ಆಲಿಯಾ ನೀವು ಗ್ರೇಟ್ ಎಂದ ನೆಟ್ಟಿಗರು: ಪ್ರೆಗ್ನನ್ಸಿ ತಿಳಿಯುವ ಮುನ್ನವೇ ಗಟ್ಟಿ ನಿರ್ಧಾರ ಮಾಡಿದ್ದ ಆಲಿಯಾ ಏನು ಗೊತ್ತೇ?
ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ತಾಯಿ ಆಗುತ್ತಿರುವ ವಿಶೇಷವಾದ ಸಿಹಿ ಸುದ್ಧಿಯನ್ನು ಇತ್ತೀಚೆಗೆ ಶೇರ್ ಮಾಡಿಕೊಂಡರು. ಆಲಿಯಾ ಭಟ್ ಇಷ್ಟು ಬೇಗ ತಾಯಿ ಆಗುವ ನಿರ್ಧಾರ ಮಾಡಿದ್ದು, ಹಲವರಿಗೆ ಶಾಕ್ ನೀಡಿದೆ. ತಿಂಗಳುಗಳ ಹಿಂದೆಯಷ್ಟೇ ಮದುವೆಯಾದ ಆಲಿಯಾ ಭಟ್ ಈಗ ತಾಯಿ ಆಗಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಈಗ ಮಗು ಆಗುತ್ತಿರುವ ಕಾರಣರಿಂದ ಆಲಿಯಾ ಭಟ್ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ನಟಿ ಆಲಿಯಾ ಭಟ್ ಸ್ಟಾರ್ ಕಿಡ್ ಆಗಿದ್ದರು ಸಹ, ಇವರು ಗುರುತಿಸಿಕೊಂಡಿದ್ದು, ಸಿನಿಮಾದಲ್ಲಿ ಉತ್ತಮವಾದ ಅಭಿನಯ ಮಾಡಿ, ಒಳ್ಳೆಯ ಪಾತ್ರಗಳನ್ನು ಆರಿಸಿಕೊಳ್ಳುವ ಮೂಲಕ. ಇತ್ತೀಚೆಗೆ ಮದುವೆಯಾದ ಆಲಿಯಾ ಭಟ್, ಈಗ ಗರ್ಭಿಣಿ ಆಗಿರುವ ಕಾರಣ, ಸಿನಿಜೀವನದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಮಗು ಆದ ಬಳಿಕ, ಮಗುವಿನ ಪಾಲನೆ, ಪೋಷಣೆ, ಮಗುವನ್ನು ನೋಡಿಕೊಳ್ಳಬೇಕಾದ ಕಾರಣ, ಸಿನಿಮಾ ಇಂದ ಒಂದು ದೊಡ್ಡ ಬ್ರೇಕ್ ಪಡೆಯಲು ನಿರ್ಧಾರ ಮಾಡಿದ್ದಾರಂತೆ ನಟಿ ಆಲಿಯಾ ಭಟ್. ಆಲಿಯಾ ಭಟ್ ಅವರು ಮದುವೆಯಾದ ತಕ್ಷಣವೇ ಮಗು ಹೊಂದುವ ಪ್ಲಾನ್ ಇದ್ದ ಕಾರಣದಿಂದಲೇ, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಒಪ್ಪಿಕೊಳಲಿಲ್ಲ ಎನ್ನುವ ವಿಚಾರ ಸಹ ಈಗ ಹರಿದಾಡುತ್ತಿದೆ.
ನಟ ಜ್ಯೂನಿಯರ್ ಎನ್.ಟಿ.ಆರ್ ನಾಯಕನಾಗಿ, ಕೊರಟಾಲ ಶಿವ ನಿರ್ದೇಶನ ಮಾಡಲಿರುವ ಸಿನಿಮಾಗೆ ಆಲಿಯಾ ಭಟ್ ಅವರೇ ನಾಯಕಿ ಎನ್ನಲಾಗಿತ್ತು, ಆದರೆ ಆಲಿಯಾ ಭಟ್ ಅವರು ಚಿತ್ರದಿಂದ ಹೊರಬಂದರು. ಪ್ರಸ್ತುತ ಆಲಿಯಾ ಭಟ್ ಅವರ ಕೈಯಲ್ಲಿ 4 ಸಿನಿಮಾಗಳಿವೆ, ಬ್ರಹ್ಮಾಸ್ತ್ರ ಸಿನಿಮಾ ಚಿತ್ರೀಕರಣ ಮುಗಿದು, ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ಡಾರ್ಲಿಂಗ್ಸ್ ಎನ್ನುವ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ , ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗೆ ಆಲಿಯಾ ಭಟ್ ನಾಯಕಿ, ಜೊತೆಗೆ ಹಾಲಿವುಡ್ ನ ಹಾರ್ಟ್ ಆಫ್ ಸ್ಟೋನ್ಸ್ ಸಿನಿಮಾದಲ್ಲಿ ಸಹ ಆಲಿಯಾ ಭಟ್ ನಟಿಸುತ್ತಿದ್ದು, ಮಗು ಜನಿಸುವ ಮೊದಲು ಸಿನಿಮಾ ಚಿತ್ರೀಕರಣಗಳನ್ನು ಮುಗಿಸಿ, ಬಿಗ್ ಬ್ರೇಕ್ ಪಡೆಯಲಿದ್ದಾರೆ.
Comments are closed.