ಸುಖವಾಗಿ ಇದ್ದ ಸಂಸಾರದಲ್ಲಿ ಕಡ್ಡಿ ಅಲ್ಲಾಡಿಸಿದ ನಟ ಯಾರು ಗೊತ್ತೇ?? ಕೊನೆಗೂ ನಾಗಚೈತನ್ಯ-ಸಮಂತಾ ಡೈವೋರ್ಸ್ ಗೆ ಯಾರು ಕಾರಣ ಗೊತ್ತೇ??
ಟಾಲಿವುಡ್ ನ ಕ್ಯೂಟ್ ಜೋಡಿಗಳಾಗಿ ಅಭಿಮಾನಿಗಳ ಫೇವರೆಟ್ ಆಗಿದ್ದ ಜೋಡಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ. ಐದಾರು ವರ್ಷಗಳ ಕಾಲ ಪ್ರೀತಿಸಿ, ಎರಡು ಕುಟುಂಬದವರನ್ನು ಒಪ್ಪಿಸಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2017ರಲ್ಲಿ ಅದ್ಧೂರಿಯಾಗಿ ಗೋವಾದಲ್ಲಿ ಸಮಂತಾ ಮತ್ತು ನಾಗಚೈತನ್ಯ ಅವರ ಮದುವೆ ನಡೆಯಿತು. ಇವರಿಬ್ಬರ ಮದುವೆಗೆ ಸಿನಿ ರಂಗದ ಗಣ್ಯರು ಆಗಮಿಸಿ ವಿಶ್ ಮಾಡಿದ್ದರು. ಅನ್ಯೋನ್ಯವಾಗಿದ್ದ ಈ ಜೋಡಿ, ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಸಹ ವಿಚ್ಚೇದನದ ವಿಚಾರವನ್ನು ಬಹಿರಂಗಪಡಿಸಿದರು. ಈ ವಿಚಾರದ ಬಗ್ಗೆ ನಾಗಚೈತನ್ಯ ಅವರು ಎಲ್ಲಿಯೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದರೆ ಸಮಂತಾ ಅವರು ಕೆಲವು ಸಂದರ್ಶನಗಳಲ್ಲಿ ಮಾತನಾಡಿದ್ದರು. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಸಹ ನಾಗಚೈತನ್ಯ ಅವರ ಬಗ್ಗೆ ಕಮೆಂಟ್ ಮಾಡಿದ್ದರು ಸಮಂತಾ. ಅದಾದ ಬಳಿಕ ಚೈತನ್ಯ ಅವರು ಸಹ ಒಂದು ಸಂದರ್ಶನದಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿ, ನಾನು ಈಗ ಸಂತೋಷವಾಗಿದ್ದೇನೆ ಎಂದು ಹೇಳಿದ್ದರು. ಇವರಿಬ್ಬರು ದೂರ ಆಗಿದ್ದಾದರು ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಈಗಲೂ ಕಾಡುತ್ತಿದೆ.
ಆದರೆ ಇದೀಗ ಬಾಲಿವುಡ್ ನ ಖ್ಯಾತ ವಿಮರ್ಶಕ ಕಮಲ್ ಆರ್ ಖಾನ್ ಚೈತನ್ಯ ಸಮಂತಾ ವಿಚ್ಛೇದನವಾಗಲು ಕಾರಣ ಯಾರು ಎಂದು ಬಹಿರಂಗಪಡಿಸಿ, ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೆ.ಆರ್.ಕೆ ಟ್ವೀಟ್ ಮಾಡಿರುವ ಪ್ರಕಾರ, ಈ ಮುದ್ದಾದ ಜೋಡಿಯ ವಿಚ್ಛೇದನಕ್ಕೆ ಕಾರಣ ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಅವರು. ಕಮಲ್ ಅವರು ಮಾಡಿರುವ ಈ ಟ್ವೀಟ್ ಈಗ ಭಾರಿ ವೈರಲ್ ಆಗುತ್ತಿದೆ. ಇದು ನಿಜವೇ ಎಂದು ನೆಟ್ಟಿಗರು ಮತ್ತು ಅಭಿಮಾನಿಗಳ ನಡುವೆ ಚರ್ಚೆ ಶುರುವಾಗಿದೆ. ಒಟ್ಟಿನಲ್ಲಿ ವಿಚ್ಛೇದನ ಪಡೆದ ಬಳಿಕ ನಾಗಚೈತನ್ಯ ಮತ್ತು ಸಮಂತಾ ಅವರ ಬಗ್ಗೆ ಯಾವುದೇ ಸುದ್ದಿ ಇದ್ದರು ಸಹ ಅದು ಬಹಳ ಚರ್ಚೆಗೆ ಒಳಗಾಗುತ್ತಿದೆ.
Comments are closed.