Neer Dose Karnataka
Take a fresh look at your lifestyle.

ಇನ್ನು ಈ ತಿಂಗಳಿನಲ್ಲಿ ನಿಮ್ಮನ್ನು ತಡೆಯಲು ಯಾರು ಕೈಯಲ್ಲೂ ಸಾಧ್ಯವಿಲ್ಲ, ಅಪಾರ ಧನಲಾಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

80

ಪ್ರತಿ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಬದಲಾವಣೆ ಮಾಡಿದಾಗ ಅದರ ಪರಿಣಾಮ ಕೆಲವು ರಾಶಿಗಳ ಮೇಲೆ ಬೀರುತ್ತದೆ. ಒಂದೇ ರಾಶಿಯಲ್ಲಿ ಬೇರೆ ಬೇರೆ ಗ್ರಹಗಳ ಸಂಯೋಗ ಆದಾಗಲೂ ಅದರ ಪರಿಣಾಮ ರಾಶಿಗಳ ಮೇಲೆ ಬೀರುತ್ತದೆ. ಇದೀಗ ಶುಕ್ರನು ಆಗಸ್ಟ್ 7ರಂದು ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದ್ದು, ಆಗಸ್ಟ್ 31ರ ವರೆಗೂ ಕರ್ಕಾಟಕ ರಾಶಿಯಲ್ಲೇ ಇರಲಿದ್ದಾನೆ. ಇದರಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯದಾಗಲಿದ್ದು, ಅದರಲ್ಲೂ ಮೂರು ರಾಶಿಗಳಿಗೆ ಉತ್ತಮವಾದ ಫಲ ಸಿಗಲಿದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಕನ್ಯಾ ರಾಶಿಯವರಿಗೆ ಒಳ್ಳೆಯ ದಿನಗಳು ಶುರುವಾಗಲಿದೆ. ಈ ರಾಶಿಯ 11ನೇ ಮನೆಯಲ್ಲಿ ಶುಕ್ರ ಇದ್ದು, ಇವರ ಆದಾಯದಲ್ಲಿ ಅಭಿವೃದ್ಧಿ ಉಂಟಾಗಲಿದೆ. ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗಬಹುದು. ಮಾಧ್ಯಮ, ಸಿನಿಮಾ ಕ್ಷೇತ್ರ, ಫ್ಯಾಶನ್ ಡಿಸೈನಿಂಗ್ ಮತ್ತು ಬ್ಯಾಂಕಿಂಗ್ ಕೆಲಸಗಳಲ್ಲಿ ಇರುವವರು ಹೆಚ್ಚಿನ ವಿಶೇಷವಾದ ಧನಲಾಭ ಸಿಗಲಿದೆ. ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಸಹ ಈ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಪಚ್ಛೆ ಅಥವಾ ಓಪಲ್ ರತ್ನ ಧರಿಸುವುದರಿಂದ ನಿಮಗೆ ಒಳ್ಳೆಯದಾಗಲಿದೆ.

ತುಲಾ ರಾಶಿ :- ಈ ರಾಶಿಯ 10ನೇ ಮನೆಗೆ ಶುಕ್ರನ ಪ್ರವೇಶ ಆಗಲಿದೆ. ಇದು ವ್ಯಾಪಾರ ಮತ್ತು ಉದ್ಯೋಗದ ಮನೆ ಆಗಿದ್ದು, ಈ ಸಮಯದಲ್ಲಿ ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಪ್ರೊಮೋಷನ್ ಸಿಗಬಹುದು. ಹೊಸ ವ್ಯಾಪಾರ ಸಹ ಸಿಗಬಹುದು. ಈ ಸಮಯದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ಪಚ್ಚೆ ಧರಿಸುವುದರಿಂದ ಒಳ್ಳೆಯದಾಗುತ್ತದೆ. ಈ ರಾಶಿಯ ಅಧಿಪತಿ ಶುಕ್ರ ಆಗಿರುವುದರಿಂದ ವಿಶೇಷ ಲಾಭ ಸಿಗಲಿದೆ.

ಸಿಂಹ ರಾಶಿ :- ಈ ರಾಶಿಯ ಎರಡನೇ ಮನೆಯಲ್ಲಿ ಶುಕ್ರ ಬಂದಿದ್ದಾನೆ. ಈ ಮನೆಯನ್ನು ವಾಣಿ ಮತ್ತು ಧನದ ಸ್ಥಾನದಲ್ಲಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚು ಮೂಲಗಳು ಸಿಗಲಿದೆ, ಇದರಿಂದ ಹೆಚ್ಚಿನ ಲಾಭ ಸಿಗಬಹುದು. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಸಿಗುತ್ತದೆ. ಲಾಯರ್ ಮಾರ್ಕೆಟಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಲಾಭ ಸಿಗಲಿದೆ

Leave A Reply

Your email address will not be published.