Neer Dose Karnataka
Take a fresh look at your lifestyle.

ಮನೆಯಲ್ಲಿ ಮತ್ತೆ ಕಾಲ್ಕೆರೆದು ಜಗಳಕ್ಕೆ ಇಳಿದ ಸೋನು ಗೌಡ: ಈ ಬಾರಿ ಯಾರ ಜೊತೆ ಗೊತ್ತೇ?? ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು ಹೇಗೆ ಗೊತ್ತೇ??

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಭಾವನೆಗಳನ್ನು ನೋಡುತ್ತೇವೆ. ಪ್ರೀತಿ, ಸ್ನೇಹ, ಜಗಳ ಸಿಟ್ಟು, ಕೋಪ, ಕದನ ಇದೆಲ್ಲವನ್ನು ನೋಡುತ್ತೇವೆ. ಬಿಗ್ ಬಾಸ್ ಮನೆಯಲ್ಲಿ ಜಗಳ ಮತ್ತು ಕದನಗಳು ಕಾಮನ್. ಬೇರೆ ಬೇರೆ ರೀತಿಯ ಮೈಂಡ್ ಸೆಟ್ ಇರುವ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಹಾಕಿದರೆ, ಅವರ ನಡುವೆ ಘರ್ಷಣೆಗಳು ನಡೆದೇ ನಡೆಯುತ್ತಿದೆ. ಇದೀಗ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ರಲ್ಲಿ ಮೊದಲ ಜಗಳ ಶುರುವಾಗಿದೆ. ಈ ಜಗಳ ನಡೆದಿರುವುದು ಸೋನು ಶ್ರೀನಿವಾಸ್ ಗೌಡ ಮತ್ತು ಸ್ಪೂರ್ತಿ ಗೌಡ ನಡುವೆ ನಡೆದಿದೆ..

ಇವರಿಬ್ಬರು ಸಹಜವಾಗಿಯೇ ಮಾತನಾಡುತ್ತಿದ್ದರು. ಆದರೆ ಮಾತಿನ ನಡುವೆ ಬಂದ ಒಂದೇ ಒಂದು ಪದದಿಂದ ಜಗಳ ಶುರುವಾಗಿ, ಸ್ಫೂರ್ತಿ ಮತ್ತು ಸೋನು ಮಾತನಾಡದೆ, ಕೋಪ ಮಾಡಿಕೊಂಡಿದ್ದಾರೆ. ನಡೆದ ಘಟನೆ ಇಷ್ಟೇ, ಸ್ಪೂರ್ತಿ ಗೌಡ ಮೇಕಪ್ ಮಾಡಿಕೊಳ್ಳುತ್ತಾ ಇರುತ್ತಾರೆ, ಆಗ ಅಲ್ಲೇ ಇದ್ದ ಸೋನು ಗೌಡ ಮೇಕಪ್ ಬಗ್ಗೆ ಮಾತನಾಡುತ್ತಾರೆ, ಅದಕ್ಕೆ ಸ್ಫೂರ್ತಿ ಗೌಡ, ನನಗೆ ಮೇಕಪ್ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಆಗ ಸೋನು, ಡವ್ ರಾಣಿ, ಎಲ್ಲ ಗೊತ್ತಿದ್ದೂ, ಗೊತ್ತಿಲ್ಲದ ಹಾಗೆ ಡವ್ ಮಾಡ್ತೀಯಾ ಎನ್ನುತ್ತಾರೆ ಸೋನು. ಮೊದಲಿಗೆ ಸ್ಪೂರ್ತಿ ಇದಕ್ಕೆ ಏನನ್ನು ಹೇಳುವುದಿಲ್ಲ.

ನಂತರ ಮಾತನಾಡುವಾಗಲೇ ಸೋನು ಬಗ್ಗೆ ಕೋಪಗೊಂಡು, ಡವ್ ರಾಣಿ ಅಂತ ಹೇಳಿದ್ದು ನನಗೆ ಇಷ್ಟ ಆಗಲಿಲ್ಲ, ಮತ್ತೆ ಆ ಥರ ಹೇಳಬೇಡ ಎಂದು ಹೇಳಿ ಕೋಪಮಾಡಿಕೊಳ್ಳುತ್ತಾರೆ ಸ್ಪೂರ್ತಿ ಗೌಡ. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಾಮಕಿ ನಡೆಯುತ್ತದೆ. ಇಬ್ಬರು ಸಹ ಕೋಪಗೊಂಡು, ಮಾತಿಗೆ ಮಾತು ನಡೆದು, ಸಣ್ಣದೊಂದು ಮಾತಿಗೆ ದೊಡ್ಡ ಜಗಳವೆ ಆಗಿಹೋಗಿದೆ. ಕೊನೆಗೆ ಇಬ್ಬರು ಮುನಿಸಿಕೊಂಡು ಮಾತು ಬಿಡುವ ಹಂತಕ್ಕೆ ತಲುಪಿದ್ದಾರೆ. ಬಿಗ್ ಬಾಸ್ ಶುರುವಾಗಿ ಎರಡು ದಿನ ಎಲ್ಲವೂ ಚೆನ್ನಾಗಿತ್ತು. ಮೂರನೇ ದಿನಕ್ಕೆ ಈ ರೀತಿಯ ಜಗಳ ಶುರುವಾಗಿದ್ದು, ಮುಂದೆ ಏನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕಿದೆ.

Comments are closed.