Neer Dose Karnataka
Take a fresh look at your lifestyle.

ಎರಡೆರಡು ಮದುವೆಯಾಗಿರುವ ನಟ ನಾಗಾರ್ಜುನ ರವರು, ಆ ಕಾಲದಲ್ಲಿಯೇ ಆ ಸ್ಟಾರ್ ನಟಿಗಾಗಿ ಸೀಕ್ರೆಟ್ ಆಗಿ ಮುಂಬೈ ಹೋಗುತ್ತಿದ್ದರಂತೆ. ಯಾರು ಗೊತ್ತೇ ಆ ನಟಿ??

ನಟ ನಾಗಾರ್ಜುನ ಅವರಿಗೆ ಆಗ ಹುಡುಗಿಯರ ಸೂಪರ್ ಫಾಲೋಯಿಂಗ್ ಇತ್ತು. ಮಾಸ್ ಇಮೇಜ್ ದೊಡ್ಡದಿರುವಾಗ ಹುಡುಗಿಯರೇ ಅವರ ದೊಡ್ಡ ಅಭಿಮಾನಿಗಳು. ಆ ಸಮಯದಲ್ಲಿ ಅವರನ್ನು ಹುಡುಗಿಯರ ಕನಸಿನ ರಾಜಕುಮಾರ ಎಂದು ಕರೆಯಲಾಗುತ್ತಿತ್ತು. ನಾಗಾರ್ಜುನ ಅವರು ಬಹಳ ಸುಂದರವಾಗಿದ್ದರು ಅದಕ್ಕಾಗಿಯೇ ಅವರನ್ನು ಮನ್ಮಥ ಎಂದು ಕರೆಯಲಾಗುತ್ತಿತ್ತು. ಈಗಲೂ ಕೂಡ ನಾಗಾರ್ಜುನ ಸ್ಟಾರ್ ಹೀರೋ ಆಗಿ ಇನ್ನು ಸಿನಿಮಾ ಮಾಡುತ್ತಿದ್ದಾರೆ. ಆದರೆ ಆ ಕಾಲದಲ್ಲಿ ನಟಿ ಟಬು ಜೊತೆ ತುಂಬಾ ಆತ್ಮೀಯ ಸಂಬಂಧ ಹೊಂದಿದ್ದರು. ನಿನ್ನೇ ಪೆಲ್ಲದಾಟ ಚಿತ್ರದಲ್ಲಿ ಟಬು ನಟಿಸಿದಾಗಿನಿಂದಲು ಇವರಿಬ್ಬರು ತುಂಬಾ ಆತ್ಮೀಯರಾಗಿದ್ದಾರೆ ಎಂಬ ವರದಿಗಳು ಬಂದಿವೆ.

ಇವರ ಜೊತೆಗೆ ಮುಂಬೈನ ಮತ್ತೊಬ್ಬ ನಟಿ ಸಹ ನಾಗಾರ್ಜುನ ಅವರೊಡನೆ ಬಹಳ ಆತ್ಮೀಯವಾಗಿದ್ದರು ಎನ್ನಲಾಗಿದೆ, ಆ ನಟಿ ಮತ್ಯಾರು ಅಲ್ಲ, ಸುಶ್ಮಿತಾ ಸೇನ್ ಅವರು. ನಾಗಾರ್ಜುನ ಅವರ ಜೊತೆ ರಾಕ್ಷಸುಡು ಚಿತ್ರದಲ್ಲಿ ಈ ಗ್ಲಾಮರಸ್ ಬ್ಯೂಟಿ ನಟಿಸಿದ್ದರು. ಅಂದಿನಿಂದ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು, ಆದರೆ ಆಕೆ ನಾಗಾರ್ಜುನ ಅವರನ್ನು ಖಾಸಗಿಯಾಗಿ ಹಲವಾರು ಬಾರಿ ಭೇಟಿಯಾಗುತ್ತಿದ್ದರು. ಕೆಲವೊಮ್ಮೆ ನಾಗಾರ್ಜುನ ಅವರು ಕೂಡ ಸುಶ್ಮಿತಾ ಅವರನ್ನು ಭೇಟಿಯಾಗಲು ಗುಟ್ಟಾಗಿ ಮುಂಬೈಗೆ ಹೋಗುತ್ತಿದ್ದರು.

ಅಷ್ಟರಮಟ್ಟಿಗೆ ಆ ಕಾಲದಲ್ಲಿ ಇಬ್ಬರು ಹೊರಗಡೆ ಸುತ್ತಾಡುತ್ತಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಆಗಿಯು ಗೆದ್ದರು. ಆಕೆಯ ಕ್ರೇಜ್‌ ಇಂದಾಗಿ ದೊಡ್ಡ ದೊಡ್ಡ ವಿಐಪಿಗಳಿಗೂ ಅಪಾಯಿಂಟ್ಮೆಂಟ್ ಸಿಗುತ್ತಿರಲಿಲ್ಲವಂತೆ. ಆದರೆ ನಾಗಾರ್ಜುನ ಅವರಿಗೆ ತಮಗೆ ಮನಸ್ಸಾದಾಗಲೆಲ್ಲ ಭೇಟಿಯಾಗುತ್ತಿದ್ದರಂತೆ. ಇಬ್ಬರೂ ಒಟ್ಟಿಗೆ ಪಬ್, ಪಾರ್ಟಿಗಳಿಗೆ ಹೋಗುತ್ತಿದ್ದರು ಎಂಬ ಮಾತು ಕೇಳಿಬರುತ್ತಿದ್ದವು. ನಾಗಾರ್ಜುನ ಯಾವುದೇ ನಟಿಯನ್ನಾದರು ಸಹ ಬೇಕಾದರೆ ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಆಗಿದೆ.

Comments are closed.