ಬೆಳಕಿಗೆ ಬಂತು ಮತ್ತೊಂದು ವಿಚಾರ, ನಾಗ ಹಾಗೂ ಸಮಂತಾ ವಿಚ್ಚೇದನ ಪಡೆಯಲು ಚೈತನ್ಯ ಅಮ್ಮ ಅಮಲಾ ಕಾರಣನಾ?? ಏನೆಲ್ಲಾ ಮಾಡಿದ್ದರಂತೆ ಗೊತ್ತೇ??
ನಟ ನಾಗಚೈತನ್ಯ ಮತ್ತು ನಟಿ ಸಮಂತಾ ವಿಚ್ಛೇದನ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿದೆ. ಅವರ ಬಗ್ಗೆ ಕಾಲಕಾಲಕ್ಕೆ ಬೇರೆ ಬವೀ ವದಂತಿಗಳು ಕೇಳಿ ಬರುತ್ತಿವೆ. ಆದರೆ ಈವರೆಗೂ ಇಬ್ಬರೂ ಏಕೆ ವಿಚ್ಛೇದನ ಪಡೆದರು ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಈ ಕಾರಣದಿಂದಾಗಿ, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯ ಸುದ್ದಿಗಳು ಇವರಿಬ್ಬರ ವಿರುದ್ಧ ಕೇಳಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ವಿಚ್ಛೇದನಕ್ಕೆ ನಾಗಾರ್ಜುನ ಪತ್ನಿ ಅಮಲಾ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಮೆಂಟ್ ಗಳು ಹರಿದಾಡುತ್ತಿವೆ. ಇದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆಯೋ ಗೊತ್ತಿಲ್ಲ, ಆದ್ರೆ ಈ ಮ್ಯಾಟರ್ ಟ್ರೆಂಡ್ ಆಗಿದೆ. ಈ ವಿಚಾರದ ಬಗ್ಗೆ ಸಂಪೂರ್ಣ ವಿವರ ತಿಳಿಸುತ್ತೇವೆ ನೋಡಿ..
ಕೆಲವು ವಿವಾದಗಳಿಂದಾಗಿ ನಟ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಮೊದಲ ಪತ್ನಿ ಲಕ್ಷ್ಮಿ ಅವರಿಗೆ ವಿಚ್ಛೇದನ ನೀಡಿದರು. ಅದೇ ಸಮಯದಲ್ಲಿ ನಟಿ ಅಮಲಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಲಕ್ಷ್ಮಿ ಅವರಿಂದ ವಿಚ್ಛೇದನ ಪಡೆಯುವ ಮೊದಲೇ ನಾಗ ಚೈತನ್ಯ ಜನಿಸಿದರು. ಆದರೆ ನಾಗಾರ್ಜುನ ಎಂದಿಗೂ ನಾಗ ಚೈತನ್ಯರನ್ನು ದೂರ ಮಾಡಲಿಲ್ಲ. ಮಗನನ್ನು ಯಾವಾಗಲೂ ಬೆಂಬಲಿಸುತ್ತಾರೆ ಮತ್ತು ಅವರ ವೃತ್ತಿಜೀವನಕ್ಕೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಆದರೆ ಅಮಲಾ ನಾಗಚೈತನ್ಯ ಬಗ್ಗೆ ಕೊಂಚ ಹಠಮಾರಿ ಧೋರಣೆ ತೋರುತ್ತಿದ್ದಾರೆ ಎಂಬ ವರದಿಗಳಿವೆ. ಅಖಿಲ್ ಅಕ್ಕಿನೇನಿ ಮೇಲಿರುವ ಪ್ರೀತಿ ನಾಗಚೈತನ್ಯ ಅವರ ಮೇಲಿಲ್ಲ ಎನ್ನುವ ವಿಚಾರ ಕೂಡ ಕೇಳಿಬಂದಿದೆ.
ಯಾವುದೇ ವಿಚಾರದಲ್ಲಿ ಮೊದಲು ಅಖಿಲ್‌ಗೆ ಒಲವು ತೋರಿದ ನಂತರ ನಾಗ ಚೈತನ್ಯ ಕಡೆಗೆ ನೋಡುತ್ತಾರೆ ಎನ್ನಲಾಗಿದೆ. ನಾಗಚೈತನ್ಯ ಸಮಂತಾ ಅವರನ್ನು ಮದುವೆಯಾದ ನಂತರ ಇವರ ವಿಚಾರದಲ್ಲಿ ಕೆಲವು ತೊಂದರೆಗಳು ಎದುರಾಗಿದ್ದವು. ಚಿತ್ರಹಿಂಸೆ ತಾಳಲಾರದೆ ಸಮಂತಾ ಚೈತನ್ಯ ಅವರಿಗೆ ವಿಚ್ಛೇದನ ನೀಡಿದ್ದಾರಂತೆ. ಇವರಿಬ್ಬರು ದೂರವಾಗಲು ಅಮಲಾ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ. ಅಖಿಲ್ ಅವರ ನಿಶ್ಚಿತಾರ್ಥವನ್ನು ಮುರಿದು ಬಿದ್ದಿದೆ ಹಾಗಾಗಿ ಅಖಿಲ್ ಮದುವೆ ಬೇಗ ಆಗಲಿ ಎಂದು ಬಯಸುತ್ತಿದ್ದಾರಂತೆ ಅಮಲಾ. ಆದರೆ ಚೈತನ್ಯ ಕಡೆಗೆ ಗಮನ ಹರಿಸುತ್ತಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಅದೇನೇ ಇರಲಿ, ಸಮಂತಾ ಮತ್ತು ನಾಗಚೈತನ್ಯ ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡುವ ವರೆಗೂ ಇಂತಹ ವದಂತಿಗಳು ಬರುತ್ತಲೇ ಇರುತ್ತವೆ.
Comments are closed.