ಮಹಾವಿಷ್ಣುವಿಗೆ ಪ್ರಿಯವಾದ ಈ ಸಸ್ಯದಿಂದ, ಹಣಕಾಸಿನ ಎಲ್ಲ ಸಮಸ್ಯೆ ನಿವಾರಣೆಯಾಗಿ, ಶನಿ ಕಾಟದಿಂದ ಮುಕ್ತಿ ಸಿಗುತ್ತದೆ, ನೀವೇನು ಮಾಡಬೇಕು ಗೊತ್ತೇ??
ನಮ್ಮ ಶಾಸ್ತ್ರದಲ್ಲಿ ಹೂವುಗಳು ಮತ್ತು ಗಿಡಗಳಿಗೂ ಸಹ ಪ್ರಾಮುಖ್ಯತೆ ಇದೆ, ಎಲ್ಲಾ ದೇವರುಗಳು ಇಷ್ಟಪಡುವ ಒಂದೊಂದು ಪುಷ್ಪ ಇರುತ್ತದೆ, ಅದರಿಂದ ದೇವರನ್ನು ಪೂಜಿಸಿ, ಪುಷ್ಪವನ್ನು ದೇವರಿಗೆ ಅರ್ಪಿಸಿದರೆ, ಅದರಿಂದ ನಿಮಗೆ ಒಳ್ಳೆಯದಾಗುತ್ತದೆ. ಮಹಾವಿಷ್ಣುವಿಗೆ ಪ್ರಿಯವಾಗಿರುವಂತಹ ಒಂದು ಸಸ್ಯದ ಹೂವಿನಿಂದ ನಿಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು, ಹಾಗೂ ಶನಿದೇವರ ತೊಂದರೆ ಇಂದ ಸಹ ಮುಕ್ತಿ ಪಡೆಯಬಹುದು. ಆ ಸಸ್ಯ ಯಾವುದು, ಅದರಿಂದ ಏನು ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
*ನೀವು ಇಷ್ಟಪಡುವ ಕೆಲಸ ನಿಮಗೆ ಸಿಗಬೇಕೆಂದರೆ, ಶಂಕಪುಶ್ಪಿ ಹೂವು ಸಹಾಯ ಮಾಡುತ್ತದೆ. ಈ ಉಪಾಯ ನಿಜಕ್ಕೂ ಕೆಲಸ ಮಾಡಿದೆ. ಐದು ಪಟಕಗಳ ಜೊತೆಗೆ ಶಂಕಪುಶ್ಪಿ ಹೂವನ್ನು ಸೇರಿಸಿ, ಶ್ರೀಮಹಾವಿಷ್ಣುವಿಗೆ ಅರ್ಪಣೆ ಮಾಡಿ, ಮರುದಿನ ಹೂವನ್ನು ತೆಗೆದುಕೊಂಡು, ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಕೆಲಸದ ಇಂಟರ್ವ್ಯೂ ಗೆ ಹೋಗುವಾಗ, ಈ ಹೂವನ್ನು ಜೊತೆಯಾಗಿ ತೆಗೆದುಕೊಂಡು ಹೋಗಿ. ನಿಮಗೆ ಕೆಲಸ ಸಿಗುವುದು ಗ್ಯಾರಂಟಿ.
*ನಿಮಗೆ ಹಣಕಾಸಿನ ತೊಂದರೆ ಏನಾದರೂ ಇದ್ದರೆ, ಶಂಕಪುಶ್ಪಿ ಹೂವನ್ನು ತೆಗೆದುಕೊಂಡು, ಹರಿಯುವ ನೀರಿನಲ್ಲಿ ಹರಿಬಿಡಿ. ಮೂರು ವಾರಗಳ ಕಾಲ ಇದೇ ರೀತಿ ಮಾಡಿ, ಇದರಿಂದ ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.
*ವಾಸ್ತು ಪ್ರಕಾರ, ಶಂಕಪುಶ್ಪಿ ಹೂವನ್ನು ಶನಿದೇವರಿಗೆ ಅರ್ಪಣೆ ಮಾಡಿದರೆ, ಶನಿದೇವರ ಸಾಡೇಸಾತಿ ಹಾಗೂ ಶನಿದೇವರ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗಿದೆ. ಹಲವು ಕೆಲಸಗಳನ್ನು ಮಾಡುವಾಗ, ಶಂಕಪುಶ್ಪಿ ಹೂವನ್ನು ಜೊತೆಯಲ್ಲೇ ಇಟ್ಟುಕೊಂಡರೆ, ಕಾರ್ಯಸಿದ್ಧಿ ಆಗುವುದು ಖಂಡಿತ ಎನ್ನಲಾಗಿದೆ.
*ಶಂಕಪುಶ್ಪಿ ಗಿಡವನ್ನು ಮನೆಯ ಉತ್ತರ ನೆಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದಾಗಿ ಅಷ್ಟಶಕ್ತಿ ಹೆಚ್ಚಾಗುತ್ತದೆ. ಉತ್ತರ ದಿಕ್ಕಿನಲ್ಲಿ ಗಿಡವನ್ನು ನೆಟ್ಟರೆ, ಮನೆಯ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಒಂದು ವೇಳೆ ಶಂಕಪುಶ್ಪಿ ಗಿಡವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಟ್ಟರೆ ಮನೆಯ ಯಜಮಾನರಿಗೆ ಕಷ್ಟವಾಗುತ್ತದೆ.
*ಈ ಗಿಡವನ್ನು ಸಾಮಾನ್ಯವಾಗಿ ಫೆಬ್ರವರಿ ಹಾಗು ಮಾರ್ಚ್ ತಿಂಗಳಿನಲ್ಲಿ ನೆಡುತ್ತಾರೆ. ಶಂಕಪುಶ್ಪಿ ಗಿಡವು, ಶ್ರೀಕೃಷ್ಣ ಹಾಗೂ ಶ್ರೀವಿಷ್ಣುವಿಗೆ ಬಹಳ ಇಷ್ಟವಾದ ಗಿಡ, ಹಾಗಾಗಿ ಈ ಗಿಡವನ್ನು ವಿಷ್ಣುಪ್ರಿಯ ಹಾಗೂ ಕೃಷ್ಣಕಾಂತ ಎಂದು ಸಹ ಕರೆಯುತ್ತಾರೆ. ಜೊತೆಗೆ ಈ ಗಿಡದ ಬಳ್ಳಿ ಹಬ್ಬಿದಂತೆ, ಮನೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ. ಜೊತೆಗೆ ಮನೆಯಲ್ಲಿರುವ ವ್ಯಕ್ತಿಗಳು ಅಭಿವೃದ್ಧಿ ಹೊಂದುತ್ತಾರೆ.
Comments are closed.