Neer Dose Karnataka
Take a fresh look at your lifestyle.

ಬಿಗ್ ಬಾಸ್ OTT ಯಲ್ಲಿ ಎಲ್ಲವನ್ನು ಹೇಳಿಕೊಂಡಿದ್ದ ಸೋಮಣ್ಣಗೆ ಮಾಜಿ ಪತ್ನಿಯಿಂದ ಬಂದಿದ್ದ ಮೆಸೇಜ್ ಏನು ಗೊತ್ತೇ??

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಕಳೆದ ವಾರ ಮುಗಿದಿದೆ, 42 ದಿನಗಳ ಈ ಓಟಿಟಿ ಸೀಸನ್ ಮುಕ್ತಯವಾಗಿ ಈ ವಾರ ಟಿವಿ ಸೀಸನ್ ಶುರುವಾಗಲಿದೆ. ಓಟಿಟಿ ಸೀಸನ್ ನಲ್ಲಿ 8 ಸ್ಪರ್ಧಿಗಳು ಫಿನಾಲೆ ವೀಕ್ ನಲ್ಲಿದ್ದರು ಅವರಲ್ಲಿ ಒಬ್ಬರು ಖ್ಯಾತ ನ್ಯೂಸ್ ನಿರೂಪಕ ಸೋಮಣ್ಣ ಮಾಚಿಮಾಡ ಅವರು. ಮಾಧ್ಯಮದಲ್ಲಿ ನಿರೂಪಣೆ ಮಾಡುವ ಮೂಲಕ ಫೇಮಸ್ ಆಗಿದ್ದ ಸೋಮಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆ ರೀತಿಯೇ ಇದ್ದರು ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಭಾವನಾತ್ಮಕವಾಗಿ ಹೀಗಿರುತ್ತಾರೆ ಎನ್ನುವುದು ಗೊತ್ತಾಯಿತು.

ಸೋಮಣ್ಣ ಅವರು ಬಿಗ್ ಬಾಸ್ ಮನೆಗೆ ಹೋದ ನಂತರ ಅವರ ವೈಯಕ್ತಿಕ ವೈವಾಹಿಕ ಜೇವನ, ಹೆಂಡತಿಯಿಂದ ದೂರವಾಗಿದ್ದು ಇದೆಲ್ಲದರ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದರು. ಅನೇಕ ಬಾರಿ ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ್ದರು. ತಾವು ಕೆಲಸ ಹಾಗೂ ಬೇರೆ ವಿಚಾರಗಳ ಬಗ್ಗೆ ಗಮನ ಹರಿಸಿ ಪತ್ನಿಯ ಜೊತೆಗಿನ ಸಂಬಂಧ ಹೀಗಾಯಿತು ಎಂದು ಬೇಸರ ಮಾಡಿಕೊಂಡಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸೋಮಣ್ಣ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ, ಅವರ ಮಾಜಿ ಪತ್ನಿಗೆ ಬಿಗ್ ಬಾಸ್ ಹಾಗೂ ಡ್ಯಾನ್ಸ್ ಶೋಗಳನ್ನು ನೋಡುವುದು ಅಂದ್ರೆ ತುಂಬಾ ಇಷ್ಟ ಈ ಹಿಂದೆ ತಾವು ಬಿಗ್ ಬಾಸ್ ಗೆ ಹೋಗುವ ಬಗ್ಗೆ ಆಗಾಗ ಮನೆಯಲ್ಲಿ ಚರ್ಚೆ ಆಗುತ್ತಿತ್ತು ಎಂದಿದ್ದಾರೆ ಸೋಮಣ್ಣ.

ಹಾಗೆಯೇ, ಬಿಗ್ ಬಾಸ್ ಗೆ ಬರುವ ಮುಂಚೆ ಆಪ್ತರಿಗೆ ಹೇಳಿ, ಆಕೆಗೂ ಕಾಲ್ ರಿಸೀವ್ ಮಾಡುತ್ತಾರೋ ಇಲ್ಲವೋ ಎಂದು ಕಾಲ್. ಮಾಡಿದಾಗ, ಅವರು ರಿಸೀವ್ ಮಾಡಿದ್ರಂತೆ ಆಗ ಈ ವಿಷಯ ತಿಳಿಸಿದಾಗ ಅವರು ಕೂಡ ತುಂಬಾ ಖುಷಿಪಟ್ಟು, ಬಿಗ್ ಬಾಸ್ ನಲ್ಲಿ ಚೆನ್ನಾಗಿ ಆಡಿ ಎಂದು ವಿಶ್ ಕೂಡ ಮಾಡಿದ್ದರಂತೆ. ಅಷ್ಟೇ ಅಲ್ಲದೆ, ಸೋಮಣ್ಣ ಅವರು ಆಕೆ ಫೋನ್ ರಿಸೀವ್ ಮಾಡುತ್ತಾರೋ ಇಲ್ಲವೋ ಎಂದು ಮೆಸೇಜ್ ಕೂಡ ಮಾಡಿದ್ದರಂತೆ, ಅದಕ್ಕೆ ಬಿಗ್ ಬಾಸ್ ನಲ್ಲಿ ಚೆನ್ನಾಗಿ ಆಡಿ ದೇವರು ನಿಮ್ಮ ಜೊತೆಯಲ್ಲಿದ್ದಾನೆ ಎಂದು ರಿಪ್ಲೈ ಮಾಡಿದ್ದರಂತೆ. ಆ ಒಂದು ರಿಪ್ಲೈ ಇಂದ ಇಷ್ಟು ಚೆನ್ನಾಗಿ ಆಡಿದರಂತೆ ಸೋಮಣ್ಣ. ಬಿಗ್ ಬಾಸ್ ಇಂದ ಹೊರಬಂದ ಬಳಿಕ ಅವರಿಗೆ ಕಾಲ್ ಅಥವಾ ಮೆಸೇಜ್ ಮಾಡಿಲ್ಲ, ಅವರ ಕರೆಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಅವರಿಗೆ ನಾನು ಆಡಿರುವ ಶೈಲಿ ಇಷ್ಟ ಆಗಿದ್ಯಾ ಅಥವಾ ನಾನು ಎಲ್ಲ ವಿಷಯ ಹಂಚಿಕೊಂಡೇ ಅಂತ ಬೇಸರ ಇದೆಯಾ ಗೊತ್ತಿಲ್ಲ.. ಎಂದಿದ್ದಾರೆ.

Comments are closed.