Neer Dose Karnataka
Take a fresh look at your lifestyle.

ಸೋನು ಗೌಡ ರವರ ಮನೆಯಲ್ಲಿ ಗಂಟಲು ನೋವು ಬಂದರೆ, ಮನೆ ಮದ್ದು ಏನಂತೆ ಗೊತ್ತೇ? ಸೋನು ಕಾರಣ ಕೇಳಿ ಎದ್ದು ಬಿದ್ದು ನಕ್ಕ ಜನ.

1,376

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕೂತು ಮಾತನಾಡುವಾಗ ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತಾರೆ. ಅಡುಗೆ, ಲವ್, ಗಾಸಿಪ್ ಗಳು, ಹೊರಗಿನ ಪ್ರಪಂಚದ ವಿಚಾರಗಳು ಹೀಗೆ, ಒಂದಲ್ಲ ಎರಡಲ್ಲ ನೂರಾರು ವಿಚಾರಗಳು ಚರ್ಚೆಯಾಗುತ್ತದೆ. ಕೆಲವೊಮ್ಮೆ ಅವರೆಲ್ಲರು ಮನೆಯಲ್ಲಿ ಕೂತು ಮಾತನಾಡುವ ವಿಚಾರಗಳು ತಮಾಷೆಗೆ ಈಡಾಗುವುದೇ ಹೆಚ್ಚು. ಇದೇ ರೀತಿ ಈಗ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಹೇಳಿರುವ ಮಾತುಗಳಿಗೆ ಮನೆಯ ಇನ್ನಿತರ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ.

ಸೋನು ಗೌಡ ಇನ್ನು ಚೈಲ್ಡ್ ಎಂದು ಹಲವರು ಹೇಳುವುದನ್ನು ಕೇಳಿದ್ದೇವೆ. ಬಿಗ್ ಬಾಸ್ ಮನೆಯಲ್ಲಿ ಸಹ ಕೆಲವರು ಸೋನು ಗೌಡ ವರ್ತನೆ ಮಾತು, ಇದೆಲ್ಲದರಲ್ಲಿ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ, ಆದರೆ ಆಕೆಗೆ ಒಳ್ಳೆಯ ಮನಸ್ಸಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ಹೀಗೆ ಸೋನು ಗೌಡ ಅನೇಕ ವಿಚಾರಗಳಿಂದ ಚರ್ಚೆಯಾಗುತ್ತಾರೆ. ರಾತ್ರಿ ಲೈಟ್ಸ್ ಆಫ್ ಆದ ಬಳಿಕ ಆರ್ಯವರ್ಧನ್ ಗುರೂಜಿ, ಅರ್ಜುನ್ ರಮೇಶ್, ಉದಯ್ ಸೂರ್ಯ, ಸೋನು ಗೌಡ ಮತ್ತು ಜಯಶ್ರೀ ಆರಾಧ್ಯ ಮೊಟ್ಟೆಯ ಬಗ್ಗೆ ಮಾತನಾಡುತ್ತಾರೆ, ಆಗ ಸೋನು ಗೌಡ, ತನಗೆ ಕೋಲ್ಡ್ ಆಗಿದೆ ಮೊಟ್ಟೆ ಆಮ್ಲೆಟ್ ಬೇಕಿತ್ತು ಎಂದು ಕೇಳುತ್ತಾರೆ.

ಆಗ ಅರ್ಜುನ್ ರಮೇಶ್ ಅವರು, ಮೊಟ್ಟೆಗೂ ಕೋಲ್ಡ್ ಗು ಏನು ಸಂಬಂಧ, ಎಂದು ಕೇಳಿದಾಗ, ಸೋನು ಗೌಡ ತಮ್ಮ ಮನೆಯಲ್ಲಿ ಕೋಲ್ಡ್ ಗೆ ಮಾಡುವೆ ಮನೆಮದ್ದನ್ನು ಹೇಳಿದ್ದು, ಅದನ್ನು ಕೇಳಿದ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ, ಸೋನು ಗೌಡ ಮೊಟ್ಟೆ ಆಮ್ಲೆಟ್ ಎಂದು ಕೇಳಿದಾಗ ಅರ್ಜುನ್ ಅವರು, ಇದನ್ನ ನಾನು ದೇಶದಲ್ಲೇ ನೋಡಿಲ್ಲ ಎನ್ನುತ್ತಾರೆ, ಆಗ ಸೋನು ಗೌಡ “ನೀವು ನೋಡಿಲ್ದೆ ಇದ್ರೆ ನನಗೆ ಗೊತ್ತಿಲ್ಲ ಅರ್ಜುನ್ ಅವರೇ, ನಮ್ಮ ಮನೆಯಲ್ಲಿ ಮೊಟ್ಟೆ ಜೊತೆಗೆ ಜಾಸ್ತಿ ಖಾರದ ಪುಡಿ ಹಾಕಿ ತಿಂದ್ರೆ ಗಂಟಲು ನೋವು ಹೋಗುತ್ತೆ..ನಮ್ಮಮ್ಮ ಮಾಡಿಕೊಡ್ತಾರೆ ನಾನು ಮಾಡಿಸಿಕೊಂಡು ತಿಂತೀನಿ ಅಷ್ಟೇ.. ಒಂದು ಮೊಟ್ಟೆಗೂ ಜಗಳ ಮಾಡ್ತಾರಲ್ಲ ಗುರು..” ಎಂದಿದ್ದಾರೆ ಸೋನು ಗೌಡ.

Leave A Reply

Your email address will not be published.