ಷಾಕಿಂಗ್ ಹಾದಿ ಹಿಡಿಯುತ್ತಿರುವ ಯುವ ಜನತೆ: ಮದುವೆ ಹಾಗೂ ಮಕ್ಕಳ ಕುರಿತು ಅಭಿಪ್ರಾಯವೇನು ಗೊತ್ತೇ?? ಏನ್ ಕಾಲ ಬಂತು ಎಂದ ಜನತೆ.
ಒಮ್ಮೆ ಮದುವೆಯಾಗಿ ಒಂದು ವರ್ಷ ತುಂಬುವುದಕ್ಕೂ ಮೊದಲೇ ಮಕ್ಕಳಾಗುತ್ತದೆ, ಅಥವಾ ಮಕ್ಕಳ ಬಗ್ಗೆ ತುಂಬಾ ಚಿಂತನೆ ನಡೆಸುತ್ತಾರೆ. ಸ್ವಲ್ಪ ತಡವಾದರೆ ಅಕ್ಕಪಕ್ಕದ ಮನೆಯವರು ಕೂಡ ಇನ್ನೂ ಮಕ್ಕಳಾಗಿಲ್ಲ ಎಂದು ಅನುಮಾನದಿಂದ ನೋಡುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದ್ದು, ಮಕ್ಕಳ ವಿಚಾರದಲ್ಲೂ ಟ್ರೆಂಡ್ ಬದಲಾಗಿದೆ. ದಾಂಪತ್ಯ ಜೀವನ, ಹಾಗೂ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿದೆ.
ಸಮೀಕ್ಷೆಯಲ್ಲಿ ಕೆಲವರು ಮದುವೆಯಾಗಬೇಕು ಆದರೆ ಮಕ್ಕಳು ಬೇಡ ಎಂದು ಹೇಳಿದರೆ ಇನ್ನು ಕೆಲವರು ಮಕ್ಕಳೇ ಬೇಡ ಎನ್ನುತ್ತಾರೆ. ಶೇ.52 ರಷ್ಟು ಜನರು ವಿವಾಹ ಜೀವನದಲ್ಲಿ ಒಂದು ಪ್ರಮುಖ ಘಟನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ 25 ಪ್ರತಿಶತ ಜನರು ಮದುವೆಯನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಅಂದರೆ, ಮದುವೆಯ ಅಗತ್ಯವಿಲ್ಲ ಎಂದು ಕೆಲವರು ಹೇಳಿದರು. ಇದಲ್ಲದೆ ಇನ್ನೂ ಶೇ.25 ರಷ್ಟು ಜನರು ನಮಗೆ ಮದುವೆಯಾಗಲು ಇಷ್ಟವಿಲ್ಲ ಆದರೆ ನಾವು ಡೇಟಿಂಗ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಮದುವೆಯ ನಂತರ ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಶೇ.54ರಷ್ಟು ಮಂದಿ ಮಕ್ಕಳು ಬೇಕು ಎಂದಿದ್ದಾರೆ.
ಶೇ.18ರಷ್ಟು ಮಂದಿ ಯಾವುದೇ ಉತ್ತರ ನೀಡಲು ಸಾಧ್ಯವಾಗಿಲ್ಲ. ಆದರೆ ಶೇ.14ರಷ್ಟು ಮಂದಿ ಮದುವೆಯಾಗಬೇಕು ಆದರೆ ಮಕ್ಕಳು ಬೇಡ ಎಂದಿದ್ದಾರೆ. ಶೇ.38ರಷ್ಟು ಮಂದಿ ಮಾತ್ರ ತಮಗೆ ಮದುವೆ ಮತ್ತು ಮಕ್ಕಳು ಬೇಕು ಎಂದು ಹೇಳಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ಶೇ.63ರಷ್ಟು ಮಂದಿ ಮದುವೆ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ ಮಕ್ಕಳೇಕೆ ಬೇಡ ಎಂದು ಕೇಳಿದರೆ, ಕೆಲವರು ಮಕ್ಕಳನ್ನು ಹೊರೆ ಎಂದು ಪರಿಗಣಿಸುತ್ತಾರೆ. ಇನ್ನು ಕೆಲವರು ಈಗಿನ ಖರ್ಚಿನ ನಡುವೆ ಮಕ್ಕಳು ಬೇಡ ಎಂದು ಭಾವಿಸುತ್ತಾರೆ. ವಾಸ್ತವವಾಗಿ, ಏಕಾಂಗಿ ಜೀವನವು ತುಂಬಾ ಉತ್ತಮವಾಗಿದ್ದರು, ನಿಮಗೆ ಮದುವೆಯಾಗಿ ಮಕ್ಕಳಿಲ್ಲದಿದ್ದರೆ, ನೀವು ಕೊನೆಯ ಕ್ಷಣಗಳಲ್ಲಿ ನೋವು ಅನುಭವಿಸಬೇಕಾಗುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.
Comments are closed.