ರಾಜಮೌಳಿ ಯಾಕೆ ನಿಮ್ಮನ್ನು ಹಾಕ್ಕೊಂಡು ಸಿನಿಮಾ ಮಾಡ್ತಿಲ್ಲ ಕಾರಣ ಹೇಳಿದ ಕಿಚ್ಚ. ಖಡಕ್ ಆಗಿ ಹೇಳಿದ್ದೇನು ಗೊತ್ತೇ??
ಕಿಚ್ಚ ಸುದೀಪ್ ಅವರು ಭಾರತ ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿರುವ ಅಪರೂಪದ ಕನ್ನಡಿಗರಲ್ಲಿ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಕನ್ನಡ ಸಿನಿಮಾಗಳಿಂದ ಶುರುವಾದ ಇವರ ಜರ್ನಿ, ತೆಲುಗು, ತಮಿಳು ಹಾಗೂ ಬಾಲಿವುಡ್ ಸಹ ತಲುಪಿದೆ. ಸುದೀಪ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ತೆಲುಗಿನ ಈಗ ಸಿನಿಮಾ ಎಂದರೆ ತಪ್ಪಾಗುವುದಿಲ್ಲ. ಆ ಸಿನಿಮಾದಲ್ಲಿ ಸುದೀಪ್ ಅವರ ಅಭಿನಯ ಅದ್ಭುತವಾಗಿತ್ತು. ಸುದೀಪ್ ಅವರಿಲ್ಲದೆ ಹೋಗಿದ್ದರೆ, ಈಗ ಸಿನಿಮಾ ಆಗುತ್ತಿರಲಿಲ್ಲ ಎಂದು ನಿರ್ದೇಶಕ ರಾಜಮೌಳಿ ಅವರೇ ಹೇಳಿಕೆ ನೀಡಿದ್ದರು. ಸುದೀಪ್ ಹಾಗೂ ರಾಜಮೌಳಿ ಅವರ ನಡುವೆ ಒಳ್ಳೆಯ ಬಾಂಧವ್ಯ ಇದೆ.
ಈಗ ಬಳಿಕ, ರಾಜಮೌಳಿ ಅವರು ನಿರ್ದೇಶನ ಮಾಡಿದ ಬಾಹುಬಲಿ1 ರಲ್ಲಿ ಸಹ ಸುದೀಪ್ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ರಾಜಮೌಳಿ ಅವರು ಬಾಹುಬಲಿ2 ಹಾಗೂ ಆರ್.ಆರ್.ಆರ್ ಸಿನಿಮಾ ನಿರ್ದೇಶನ ಮಾಡಿದರು. ಆದರೆ ಆ ಎರಡು ಸಿನಿಮಾಗಳಲ್ಲೂ ಸುದೀಪ್ ಅವರು ನಟಿಸಲಿಲ್ಲ. ಪ್ರಸ್ತುತ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆದಾಗ, ಅಲ್ಲಿನ ಪತ್ರಕರ್ತರೊಬ್ಬರು ಇದೇ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದು, ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಸುದೀಪ್.
“ಈಗ ಸಿನಿಮಾ ಸೂಪರ್ ಹಿಟ್ ಆಯಿತು. ಅದಾದ ಬಳಿಕ ನಾನು ಬೇರೆ ಸಿನಿಮಾಗಳನ್ನು ಮಾಡಿದ್ದೇನೆ, ರಾಜಮೌಳಿ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲಾ ಸಿನಿಮಾಗಳಲ್ಲೂ ನಾನು ಇರಬೇಕು ಎಂದು ಅಂದುಕೊಳ್ಳೋದಕ್ಕೆ ಆಗಲ್ಲ. ಕಥೆಗೆ ತಕ್ಕ ಹಾಗೆ ಆಯ್ಕೆ ನಡೆಯುತ್ತದೆ. ಅವರು ಬೇರೆ ಎಲ್ಲಾ ಕಲಾವಿದರ ಜೊತೆಗೆ ಕೆಲಸ ಮಾಡಬೇಕು..” ಎಂದು ಹೇಳಿದ್ದಾರೆ ಕಿಚ್ಚ. ಈ ಮೂಲಕ ರಾಜಮೌಳಿ ಅವರೊಡನೆ ಮತ್ತೆ ಯಾಕೆ ಕೆಲಸ ಮಾಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
Comments are closed.