Neer Dose Karnataka
Take a fresh look at your lifestyle.

ವಿಶ್ವಕಪ್ ಗು ಮುನ್ನವೇ ಭಾರತದಕ್ಕೆ ಕಾಡುತ್ತಿದೆ ದೊಡ್ಡ ಆತಂಕ; ದಿನೇಶ್ ಹಾಗೂ ರಿಷಬ್ ಪಂತ್ ವಿಚಾರದಲ್ಲಿ ಏನಾಗುತ್ತಿದೆ ಗೊತ್ತೆ??

ವಿಶ್ವಕಪ್ ಪಂದ್ಯಗಳು ಶುರು ಆಗುವುದಕ್ಕೆ ಇನ್ನು ಒಂದು ತಿಂಗಳು ಸಮಯ ಇದೆ. ಈಗಾಗಲೇ ಬಿಸಿಸಿಐ ಭಾರತ ತಂಡಕ್ಕೆ ವಿಶ್ವಕಪ್ ನಲ್ಲಿ ಆಡುವ 15 ಸದಸ್ಯರು ಹಾಗೂ 4 ಹೆಚ್ಚುವರಿ ಸದಸ್ಯರನ್ನು ಆಯ್ಕೆ ಮಾಡಿದೆ. ಈ ಬಾರಿ ಭಾರತ ತಂಡದಲ್ಲಿ ಕೆಲವು ಗೊಂದಲಗಳು ಹಾಗೂ ಸಮಸ್ಯೆಗಳು ಇದೆ. ಈ ಸಮಸ್ಯೆಗಳಿಗೆ ಭಾರತ ತಂಡ ಬಹಳ ಬೇಗ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಮತ್ತೊಮ್ಮೆ ಭಾರತ ತಂಡ ತೊಂದರೆಗೆ ಸಿಲುಕಿಕೊಳ್ಳುವುದು ಖಂಡಿತ ಎಂದು ಭಾಸವಾಗುತ್ತಿದೆ.

ಇದು ಬ್ಯಾಟಿಂಗ್ ಆರ್ಡರ್ ನಲ್ಲಿ ಇರುವ ಸಮಸ್ಯೆ ಆಗಿದೆ. ಇದು ದಿನೇಶ್ ಕಾರ್ತಿಕ್ ಅವರು ಹಾಗೂ ರಿಷಬ್ ಪಂತ್ ಅವರ ನಡುವೆ ಇರುವ ಪೈಪೋಟಿ ಆಗಿದೆ. ದಿನೇಶ್ ಕಾರ್ತಿಕ್ ಅವರು ಹಾಗೂ ರಿಷಬ್ ಪಂತ್ ಅವರು ಇಬ್ಬರು ಸಹ ಭಾರತ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ, ಇವರಿಬ್ಬರು ವಿಕೆಟ್ ಕೀಪರ್ ಗಳಾಗಿರುವುದೇನೋ ನಿಜ, ಆದರೆ ಇಬ್ಬರ ಪಾತ್ರ ಬೇರೆಯೇ ಇದೆ. ಹಾಗಾಗಿ ಇವರಿಬ್ಬರಲ್ಲಿ ಯಾರಿಗೆ ಅವಕಾಶ ಕೊಡಬೇಕು ಎನ್ನುವ ಗೊಂದಲ ಇದೆ. ರಿಷಬ್ ಪಂತ್ ಅವರು ಮಧ್ಯಮ ಕ್ರಮಾಂಕದ ಫ್ಲೋಟರ್ ಬ್ಯಾಟ್ಸನ್ ಆಗಿದ್ದಾರೆ, ಇತ್ತ ದಿನೇಶ್ ಕಾರ್ತಿಕ್ ಅವರು ಫಿನಿಷರ್ ಸ್ಥಾನಕ್ಕೆ ಅತ್ಯುತ್ತಮವಾಗಿದ್ದಾರೆ.

ಈ ಇಬ್ಬರು ಆಟಗಾರರ ನಡುವೆ ಯಾರನ್ನು ಆಯ್ಕೆ ಮಾಡಿ ಅವಕಾಶ ಕೊಡಬೇಕು ಎನ್ನುವ ಪ್ರಶ್ನೆಗೆ ಭಾರತ ತಂಡ ಬಹಳ ಬೇಗ ಉತ್ತರ ಕಂಡುಕೊಳ್ಳಬೇಕಿದೆ. ರಿಷನ್ ಪಂತ್ ಅವರಿಗೆ ಏಷ್ಯಾಕಪ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದರು ಸಹ ಅವರು ಅದನ್ನು ಉಪಯೋಗಿಸಿಕೊಂಡು ಒಳ್ಳೆಯ ಪ್ರದರ್ಶನ ನೀಡಿಲ್ಲ, ದಿನೇಶ್ ಕಾರ್ತಿಕ್ ಅವರಿಗೆ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲು ಹೆಚ್ಚಿನ ಅವಕಾಶವೇ ಸಿಕ್ಕಿಲ್ಲ. ಹಾಗಾಗಿ ಮುಂಬರುವ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರು ಉತ್ತಮವಾದ ಪ್ರದರ್ಶನ ನೀಡಬೇಕು. ವಿಶ್ವಕಪ್ ಗಿಂತ ಮೊದಲು ಬರುವ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ರಿಷಬ್ ಪಂತ್ ಅವರಿಗಿಂತ ಉತ್ತಮ ಎಂದು ಪ್ರೂವ್ ಮಾಡಿಕೊಂಡರೆ, ವಿಶ್ವಕಪ್ ನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ.

Comments are closed.