ಅಸಲಿಗೆ ನಿಜವಾಗಲೂ ಪವಿತ್ರ ಹಾಗೂ ನರೇಶ್ ಒಂದೇ ಹೋಟೆಲ್ ನಲ್ಲಿ ಭೇಟಿಯಾಗಲು ಕಾರಣವೇನು ಗೊತ್ತೇ??
ಕಳೆದ ಕೆಲವು ದಿನಗಳಿಂದ ಹಿರಿಯ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರು ಸುದ್ದಿಯಲ್ಲಿರುವ ವಿಚಾರ ಗೊತ್ತೇ ಇದೆ. ಅದರಲ್ಲೂ ಕೆಲ ದಿನಗಳ ಹಿಂದೆ ಹೊಟೇಲ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಮಯದಲ್ಲಿ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಪವಿತ್ರಾ ಲೋಕೇಶ್ ಅವರ ಮೇಲೆ ಶೂ ಇಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ಚಿತ್ರರಂಗದ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಘಟನೆಯ ಕುರಿತು ಕೆಲವರು ರಮ್ಯಾ ರಘುಪತಿಯನ್ನು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಗಮನಾರ್ಹ.
ಆ ಹೋಟೆಲ್ ನಲ್ಲಿ ನರೇಶ್ ಪವಿತ್ರಾ ಲೋಕೇಶ್ ಜೊತೆಯಾಗಿ ಉಳಿದುಕೊಂಡಿರುವುದರ ಹಿಂದೆ ಬೇರೆಯೇ ಕಾರಣವಿದೆಯಂತೆ. ನರೇಶ್ ರಮ್ಯಾ ರಘುಪತಿಗೆ ವಿಚ್ಛೇದನ ನೀಡಲು ಬಯಸಿದ್ದರೂ ಆಕೆ ವಿಚ್ಛೇದನಕ್ಕೆ ಒಪ್ಪುತ್ತಿಲ್ಲ ಎನ್ನುವುದು ಗೊತ್ತಿರುವ ವಿಚಾರ. ನರೇಶ್ ಅವರು ಹಾಗೂ ಪವಿತ್ರಾ ಹೋಟೆಲ್ ನಲ್ಲಿದ್ದಾರೆ ಎನ್ನುವುದನ್ನು ಸ್ವತಃ ನರೇಶ್ ಅವರೇ ರಮ್ಯಾ ಅವರಿಗೆ ತಿಳಿಸಿದ್ದರಂತೆ ಎಂದು ಚಿತ್ರರಂಗದವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಮೂಲಕ ರಮ್ಯಾ ರಘುಪತಿ ಜಗಳಕ್ಕಿಳಿದು ಮಾಧ್ಯಮಗಳ ಗಮನಕ್ಕೆ ಬಂದಿದ್ದಾರೆ. ಈ ಜಗಳದಿಂದ ನರೇಶ್ ಗೆ ವಿಚ್ಛೇದನವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಒಂದೇ ಹೊಟೇಲ್‌ನಲ್ಲಿ ಗಂಡು ಹೆಣ್ಣು ಒಟ್ಟಿಗೆ ಕಾಣಿಸಿಕೊಂಡರೂ ಶಿಕ್ಷೆಗೆ ಗುರಿಯಾಗುವುದಿಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೆ ನರೇಶ್ ಅವರ ಆಪ್ತರಿಂದ ರಮ್ಯಾಗೆ ಈ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಪವಿತ್ರಾ ಲೋಕೇಶ್ ಜೊತೆ ನರೇಶ್ ಮದುವೆಯಾದರೆ ಖಂಡಿತಾ ರೋಚಕ ಎನ್ನಬಹುದು. ಮತ್ತೊಂದೆಡೆ, ಪವಿತ್ರಾ ಅವರ ಪತಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಪವಿತ್ರಾ ಅವರು ಬೇರೆಯದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದರೆ, ಪವಿತ್ರಾ ಅವರನ್ನು ಮದುವೆಯಾಗಿದ್ದೇನೆ ಎಂದು ಸುಚೇಂದ್ರ ಪ್ರಸಾದ್ ಬಹಿರಂಗಪಡಿಸಿದ್ದಾರೆ. ಪವಿತ್ರಾ ನನ್ನ ಹೆಂಡತಿ ಮತ್ತು ನನ್ನ ಪಾಸ್‌ಪೋರ್ಟ್‌ನಲ್ಲಿ ನನ್ನ ಹೆಂಡತಿಯ ಹೆಸರು ಪವಿತ್ರಾ ಲೋಕೇಶ್ ಎಂದು ಇದೆ ಎಂದು ಸುಚೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.
Comments are closed.