ಹುಡುಗಿಯರು ಕೈ ಕೊಡುತ್ತಾರೆ ಎನ್ನುವ ಮೊದಲು ಹುಡುಗಿಯರು ಪ್ರೀತಿ ಮಾಡಿದ ಬಳಿಕ ಮದುವೆಯಾಗದೆ ಇರುವುದಕ್ಕೆ ಏನು ಕಾರಣ ತಿಳಿಯಿರಿ.
ಈಗಿನ ಕಾಲದಲ್ಲಿ ಪ್ರೇಮ ಪ್ರೀತಿ ಎನ್ನುವುದು ಸರ್ವೇ ಸಾಮಾನ್ಯವಾಗಿ ನಡೆಯುವಂತಹ ವಿಚಾರ ಆಗಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ಡಿಗ್ರಿ ಕಾಲೇಜಿಗೆ ಹೋಗುವವರು, ವಯಸ್ಸಿನ ಅಂತರ ಇಲ್ಲದೆ ಎಲ್ಲರೂ ಪ್ರೀತಿಸಲು ಶುರು ಮಾಡುತ್ತಾರೆ. ಹುಡುಗ ಹುಡುಗಿಯರ ದೈಹಿಕ ಬದಲಾವಣೆ ಸಹ, ಆಕರ್ಷಕರಾಗುವ ಹಾಗೆ ಮಾಡಬಹುದು. ಒಂದಲ್ಲ ಒಂದು ಕಾರಣದಿಂದ ಹುಡುಗ ಹುಡುಗಿಯರು ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಶುರುವಾಗುವ ಎಲ್ಲಾ ಪ್ರೀತಿಯು ಒಳ್ಳೆಯ ರೀತಿಯಲ್ಲಿ ಕೊನೆಯಾಗುವುದಿಲ್ಲ.
100 ರಲ್ಲಿ 10 ಪ್ರೀತಿ ಮಾತ್ರ, ಸಕ್ಸಸ್ ಆಗುತ್ತದೆ, ಮದುವೆವರೆಗೂ ತಲುಪುತ್ತದೆ. ಬಹುತೇಕ ಎಲ್ಲಾ ಪ್ರೀತಿಗಳು ಸೋಲು ಕಾಣುವುದೇ ಹೆಚ್ಚು. ಎಲ್ಲರೂ ಹೇಳುವುದು ಹುಡುಗಿಯರು ಕೈ ಕೊಟ್ಟು ಹೋಗುತ್ತಾರೆ ಎಂದು. ಪ್ರೀತಿ ಶುರುವಾಗುವ ಸಮಯದಲ್ಲಿ ಹುಡುಗಿಯರು ಹುಡುಗ ನೋಡಲು ಚೆನ್ನಾಗಿದ್ದಾನಾ, ತಮಗೆ ಸಮಯ ಕೊಡುತ್ತಾನಾ ಎನ್ನುವ ಅಂಶಗಳನ್ನು ಮಾತ್ರ ಗಮನಿಸಿ ಪ್ರೀತಿ ಮಾಡಲು ಶುರು ಮಾಡುತ್ತಾರೆ. ಆ ಹುಡುಗನೆ ತನಗೆ ಎಲ್ಲವೂ ಎಂದುಕೊಂಡಿರುತ್ತಾಳೆ. ಆದರೆ ಮದುವೆ ಎನ್ನುವ ವಿಚಾರ ಬಂದಾಗ, ಬೇರೆ ಎಲ್ಲಾ ಅಂಶಗಳು ಸಹ ಗೊತ್ತಾಗಲು ಶುರುವಾಗುತ್ತದೆ.
ತಾನು ಇಷ್ಟಪಟ್ಟ ಹುಡುಗ ತನ್ನನ್ನು ಮದುವೆಯಾಗಲು ಯೋಗ್ಯನೆ ಅಲ್ಲ ಎಂದು ಅರ್ಥವಾಗುತ್ತದೆ. ತಂದೆ ತಾಯಿಯರ ಬಗ್ಗೆ ಸಹ ಯೋಚಿಸಿ, ಅವರ ಮನಸ್ಸಿಗೆ ಬೇಸರ ಆಗಬಾರದು ಎನ್ನುವ ಕಾರಣಕ್ಕೆ, ಹುಡುಗಿಯರು ತಾವು ಪ್ರೀತಿ ಮಾಡಿದ ಹುಡುಗನನ್ನು ಬಿಟ್ಟು, ತಂದೆ ತಾಯಿ ತೋರಿಸಿದ ಹುಡುಗನ ಜೊತೆಗೆ ಮದುವೆಯಾಗುತ್ತಾರೆ. ಹುಡುಗಿಯರು ಕೈಕೊಡುತ್ತಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ, ಆದರೆ ನಿಜವಾದ ವಿಚಾರ ಇದಾಗಿದ್ದು, ಹುಡುಗರು ಕಾಲೇಜ್ ಸಮಯದಲ್ಲಿ ಹುಡುಗಿಯರ ಹಿಂದೆ ಪ್ರೀತಿ ಪ್ರೇಮ ಎಂದು ಅಲೆಯುವುದನ್ನು ಬಿಟ್ಟು, ಕೆರಿಯರ್ ಮೇಲೆ ಗಮನ ಹರಿಸಿದರೆ, ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ.
Comments are closed.