ತಾನೇ ಎಲ್ಲ ಎಂದು ಮೆರೆಯುತ್ತಿದ್ದ ಬಾಲಿವುಡ್ ಗೆ ಸೋಲಿನ ಮೇಲೆ ಸೋಲು: ಈಗ ಅಮಿರ್ ಖಾನ್ ಗೆ ಶಾಕ್ ಕೊಡಲು ಸಿದ್ದವಾದ ನೆಟ್ಟಿಗರು. ಏನಾಗುತ್ತಿದೆ ಗೊತ್ತೇ??
ಬಾಲಿವುಡ್ ನಲ್ಲಿ ಈಗ ಬಿಡುಗಡೆಗೆ ತಯಾರಿದ್ದು ಭಾರಿ ನಿರೀಕ್ಷೆ ಸೃಷ್ಟಿಸಿರುವ ಸಿನಿಮಾ ಲಾಲ್ ಸಿಂಗ್ ಚಡ್ಡಾ. ಈ ಸಿನಿಮಾ ಶುರುವಾಗಿ ವರ್ಷಗಳೇ ಕಳೆದಿವೆ. ಆದರೆ ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆ ಹಾಗೂ ಚಿತ್ರೀಕರಣ ಎಲ್ಲವೂ ಸಹ ತಡವಾಗಿತ್ತು. ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗಲು ಸಿದ್ಧವಾಗಿದೆ, ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಆದರೆ ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಟ್ರೆಂಡ್ ಆಗುತ್ತಿದೆ. ಅದು ಪಾಸಿಟಿವ್ ವಿಚಾರಕ್ಕಾಗಿ ಅಲ್ಲ.
ಬದಲಾಗಿ, ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಿಡುಗಡೆ ಮಾಡಬಾರದು, ಬಹಿಷ್ಕಾರ ಹಾಕಬೇಕು ಎಂದು, ಬಾಯ್ ಕಾಟ್ ಲಾಲ್ ಸಿಂಗ್ ಚಡ್ಡಾ ಎಂದು ಹ್ಯಾಶ್ ಟ್ಯಾಗ್ ಶುರುವಾಗಿದೆ. ಈ ಹಿಂದೆ ಸಹ ನಟ ಅಮೀರ್ ಖಾನ್ ಮತ್ತು ನಟಿ ಕರೀನಾ ಕಪೂರ್ ನೀಡಿದ ಹೇಳಿಕೆ ಇಂದಾಗಿ, ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಬಹಿಷ್ಕಾರ ಹಾಕಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದರು. ಇದೀಗ ಮತ್ತೆ ಅದೇ ಕಥೆ ಶುರುವಾಗಿದೆ. ಈ ಹಿಂದೆ ಒಂದು ಸಂದರ್ಶನದಲ್ಲಿ ಆಮೀರ್ ಖಾನ್ ಅವರು ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. “ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದರಿಂದ ಯಾವುದೇ ಉಪಯೋಗ ಇಲ್ಲ.
ಇದು ಅಪ್ರಯೋಜಕ ಆಚರಣೆ. ಇದರ ಬದಲಾಗಿ, ಅದೇ ಹಣದಲ್ಲಿ ಬಡಮಕ್ಕಳಿಗೆ ಸಹಾಯ ಮಾಡಬಹುದು..” ಎಂದಿದ್ದರು. ಇದೀಗ ನೆಟ್ಟಿಗರು, ಆಮೀರ್ ಖಾನ್ ಸಿನಿಮಾ ಯಾಕೆ ನೋಡಬೇಕು. ಅದೇ ಹಣದಲ್ಲಿ ಬಡಮಕ್ಕಳಿಗೆ ಸಹಾಯ ಮಾಡಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಕರೀನಾ ಕಪೂರ್ ಅವರು ಸಹ, ನೆಪೋಟಿಸಮ್ ಬಗ್ಗೆ ಹೇಳಿಕೆ ನೀಡಿದ್ದರು, ನಮ್ಮ ಸಿನಿಮಾ ನೋಡಬೇಡಿ, ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದಿದ್ದರು..ಆ ಹೇಳಿಕೆ ಸಹ ಈಗ ವೈರಲ್ ಆಗಿದ್ದು, ಕರೀನಾ ಕಪೂರ್ ಅಭಿನಯದ ಸಿನಿಮಾ ನೋಡುವುದು ಬೇಡ ಎನ್ನುವ ಚರ್ಚೆ ಶುರುವಾಗಿದೆ. ಈ ಬೆಳವಣಿಗೆ ನೋಡಿದರೆ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಹ ಫ್ಲಾಪ್ ಆಗುತ್ತಾ ಎನ್ನುವ ಆತಂಕ ಶುರುವಾಗಿದ್ದು, ಭೂಲ್ ಭುಲೈಯಾ ಸಿನಿಮಾ ಬಿಟ್ಟು ಇನ್ಯಾವುದೇ ಬಾಲಿವುಡ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿಲ್ಲ, ಹಾಗಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
Comments are closed.