Neer Dose Karnataka
Take a fresh look at your lifestyle.

ಬಿಗ್ ಷಾಕಿಂಗ್: ಮೂರನೇ ಕ್ರಮಣಕ್ಕೆ ಕೊಹ್ಲಿ ಬೇಡ ಎಂದ ಗಂಭೀರ್; ವಿರಾಟ್ ಸ್ಥಾನವನ್ನು ಯಾರಿಗೆ ಕೊಡಬೇಕಂತೆ ಗೊತ್ತೇ?? ಆಯ್ಕೆಯಾದವನು ಯಾರು ಗೊತ್ತೇ??

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಐಪಿಎಲ್ ನಲ್ಲಿ ಲಕ್ನೌ ಸೂಪರ್ ಜೈನ್ಟ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರು ಇದೀಗ ಭಾರತ ತಂಡದ ಬ್ಯಾಟಿಂಗ್ ಕ್ರಮಗಳು ಹಾಗೂ ಪ್ಲೇಯರ್ ಗಳ ಬಗ್ಗೆ ಮಾತನಾಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೋಹ್ಲಿ ಅವರು ಬ್ಯಾಟಿಂಗ್ ಮಾಡುವುದು ಬೇಡ, ಅವರ ಬದಲಾಗಿ ಬೇರೆ ಆಟಗಾರನನ್ನು ಸೂಚಿಸಿದ್ದಾರೆ ಗೌತಮ್ ಗಂಭೀರ್. ಇವರು ಹೇಳಿರುವ ಆ ಆಟಗಾರ ಯಾರು? ಗೌತಮ್ ಗಂಭೀರ್ ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಗೌತಮ್ ಗಂಭೀರ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೋಹ್ಲಿ ಅವರನ್ನು ಬಿಟ್ಟು ಸೂರ್ಯಕುಮಾರ್ ಯಾದವ್ ಅವರನ್ನು ಕಳಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಕೇವಲ 26 ಬಾಲ್ ಗಳಲ್ಲಿ ಸೂರ್ಯಕುಮಾರ್ 68 ರನ್ ಗಳಿಸಿದರು, ಇದರಲ್ಲಿ 6 ಫೋರ್ ಮತ್ತು 6 ಸಿಕ್ಸರ್ ಗಳಿದ್ದವು. ಇದೀಗ ಗೌತಮ್ ಗಂಭೀರ್ ಅವರು ಇದರ ಬಗ್ಗೆ ಮಾತನಾಡಿದ್ದಾರೆ, “ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಬೇಕು ಎನ್ನುವುದಕ್ಕೆ ನನ್ನ ಬಳಿ ಕಾರಣ ಇದೆ, ಬೇರೆ ಆಟಗಾರರು ಫಾರ್ಮ್ ಗೆ ಬರಬೇಕು ಎಂದು ಸೂರ್ಯಕುಮಾರ್ ಅವರನ್ನು ಆಡಿಸದೆ ಇರುವುದು ತಪ್ಪು. ಒಂದು ವರ್ಷದಿಂದ ಅವರು ಭಾರತ ತಂಡದಲ್ಲಿ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಉತ್ತಮಾಗಿ ಆಡಿದ್ದಾರೆ. ಅವರ ವಯಸ್ಸು 30 ದಾಟಿದೆ, 21 ಅಥವಾ 22 ಅಲ್ಲ..

ಸೂರ್ಯಕುಮಾರ್ ಯಾದವ್ ಅವರ ಬಳಿ ಹೆಚ್ಚು ಸಮಯ ಇಲ್ಲ, ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಕೊಡಬೇಕು. ನಂ.3 ರಲ್ಲಿ ಅವರು ಬ್ಯಾಟಿಂಗ್ ಮಾಡಬೇಕು ಎಂದು ಗಣನೆಗೆ ತೆಗೆದುಕೊಳ್ಳಬೇಕು. ವಿರಾಟ್ ಕೋಹ್ಲಿ ಅವರಿಗೆ ಅನುಭವ ಇದೆ. ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಇದನ್ನು ಪರಿಗಣಿಸಿ ಈಗಿನಿಂದ ಟಿ20 ವಿಶ್ವಕಪ್ ಪಂದ್ಯಗಳವರೆಗೂ ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕದಲ್ಲಿ ಆಡಿಸುವುದು ಒಳ್ಳೆಯದು..” ಎಂದು ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ. ಗೌತಮ್ ಅವರ ಸಲಹೆಯನ್ನು ಬಿಸಿಸಿಐ ತೆಗೆದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ

Comments are closed.