Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಲೈಗರ್ ಚಿತ್ರದ ಮೊದಲ ರಿವ್ಯೂ ಬಿಡುಗಡೆ: ಚಿತ್ರ ನೋಡಿದ ವಿಮರ್ಶಕರು ಏನಂದ್ರು ಗೊತ್ತೇ?? ಇಟ್ಟ ನಿರೀಕ್ಷೆ ಮೀಟ್ ಆಯ್ತಾ??

ವಿಜಯ್ ದೇವರಕೊಂಡ ನಟಿಸಿ ಮತ್ತು ಪುರಿ ಜಗನ್ನಾಧ್ ನಿರ್ದೇಶನ ಮಾಡಿರುವ ಲೈಗರ್ ಚಿತ್ರ ಇದೇ ತಿಂಗಳ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ತೆಲುಗು ರಾಜ್ಯಗಳು ಮಾತ್ರವಲ್ಲದೆ ದೇಶಾದ್ಯಂತ ಅಪಾರ ಸಂಖ್ಯೆಯ ಸಿನಿಪ್ರೇಮಿಗಳು ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಆಗಸ್ಟ್‌ ನಲ್ಲಿ ಟಾಲಿವುಡ್‌ನಲ್ಲಿ ಬಿಂಬಿಸಾರ, ಕಾರ್ತಿಕೇಯ 2 ಮುಂತಾದ ಸಿನಿಮಾಗಳು ಉತ್ತಮ ಹಿಟ್‌ ಆಗಿದೆ.. ಲೈಗರ್ ಅದೇ ಹಾದಿಯಲ್ಲಿ ಮುಂದುವರಿಯಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಬಾಲಿವುಡ್ ನ ಕರಣ್ ಜೋಹರ್ ಲಿಗರ್ ಗೆ ಬ್ಯಾಕಪ್ ಆಗಿದ್ದು, ಅವರೇ ನಿರ್ಮಾಪಕರು ಆಗಿರುವ ಈ ಸಿನಿಮಾ ಬಾಲಿವುಡ್ ನಲ್ಲಿ ಭಾರೀ ಕ್ರೇಜ್ ಹುಟ್ಟು ಹಾಕಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಎಲ್ಲೆಡೆ ಹೈ ಪಿಚ್ ಬುಕ್ಕಿಂಗ್ ದಾಖಲಾಗುತ್ತಿದೆ.

ಉತ್ತರ ಭಾರತದಲ್ಲಿ ಸಹ ಮೊದಲ ವಾರಾಂತ್ಯದ ಮೂರು ದಿನಗಳ ಕಾಲ ಮುಂಗಡ ಬುಕಿಂಗ್ ನಡೆಯುತ್ತಿದೆ. ಈಗಾಗಲೇ ಸೆನ್ಸಾರ್ ಆಗಿರುವ ಲೈಗರ್ ಚಿತ್ರದ ಶಾರ್ಟ್ ರನ್ ಟೈಮ್ ಫಿಕ್ಸ್ ಆಗಿದೆ. ಒಟ್ಟು 2 ಗಂಟೆ 20 ನಿಮಿಷಗಳ ಅವಧಿಯ ಸಿನಿಮಾ ಇದಾಗಿದೆ. ಸೆನ್ಸಾರ್‌ ಬೋರ್ಡ್ ಸಿನಿಮಾದ 7 ದೃಶ್ಯಗಳನ್ನು ಕಡಿತಗೊಳಿಸಿದ್ದಾರೆ. ಮೊದಲಾರ್ಧ 75 ನಿಮಿಷಗಳು ಮತ್ತು ದ್ವಿತೀಯಾರ್ಧ 65 ನಿಮಿಷಗಳು ಇರಲಿದೆ. ಚಿತ್ರದಲ್ಲಿ 7 ಫೈಟ್‌ಗಳು ಮತ್ತು 6 ಹಾಡುಗಳಿವೆ. ಮುಂಬೈನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‌ ಗಳಲ್ಲಿನ ದೃಶ್ಯಗಳು ಈ ಸಿನಿಮಾದ ಹೈಲೈಟ್ ಆಗಲಿವೆ ಎಂದು ಹೇಳಲಾಗುತ್ತಿದೆ.

ಅವುಗಳ ಜೊತೆಗೆ ಅದ್ಧೂರಿ ಸೆಟ್‌ನಲ್ಲಿ ಮೂಡಿಬರುವ ಹಾಡುಗಳು ಕೂಡ ಸಿನಿಮಾದ ಹೈಲೈಟ್ ಆಗಲಿವೆ. ಇಡೀ ಚಿತ್ರವು ನಾಯಕನ ಪಾತ್ರದ ಸುತ್ತ ಸುತ್ತುತ್ತದೆ ಎಂದು ಹೇಳಲಾಗುತ್ತದೆ. ಮೊದಲಾರ್ಧದಲ್ಲಿ ಬಾಕ್ಸಿಂಗ್, ನಾಯಕಿಯೊಂದಿಗಿನ ಪ್ರೀತಿ, 2 ಹಾಡುಗಳು ಹೈಲೈಟ್ ಆಗಿವೆ. ದ್ವಿತಿಯಾರ್ಧದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ತಾಯಿಯ ಸೆಂಟಿಮೆಂಟ್ ಮತ್ತು ಫ್ಯಾಮಿಲಿ ಎಮೋಷನ್ ಕೂಡ ಹೈಲೈಟ್ ಆಗಲಿದೆ ಎನ್ನಲಾಗಿದೆ. ಈ ಸಿನಿಮಾ ಮೂಲಕ ಅನನ್ಯ ಪಾಂಡೆ ಸಿನಿಪ್ರಿಯರಿಗೆ ಬಹಳ ಇಷ್ಟವಾಗುತ್ತಾರೆ ಎನ್ನಲಾಗಿದೆ. ಸಿನಿಮಾ ಓಕೆ, ಪರವಾಗಿಲ್ಲ ಎಂಬ ಮಾತು ಕೇಳಿಬಂದಿದ್ದು, ಲೈಗರ್ ಅನ್ನು ರಾಕ್ಷಸ ಸಿನಿಮಾದಂತೆ ಸೈಲೆಂಟ್ ಆಗಿ ಪ್ರೇಕ್ಷಕರಿಗೆ ತೋರಿಸಿದರೆ, ದಾಖಲೆಗಳನ್ನು ಮುರಿಯುವುದು ಖಚಿತ. ಲೈಗರ್ ಎಷ್ಟು ದಾಖಲೆಗಳನ್ನು ಮುರಿಯಲಿದ್ದಾರೆ ಎಂಬುದು ಇದೇ ತಿಂಗಳ 25 ರಂದು ತಿಳಿಯಲಿದೆ.

Comments are closed.