ ನಲ್ಲೂ ದೊಡ್ಡ ಫ್ಯಾನ್ ಬೇಸ್ ಇರುವ ಕಾರಣ, ಇಬ್ಬರಿಗೂ ಅವಕಾಶ ಸಿಗಬಹುದು ಎನ್ನಲಾಗುತ್ತಿದ್ದು, ಸಲ್ಮಾನ್ ಖಾನ್ ಅವರೊಡನೆ ನಟಿಸಲು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.ಇದು ನಿಜವೇ ಎಂದು ತಿಳಿಯಲು, ಅಧಿಕೃತ ಸುದ್ದಿಯಾಗಿ ಇನ್ನು ಕೆಲ ಸಮಯ ಕಾಯಬೇಕಿದೆ.
Comments are closed.