Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬ ಹುಡುಗನ ಹಿಂದೆ ಬಿದ್ದ ಸೋನು ಗೌಡ: ಆ ಲಕ್ಕಿ ಹುಡುಗ ಯಾರು ಗೊತ್ತೇ?? ಪ್ರೇಮ ಪುರಾಣ ಆರಂಭ.

ಬಿಗ್ ಬಾಸ್ ಮನೆಯಲ್ಲಿ ಪ್ರೇಮಕತೆಗಳು ಎಲ್ಲರಿಗೂ ಮನರಂಜನೆ ನೀಡುವ ಮೇಜರ್ ವಿಚಾರ. ಈ ಮನೆಯಲ್ಲಿ ಪ್ರತಿ ಸೀಸನ್ ನಲ್ಲೂ ಒಂದೊಂದು ಪ್ರೇಮ ಕಥೆಗಳು ನಡೆಯುತ್ತಲೇ ಇರುತ್ತದೆ. ಅದೇ ರೀತಿ ಈಗಿನ ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ಸಹ ಲವ್ ಸ್ಟೋರಿ ಈಗಾಗಲೇ ಶುರುವಾಗಿದೆ. ಆದರೆ ಈಗ ಲವ್ ಸ್ಟೋರಿಗೆ ಒಂದು ಟ್ವಿಸ್ಟ್ ಸಿಕ್ಕಿದ್ದು, ಇದು ತ್ರಿಕೋನ ಪ್ರೇಮಕಥೆ ಆಗುವ ಲಕ್ಷಣ ಕಾಣುತ್ತಿದೆ. ನಿಜಕ್ಕೂ ಆಗುತ್ತಿರೋದೇನು? ಈ ಲವ್ ಸ್ಟೋರಿ ನಡೆಯುತ್ತಿರುವುದಾದರು ಯಾರ ನಡುವೆ? ತಿಳಿಸುತ್ತೇವೆ ನೋಡಿ..
ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರ ಪಾಲಿಗೆ ಅಟ್ರಾಕ್ಷನ್ ಆಗಿರುವುದು ರಾಕೇಶ್ ಅಡಿಗ. ರಾಕೇಶ್ ಅಡಿಗ ಅವರು ಸ್ಪೂರ್ತಿ ಗೌಡ ಅವರೊಡನೆ ಕ್ಲೋಸ್ ಆಗಿದ್ದಾರೆ.

ಸ್ಪೂರ್ತಿ ಅವರಿಗು ರಾಕೇಶ್ ಅಂದ್ರೆ ಇಷ್ಟವಾಗಿ, ನಮ್ಮಿಬ್ಬರ ಮೆಂಟಾಲಿಟಿ ಒಂದೇ ಥರ ಇದೆ, ಎಂದೆಲ್ಲಾ ಹೇಳಿದ್ದಾರೆ. ಅಷ್ಟೇ ಅಲ್ಲದೆ, ತನಗೆ ರಾಕೇಶ್ ಅಂದ್ರೆ ಇಷ್ಟ ಎಂದು ಹೇಳಿ, ತಮ್ಮಿಬ್ಬರ ಜಾತಕ ಮ್ಯಾಚ್ ಆಗುತ್ತಾ ನೋಡಿ ಎಂದು ಗುರೂಜಿ ಬಳಿ ಸಹ ಕೇಳಿದ್ದರು ಸ್ಪೂರ್ತಿ. ರಾಕೇಶ್ ಸಹ ಸ್ಪೂರ್ತಿ ತಮಗೆ ಇಷ್ಟ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಈ ಲವ್ ಸ್ಟೋರಿಗೆ ಈಗ ಮತ್ತೊಬ್ಬ ಸ್ಪರ್ಧಿಯ ಎಂಟ್ರಿ ಆಗಿದೆ. ಇದೀಗ ಸೋನು ಗೌಡ ಸಹ ರಾಕೇಶ್ ಅವರ ಹಿಂದೆ ಬಿದ್ದಿದ್ದಾರೆ. ತನಗೆ ರಾಕೇಶ್ ಇಷ್ಟ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ ಸೋನು. ಈ ವಿಚಾರವನ್ನ ರೂಪೇಶ್ ಅವರ ಬಳಿ ಹೇಳಿಕೊಂಡಿದ್ದಾರೆ, ಸ್ಪೂರ್ತಿ ಯಾವಾಗಲೂ ರಾಕೇಶ್ ಗೆ ಅಂಟಿಕೊಂಡೇ ಕೂತಿರುತ್ತಾಳೆ, ನಾನು ಹಾಗೆಲ್ಲ ಅವನ ಜೊತೆ ಯಾಕೆ ಕೂರುತ್ತೀಯಾ ಅಂದ್ರೆ ಅವನು ನನ್ನ ಹುಡುಗ ಅಂತ ಹೇಳ್ತಾರೆ..ಎಂದಿದ್ದಾರೆ ಸೋನು.

ಅದಕ್ಕೆ ರೂಪೇಶ್, ನೀನು ಸೀರಿಯಸ್ ಆಗಿದ್ದೀಯಾ ಎಂದು ಕೇಳಿದ್ದು, ಅದಕ್ಕೆ ಸೋನು ಹೌದು ನಾನು ಸೀರಿಯಸ್ ಆಗಿದ್ದೇನೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಜಯಶ್ರೀ ಆರಾಧ್ಯ ಅವರ ಜೊತೆ ಹಾಗೂ ಸ್ಫೂರ್ತಿ ಅವರ ಜೊತೆಗೂ ಈ ಬಗ್ಗೆ ಮಾತನಾಡಿದ್ದಾರೆ. ರಾಕೇಶ್ ಸೀರಿಯಸ್ ಆಗಿಲ್ಲ ಎಲ್ಲರ ಜೊತೆ ಫ್ಲರ್ಟ್ ಮಾಡ್ತೀನಿ ಅಂತಾರೆ ಎಂದಿದ್ದಾರೆ ಸೋನು. ಸ್ವತಃ ರಾಕೇಶ್ ಅವರ ಜೊತೆಯಲ್ಲೂ ಈ ವಿಚಾರವನ್ನು ಹೇಳಿಕೊಂಡಿದ್ದು, ನಿನಗೆ ನಿಜವಾಗಲು ನನ್ನ ಬಗ್ಗೆ ಫೀಲಿಂಗ್ಸ್ ಇದೆಯಾ ಅಥವಾ ತಮಾಷೆ ಮಾಡ್ತಿದ್ದೀಯಾ ಎಂದು ರಾಕೇಶ್ ಕೇಳಿದ್ದು, ನಾನು ಸೀರಿಯಸ್ ಆಗಿದ್ದೇನೆ ಎನ್ನುತ್ತಾರೆ ಸೋನು. ಆಗ ರಾಕೇಶ್ ಇನ್ನುಮೇಲೆ ನಾನು ನಿನ್ನ ಜೊತೆ ತಮಾಷೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಂತರ ಸೋನು ಗೆ ಹೊಟ್ಟೆ ಉರಿಸುವ ಹಾಗೆ, ಜಾಸ್ತಿ ಸ್ಪೂರ್ತಿ ಜೊತೆ ಇರುವುದು, ಅಕ್ಷತಾ ಹೆಗಲ ಮೇಲೆ ಕೈಹಾಕಿ ಓಡಾಡುವುದು ಮಾಡುತ್ತಿದ್ದಾರೆ ರಾಕೇಶ್. ಈ ಸ್ಟೋರಿ ಹೇಗೆ ಮುಂದುವರೆಯುತ್ತದೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕಿದೆ.

Comments are closed.