Neer Dose Karnataka
Take a fresh look at your lifestyle.

ಹರೀಶ್ ರಾಯ್ ರವರ ವಿಷಯ ತಿಳಿದ ತಕ್ಷಣ ಬಾಸ್ ನೇರವಾಗಿ ಕರೆ ಮಾಡಿ ಹೇಳಿದ್ದು ಏನಂತೆ ಗೊತ್ತೇ?? ಯಾರು ಆ ಬಾಸ್??

1,115

ಕನ್ನಡದ ಖ್ಯಾತ ನಟ ಹರೀಶ್ ರಾಯ್ ಅವರಿಗೆ ಅನಾರೋಗ್ಯ ಉಂಟಾಗಿರುವ ವಿಚಾರ ಈಗ ಎಲ್ಲರಿಗೂ ಗೊತ್ತಾಗಿದೆ. ಇವರು ನೀಡಿದ ಸಂದರ್ಶನ ಒಂದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿ, ಜನರು ತಮಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡರು. ಹರೀಶ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿದ್ದು, 4ನೇ ಹಂತದಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲು ಹರೀಶ್ ರಾಯ್ ಅವರ ಕುಟುಂಬ ಬಹಳ ಕಷ್ಟಪಡುತ್ತಿದ್ದಾರೆ. ಇದೀಗ ಹರೀಶ್ ಅವರಿಗೆ ಚಂದನವನದ ಖ್ಯಾತ ಸ್ಟಾರ್ ನಟರೊಬ್ಬರು ಸಹಾಯ ಮಾಡುತ್ತಿದ್ದಾರೆ.

ಹರೀಶ್ ಅವರ ಆರೋಗ್ಯದ ವಿಚಾರ ಹೊರಬಂದ ದಿನ, ರಾತ್ರಿ 12ಗಂಟೆಗೆ ಕರೆಮಾಡಿ, ಸಾರ್ ನೀವು ಯಾಕೆ ನನಗೆ ಈ ವಿಚಾರ ಹೇಳಿಲ್ಲ, ನಾವೆಲ್ಲ ನಿಮಗೆ ಇದ್ದೀವಿ, ನಿಮ್ಮನ್ನ ನಾನು ಬಿಟ್ಟುಕೊಡೋದಿಲ್ಲ, ನಿಮ್ಮ ಚಿಕಿತ್ಸೆಗೆ ಕೋಟಿ ಖರ್ಚಾದ್ರು ಸರಿ ನಾನು ನೋಡಿಕೊಳ್ತೀನಿ, ಅದರ ಬಗ್ಗೆ ನೀವು ಹೆದರಬೇಡಿ. ನನ್ನ ಪರ್ಸನಲ್ ನಂಬರ್ ನಿಮಗೆ ಕೊಟ್ಟಿದ್ದೆ ಅಲ್ವಾ, ನೀವು ಯಾಕೆ ನನಗೆ ತಿಳಿಸಿಲ್ಲ ಎಂದು ಹರೀಶ್ ಅವರನ್ನು ವಿಚಾರಿಸಿದ್ದಾರೆ. ಹರೀಶ್ ಅವರೆಂದರೆ ತಮ್ಮ ಮನಸ್ಸಿಗೆ ಬಹಳ ಹತ್ತಿರ ಎಂದು ಸಹ ಹೇಳಿದ್ದಾರೆ. ಈ ವಿಚಾರವನ್ನು ಹರೀಶ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದು, ಆ ಸ್ಟಾರ್ ನಟ ಯಾರು ಎಂದು ರಿವೀಲ್ ಮಾಡಿಲ್ಲ.

ಅವರು ಮೊನ್ನೆ ಕೂಡ ಕಾಲ್ ಮಾಡಿ ಮಾತಾಡಿದ್ರು, ವಿಚಾರಿಸಿಕೊಂಡ್ರು, ನನ್ನ ಪತ್ನಿ ಜೊತೆ ಕೂಡ ಮಾತನಾಡಿ, ನಾನ್ ಇದ್ದೀನಿ ಅಮ್ಮ ನೀವು ಭಯ ಪಡಬೇಡಿ ಅಂತ ಭರವಸೆ ಕೊಟ್ಟರು. ಅವರಿಗೆ ಅವರ ಬಗ್ಗೆ ಹೇಳೋದು ಇಷ್ಟ ಇಲ್ಲ, ಅವರಿಗೆ ಹೆಸರಿದೆ, ಇನ್ನೊಬ್ಬರನ್ನ ಚಿಕ್ಕವರನ್ನಾಗಿ ಮಾಡಿ, ತಾವು ದೊಡ್ಡವರಾಗುವುದು ಅವರಿಗೆ ಇಷ್ಟ ಇಲ್ಲ..ಎಂದು ಹೇಳಿದ್ದಾರೆ ನಟ ಹರೀಶ್ ರಾಯ್. ಅಷ್ಟಕ್ಕೂ ಆ ಸ್ಟಾರ್ ನಟ ಯಾರಿರಬಹುದು ಎನ್ನುವ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ. ಕೆಲವರು ಡಿಬಾಸ್ ದರ್ಶನ್ ಅವರು ಎಂದು ಹೇಳಿದರೆ, ಇನ್ನು ಕೆಲವರು ಯಶ್ ಅವರು ಸಹಾಯ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಿಜಕ್ಕೂ ಆ ಸ್ಟಾರ್ ನಟ ಯಾರು ಎಂದು ಇನ್ನು ರಿವೀಲ್ ಆಗಿಲ್ಲ.

Leave A Reply

Your email address will not be published.