Neer Dose Karnataka
Take a fresh look at your lifestyle.

ಬಾಲಿವುಡ್ ಚಿತ್ರಗಳಿಗೆ ಮಣ್ಣು ಮುಕ್ಕಿಸಿದ ಯಶ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಬಾಲಿವುಡ್ ನಟ ಶಾಹಿದ್: ಕನ್ನಡಿಗನ ಪವರ್ ಕಂಡು ಶಾಕ್ ಆಗಿ ಹೇಳಿದ್ದೇನು ಗೊತ್ತೇ??

39

ಬಾಲಿವುಡ್ ನಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಣೆ ಮಾಡುವ ಕಾಫಿ ವಿತ್ ಕರಣ್ ಶೋ ಬಹಳ ಫೇಮಸ್. ಈ ಶೋಗೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಕರೆಸಿ ಶೋ ಹೋಸ್ಟ್ ಮಾಡುತ್ತಾರೆ ಕರಣ್ ಜೋಹರ್. ಸೆಲೆಬ್ರಿಟಿಗಳಿಗೆ ಅನೇಕ ಪ್ರಶ್ನೆಗಳನ್ನು ಕೇಳಿ, ಅವರ ಲವ್ ಲೈಫ್, ಸಿನಿ ಕೆರಿಯರ್ ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಇದೀಗ ಈ ಶೋಗೆ ಬಾಲಿವುಡ್ ನ ಖ್ಯಾತ ನಟ ಶಾಹೀದ್ ಕಪೂರ್ ಮತ್ತು ನಟಿ ಕಿಯಾರ ಅಡ್ವಾಣಿ ಬಂದಿದ್ದರು. ಶೋನಲ್ಲಿ ಇವರಿಬ್ಬರು ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ..

ಕರಣ್ ಜೋಹರ್ ಅವರು ಶಾಹಿದ್ ಕಪೂರ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಬಾಲಿವುಡ್ ನಲ್ಲಿ ನಂಬರ್1 ನಟಿ ಯಾರು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಶಾಹಿದ್ ಕಪೂರ್ ಅವರು, ಕಿಯಾರ ಅಡ್ವಾಣಿ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇನ್ನು ನಂಬರ್1 ನಟ ಯಾರು ಎಂದು ಕೇಳಿದ್ದಕ್ಕೆ, ರಾಕಿ ಭಾಯ್ ಯಶ್ ಈಗ ಚಿತ್ರರಂಗದಲ್ಲಿ ನಂಬರ್1 ನಟ ಎಂದು ಹೇಳಿದ್ದಾರೆ ಶಾಹಿದ್ ಕಪೂರ್. ಹಿಂದಿ ಕಾರ್ಯಕ್ರಮ ಒಂದರಲ್ಲಿ ಯಶ್ ಅವರ ಹೆಸರು ನಂಬರ್ 1 ಸ್ಥಾನದಲ್ಲಿ ಕೇಳಿ ಬಂದಿರುವುದು ಬಹಳ ಸಂತೋಷದ ವಿಷಯ ಆಗಿದೆ. ಕೆಜಿಎಫ್2 ಸಿನಿಮಾ ನಂತರ ಯಶ್ ಅವರ ರೇಂಜ್ ಸಂಪೂರ್ಣವಾಗಿದೆ.

ನಮ್ಮ ಕನ್ನಡದ ನಟ ಭಾರತದ ನಂಬರ್1 ಸ್ಟಾರ್ ಎಂದು ಹೆಸತು ಪಡೆಯುತ್ತಾರೆ ಎಂದರೆ ಅದು ಬಹಳ ಸಂತೋಷ ಮತ್ತು ಹೆಮ್ಮೆ ಪಡುವ ವಿಷಯ ಎಂದರೆ ತಪ್ಪಾಗುವುದಿಲ್ಲ. ಕೆಜಿಎಫ್2 ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿದೆ, ರಾಷ್ಟ್ರಮಟ್ಟದಲ್ಲಿ ಹೇಗೆ ಎಲ್ಲರನ್ನು ತಲುಪಿದೆ ಎಂದು ಇದರಿಂದ ಗೊತ್ತಾಗುತ್ತದೆ. ಇಷ್ಟೇ ಅಲ್ಲದೆ, ಇಡೀ ಭಾರತ ಚಿತ್ರರಂಗದ ಟಾಪ್ ನಟರ ಪಟ್ಟಿಯಲ್ಲಿ ಸಹ ಯಶ್ ಅವರ ಹೆಸರು ಕಂಡುಬಂದಿತ್ತು. ಯಶ್ ಅವರು 5ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ನಂಬರ್ 1 ಸ್ಟಾರ್ ಎನ್ನಿಸಿಕೊಂಡಿದ್ದಾರೆ ರಾಕಿ ಭಾಯ್ ಯಶ್.

Leave A Reply

Your email address will not be published.