ಒಂದೇ ಸಿನಿಮಾ ಥಿಯೇಟರ್ ನಲ್ಲಿ ಗಳಿಸಿದ್ದು 25 ಲಕ್ಷ: ಆದರೆ ಒಟ್ಟಾರೆ ಮೊದಲನೇ ದಿನದ ಕಲೆಕ್ಷನ್ ಎಷ್ಟು ಗೊತ್ತೇ?? ಆಗಿದ್ದೆ ಬೇರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ನಿನ್ನೆಯಷ್ಟೇ ತೆರೆಕಂಡಿದೆ. ಈ ಸಿನಿಮಾ ಶುರುವಾಗಿ ಬರೋಬ್ಬರಿ 3 ವರ್ಷಗಳ ಸಮಯ ಆಗಿತ್ತು, ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗುವುದು ತಡವಾಗಿದೆ. ನಿನ್ನೆ ಥಿಯೇಟರ್ ಗಳಲ್ಲಿ ಅಬ್ಬರಿಸಿದ್ದಾನೆ ವಿಕ್ರಾಂತ್ ರೋಣ, ಬರೋಬ್ಬರಿ 6 ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದ್ದು, ಸಿನಿಪ್ರಿಯರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ವಿಕ್ರಾಂತ್ ರೋಣನಿಗೆ ಭರ್ಜರಿಯಾದ ಸ್ವಾಗತ ಸಿಕ್ಕಿದೆ. ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿದೆ. ಆದರೆ ಉತ್ತರ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದರ ನಡುವೆ ಈಗ ವಿಕ್ರಾಂತ್ ರೋಣ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಿರಬಹುದು ಎನ್ನುವ ಕುತೂಹಲ ಸಿನಿಪ್ರಿಯರಲ್ಲಿ ಶುರುವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮೊದಲ ದಿನದ ಗಳಿಕೆ ಎಷ್ಟಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ನಿನ್ನೆ ಮೊದಲ ದಿನ, ಪ್ರಪಂಚದ ಮೂಲೆ ಮೂಲೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ 9500ಕ್ಕಿಂತ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಕರ್ನಾಟಕದಲ್ಲೂ ಸುಮಾರು 2500 ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಬಹುತೇಕ ಎಲ್ಲಾ ಶೋಗಳು ಹೌಸ್ ಫುಲ್ ಆಗಿ, ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ, ಹಣಗಳಿಕೆ ಸಹ ಚೆನ್ನಾಗಿಯೇ ಆಗಿದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ದಿನ ಸುಮಾರು 16 ರಿಂದ 18 ಕೋಟಿ ಗಳಿಕೆ ಆಗಿರಬಹುದು ಎನ್ನಲಾಗುತ್ತಿದೆ.
ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಭರ್ಜರಿಯಾದ ಕಲೆಕ್ಷನ್ ಆಗಿದ್ದು, ಮೊದಲ ದಿನ ₹25 ಲಕ್ಷ ರೂಪಾಯಿ ಹಣ ಗಳಿಕೆ ಆಗಿದೆ. ಇನ್ನು ಓರ್ಮ್ಯಾಕ್ಸ್ ನೀಡಿರುವ ವರದಿಯ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನದ ಗಳಿಕೆ 16.2 ಕೋಟಿ ರೂಪಾಯಿ. ಒಟ್ಟಾರೆಯಾಗಿ ಹೇಳುವುದಾದರೆ, ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನ 20 ಕೋಟಿ ವರೆಗೂ ಗಳಿಕೆ ಮಾಡಿರಬಹುದು ಎನ್ನಲಾಗಿದೆ. ಇದು ನಿಜವೇ ಆಗಿದ್ದರೆ, ವಿಕ್ರಾಂತ್ ರೋಣನಿಗೆ ಭರ್ಜರಿಯಾದ ಓಪನಿಂಗ್ ಸಿಕ್ಕಿರುವುದರಲ್ಲಿ ಯಾವುದೇ ಸಂಶಯ ಇಲ್ಲ.
Comments are closed.